Site icon Vistara News

Hampi Ustav 2024 : ಫೆ. 2ರಿಂದ ಹಂಪಿ ಉತ್ಸವ; ಜೋಡಿ ಜಿರಾಫೆಗಳ ಮೋಡಿ

Hampi festival on February 2 3 and 4 pairs of giraffes arrives at Hampi Zoo

ವಿಜಯನಗರ: 2024ರ ಹಂಪಿ ಉತ್ಸವಕ್ಕೆ (Hampi Ustav 2024 ) ಬಿಹಾರದ ಚುಟ್ಕಿಗೆ ಮೈಸೂರಿನ ಶಂಕರ ಜೋಡಿಯಾಗುತ್ತಿದ್ದಾನೆ. ಮೈಸೂರು ಮೃಗಾಲಯದಿಂದ ಶಂಕರ ಹೆಸರಿನ ಜಿರಾಫೆ ಎಂಟ್ರಿ ಕೊಡುತ್ತಿದ್ದು, ಒಬ್ಬಂಟಿಯಾಗಿದ್ದ ಬಿಹಾರದ ಚುಟ್ಕಿ ಹೆಸರಿನ ಜಿರಾಫೆಗೆ (Hampi Zoo) ಜೋಡಿಯಾಗಲಿದೆ. ಹಂಪಿ ಉತ್ಸವಕ್ಕೆ ಬರುವ ಪ್ರವಾಸಿಗರಿಗೆ ಜೋಡಿ ಜಿರಾಫೆಗಳು (pairs of giraffes) ಮೋಡಿ ಮಾಡಲಿವೆ.

ಹಂಪಿ ಝೂಗೆ ಮೈಸೂರಿನ ಶಂಕರ ಹೆಸರಿನ ಗಂಡು ಜಿರಾಫೆ ಆಗಮನದಿಂದ‌ ಮತ್ತಷ್ಟು ಮೆರಗು ಬಂದಿದೆ. 2023ರ ಹಂಪಿ ಉತ್ಸತ ವೇಳೆ ಬಿಹಾರದ ಚುಟ್ಕಿಯನ್ನು ಹಂಪಿ ಝೂಗೆ ತರಲಾಗಿತ್ತು. ಇದೀಗ 2024ರ ಹಂಪಿ ಉತ್ಸವಕ್ಕೆ ಮೈಸೂರು ಮೃಗಾಲಯದಿಂದ ಶಂಕರನ ಆಗಮನವಾಗುತ್ತಿದೆ. ಹಂಪಿ ಝೂಗೆ ಬರುವ ಪ್ರವಾಸಿಗರಿಗೆ ಜೋಡಿ ಜಿರಾಫೆಗಳ ದರ್ಶನವಾಗಲಿದೆ.

ಆಮಂತ್ರಣ ಪತ್ರಿಕೆ ಬಿಡುಗಡೆ

ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 2, 3 ಹಾಗೂ 4ರಂದು ನಡೆಯಲಿದೆ. ಹಂಪಿ ಉತ್ಸವವನ್ನು ಜನೋತ್ಸವ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಹಂಪಿ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.

ಹಂಪಿ ಉತ್ಸವದಲ್ಲಿ ನಾಲ್ಕು ಭವ್ಯ ವೇದಿಕೆಗಳಲ್ಲಿ ವಿವಿಧ ಕಲೆಗಳ ಅನಾವರಣವಾಗಲಿದೆ. ಗಾಯತ್ರಿ ಪೀಠ, ಎದುರು ಬಸವಣ್ಣ, ಆನೆ ಸಾಲು ಒಂಟೆ ಸಾಲು, ಸಾಸುವೆಕಾಳು ಗಣಪ ಮುಂಭಾಗ ಸೇರಿ ನಾಲ್ಕು ಭವ್ಯ ವೇದಿಕೆ ನಿರ್ಮಾಣವಾಗಿದೆ.

ಯಾವ್ಯಾವ ದಿನ ಏನೆಲ್ಲ ಕಾರ್ಯಕ್ರಮಗಳಿವೆ?

-ಹಂಪಿ ಉತ್ಸವಕ್ಕೂ ಮೊದಲು ಜ. 31ರ ಸಂಜೆ 6ಕ್ಕೆ ತುಂಗಭದ್ರಾ ನದಿ ದಡದಲ್ಲಿ ತುಂಗಾರತಿ ನಡೆಯಲಿದೆ.
-ಹಂಪಿ ಉತ್ಸವಕ್ಕೂ ಮುನ್ನ ಫೆ. 1 ರಂದು ಹಂಪಿ ಬೈ ಸ್ಕೈ ಯಾನ ವ್ಯವಸ್ಥೆಯನ್ನೂ ಮಾಡಲಾಗಿದೆ. ಆಗಸದಲ್ಲಿ ಹಂಪಿ ಉತ್ಸವದ ವೈಭವನ್ನು ಕಣ್ತುಂಬಿಕೊಳ್ಳಬಹುದು.
-ಫೆ. 2ರಂದು ಸಿಎಂ ಸಿದ್ದರಾಮಯ್ಯರಿಂದ ಹಂಪಿ ಉತ್ಸವಕ್ಕೆ ಚಾಲನೆ ಸಿಗಲಿದ್ದು, ಗಾಯಕ ವಿಜಯ್ ಪ್ರಕಾಶ್ ತಂಡದಿಂದ ರಾತ್ರಿಯಿಡಿ ಸಂಗೀತ ರಸಮಂಜರಿ ಇರಲಿದೆ.
-ಫೆ. 3ಕ್ಕೆ ಸಂಗೀತ ನಿರ್ದೇಶಕ ಹರಿಕೃಷ್ಣ ತಂಡದಿಂದ ರಸಮಂಜರಿ
-ಫೆ. 4ಕ್ಕೆ ಸ್ಟಾರ್ ನಟರಾದ ದರ್ಶನ್, ಡಾಲಿ ಧನಂಜಯ ಸೇರಿ ಹಲವರು ನಟರು ಭಾಗಿಯಾಗಲಿದ್ದು, ಮನರಂಜನಾ ಕಾರ್ಯಕ್ರಮ ಇರಲಿದೆ.
-ಫೆ. 2ಕ್ಕೆ ಆನೆ ಸಾಲು, ಒಂಟೆ ಸಾಲು ಆವರಣದಲ್ಲಿ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು, ಹಂಪಿಯ ಮಾತಂಗ ಪರ್ವತ ಫಲಪುಷ್ಪ ಪ್ರದರ್ಶನ ಅನಾವರಣ ಆಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version