Site icon Vistara News

Hampi Utsav 2024: ಹಂಪಿ ಉತ್ಸವದಲ್ಲಿ ಅದ್ಧೂರಿಯಾಗಿ ನಡೆದ ಜಾನಪದ ವಾಹಿನಿ ಮೆರವಣಿಗೆ

janapada vahini procession at the Hampi Utsav

ಹೊಸಪೇಟೆ(ವಿಜಯನಗರ): ಹಂಪಿ ಉತ್ಸವ 2024 (Hampi Utsav 2024)ರ ಮೂರನೇ ದಿನವಾದ ಭಾನುವಾರ ಇಳಿ ಸಂಜೆಯ ವೇಳೆ ಜಾನಪದ ವಾಹಿನಿ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು.

ಹಂಪಿಯ ಶ್ರೀ ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಮೆರವಣಿಗೆಗೆ ಶಾಸಕ ಎಚ್.ಆರ್.ಗವಿಯಪ್ಪ ಚಾಲನೆ ನೀಡಿದರು.

ಮೆರವಣಿಗೆ ನಡೆದ ರಾಜಬೀದಿಯುದ್ದಕ್ಕೂ ಎಲ್ಲೆಲ್ಲೂ ಮೇಳೈಸಿದ ಕಲಾ ತಂಡಗಳ ವೈಭವ ಮತ್ತು ಕಲಾತಂಡಗಳ ಸಾಂಪ್ರದಾಯಿಕ ವಾದ್ಯಗಳ ನಾದವೂ ಮಾರ್ಗದುದ್ದಕ್ಕೂ ಪ್ರತಿಧ್ವನಿಸಿತು.

ಇದನ್ನೂ ಓದಿ: Hampi Utsav 2024: ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ; ಗಮನ ಸೆಳೆದ ವಿವಿಧ ತಳಿಗಳು

ಜಾನಪದ ವಾಹಿನಿಯಲ್ಲಿ ಡೊಳ್ಳು ಕುಣಿತ, ನಾದಸ್ವರ, ಕಹಳೆ ವಾದ್ಯ, ಸಮಾಳ, ನಂದಿಧ್ವಜ, ಮಂಗಳವಾದ್ಯ, ಜೆಂಡೆವಾದ್ಯ, ಸಿಂಗಾರಿ ಮೇಳ, ಕಂಸಾಳೆ, ಸುಡಗಾಡು ಕೈಚಳಕ ಚಮತ್ಕಾರ, ಸಂಸ್ಕೃತಿ ಜನಪದ ಕಲೆ, ಚಿಲಿಪಿಲಿಬೊಂಬೆ, ಹಲಗೆ ವಾದನ, ತಮಟೆ ವಾದನ, ಸೋಮನ ಕುಣಿತ, ಸಮಾಳ ಮತ್ತು ನಂದಿಕೋಲು, ಗಾರುಡಿ ಗೊಂಬೆ, ಕೋಲಾಟ, ನಗಾರಿ, ಹಂಪಾ ಪಟ್ಟಣ ಸುಡಗಾಡು, ಕೈಚಳಕ ಚಮತ್ಕಾರ, ಸಂಸ್ಕೃತಿ ಜಾನಪದ ಕಲೆ, ಮೋಹಿನಿ ಭಸ್ಮಾಸುರ ರೂಪಕ, ಹಗಲು ವೇಷ, ಕೀಲು ಕುದುರೆ, ಪೂಜಾ ಕುಣಿತ, ನಂದಿಧ್ವಜ ಮತ್ತು ಸಂಬಾಳ, ಹಲಗೆ ವಾದನ, ವೀರಗಾಸೆ, ಗೋಂಬೆಕುಣಿತ, ಚಿಲಿಪಿಲಿ ಗೊಂಬೆ, ವೀರಗಾಸೆ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು.

ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿ ಮೆರವಣಿಗೆಯು ಹಂಪಿಯ ಬಜಾರ್ ಮೂಲಕ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವೈಭವದಿಂದ ಜರುಗಿತು.

ಇದನ್ನೂ ಓದಿ: Midi Ring Fashion Trend: ಕೈ ಬೆರಳುಗಳನ್ನು ಸಿಂಗರಿಸಲು ಬಂತು ಮಿಡಿ ರಿಂಗ್ಸ್ !

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version