Site icon Vistara News

Vijayanagara News: ಮತದಾರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿಕೊಳ್ಳಿ- ಡಿಸಿ ಎಂ.ಎಸ್. ದಿವಾಕರ್

Meeting by Vijayanagara DC m s Diwakar at vijayanagara

ಹೊಸಪೇಟೆ (ವಿಜಯನಗರ): ವಿಶೇಷ ಮತದಾರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮತದಾರ ಪಟ್ಟಿಯಲ್ಲಿ ಮತದಾರರು (Voters) ತಮ್ಮ ಹೆಸರು ಪರಿಶೀಲನೆ ಮಾಡಿಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.

ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ -2024ಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದವರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನವರಿ 01 2024 ರ ಸಂಕ್ಷಿಪ್ತ ಮತದಾರ ಪಟ್ಟಿ ಪರಿಷ್ಕರಣೆಯು ಜುಲೈ 21 ರಿಂದ ಪ್ರಾರಂಭವಾಗಿ ಕರಡು ಮತದಾರ ಪಟ್ಟಿ ಮುದ್ರಣದವರೆಗೆ ವಿಜಯನಗರ ಜಿಲ್ಲೆಯ 88-ಹಡಗಲಿ, 89- ಹಗರಿಬೊಮ್ಮನಹಳ್ಳಿ, 90-ವಿಜಯನಗರ, 96-ಕೂಡ್ಲಿಗಿ, 104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳು ಒಳಗೊಂಡು 5,49,719 ಪುರುಷ ಮತದಾರರು, 5,50,045 ಮಹಿಳೆಯರು ಹಾಗೂ ಇತರೆ 142 ಸೇರಿ ಜಿಲ್ಲೆಯಲ್ಲಿ ಒಟ್ಟು 10,99,906 ಮತದಾರರಿದ್ದಾರೆ. ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ಒಟ್ಟು 1219 ಮತಗಟ್ಟೆಗಳಿದ್ದು, ಪ್ರಸ್ತುತ ಮತಗಟ್ಟೆ ನವೀಕರಣ ಬಳಿಕ ಒಟ್ಟು 1234 ಮತಗಟ್ಟೆಗಳಿವೆ. ಇದರಲ್ಲಿ 15 ಮತಗಟ್ಟೆಗಳನ್ನು ಹೆಚ್ಚುವರಿ ಮತಗಟ್ಟೆಗಳನ್ನಾಗಿ ಆಯೋಗದಿಂದ ಅನುಮೋದನೆ ನೀಡಲಾಗಿರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Job Alert: ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಹುದ್ದೆಗಳಿಗೆ ನ.6ರಿಂದ ಅರ್ಜಿ ಸಲ್ಲಿಸಿ

ಜಿಲ್ಲೆಯಲ್ಲಿ ಹೊಸದಾಗಿ ನೋಂದಣಿ ಮಾಡಿಸಿಕೊಂಡ ಮತದಾರರ ವಿವರದನ್ವಯ 14,239 ಗಂಡು, 16,755 ಹೆಣ್ಣು ಸೇರಿ ಒಟ್ಟು 30,993 ಮತದಾರರು. ನಮೂನೆ -7ರಲ್ಲಿ ಮರಣ, ಸ್ಥಳಾಂತರ, ಎರಡು ಕಡೆಯಿರುವ ಮತದಾರ ಹೆಸರುಗಳನ್ನು ಮತದಾರ ಪಟ್ಟಿಯಿಂದ ಒಟ್ಟು 7029 ಮತದಾರರನ್ನು ಕೈಬಿಡಲಾಗಿರುತ್ತದೆ. ನಮೂನೆ-8 ರ ಮೂಲಕ ತಿದ್ದುಪಡಿಯಲ್ಲಿ ಒಟ್ಟು 15,499 ಮತದಾರರನ್ನು ಸರಿಪಡಿಸಲಾಗಿರುತ್ತದೆ.

ಹೊಸದಾಗಿ 17,745 ಯುವ ಮತದಾರರ ಸೇರ್ಪಡೆ, 182 ವಿಕಲಚೇತನ ಮತದಾರರು ಮತ್ತು 397 ಸೇವಾ ಮತದಾರರ ನೋಂದಣಿ ಆಗಿರುತ್ತವೆ. ಕರಡು ಮತದಾರ ಪಟ್ಟಿ ಪುಚುರಪಡಿಸಿದ ನಂತರ ಮತದಾರ ಪಟ್ಟಿಯಲ್ಲಿ ಮತದಾರರು ತಮ್ಮ ಹೆಸರು ಪರಿಶೀಲನೆ ಮಾಡಿಕೊಳ್ಳಲು ಹಾಗೂ ಅದಕ್ಕೆ ಯಾವುದಾದರು ಆಕ್ಷೇಪಣೆಗಳಿದ್ದರೆ ಆಯೋಗದ ವೇಳಾಪಟ್ಟಿಯಂತೆ ಅ.27 ರಿಂದ ಡಿಸೆಂಬರ್ 09ರ ವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿರುತ್ತದೆ. ನಂತರ ಆಯೋಗದ ವೇಳಾ ಪಟ್ಟಿಯಂತೆ 2024ರ ಜನವರಿ 5ರಂದು ಅಂತಿಮ ಮತದಾರ ಪಟ್ಟಿಯನ್ನು ಪ್ರಚುರಪಡಿಸಲಾಗುವುದು ಎಂದು ತಿಳಿಸಿದರು.

ಆಯೋಗ ನಿಗದಿಪಡಿಸಿರುವ ವಿಶೇಷ ಮತದಾರ ನೋಂದಣಿ ಅಭಿಯಾನ ಕಾರ್ಯಕ್ರಮವನ್ನು ನವೆಂಬರ್ 18 ಮತ್ತು 19ರಂದು ಹಾಗೂ ಡಿಸೆಂಬರ್ 2 ಮತ್ತು 3ರಂದು ಜಿಲ್ಲೆಯ ಒಟ್ಟು 1234 ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ಬೆಳಿಗ್ಗೆ 10 ರಿಂದ ಸಾಯಂಕಾಲ 5 ಗಂಟೆವರೆಗೆ ಹಾಜರಿದ್ದು, ಕರಡು ಮತದಾರ ಪಟ್ಟಿಯ ನಂತರ ಹೊಸ ಅರ್ಜಿಗಳನ್ನು ಪಡೆಯಲಾಗುತ್ತದೆ. ನಿರಂತರವಾಗಿ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Foods For Brain Power: ಈ ಆಹಾರಗಳನ್ನು ನಿಮ್ಮ ಮಕ್ಕಳಿಗೆ ತಿನ್ನಿಸಿ, ನೆನಪಿನ ಶಕ್ತಿ ಹೆಚ್ಚಿಸಿ!

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Exit mobile version