Foods For Brain Power: ಈ ಆಹಾರಗಳನ್ನು ನಿಮ್ಮ ಮಕ್ಕಳಿಗೆ ತಿನ್ನಿಸಿ, ನೆನಪಿನ ಶಕ್ತಿ ಹೆಚ್ಚಿಸಿ! - Vistara News

ಆರೋಗ್ಯ

Foods For Brain Power: ಈ ಆಹಾರಗಳನ್ನು ನಿಮ್ಮ ಮಕ್ಕಳಿಗೆ ತಿನ್ನಿಸಿ, ನೆನಪಿನ ಶಕ್ತಿ ಹೆಚ್ಚಿಸಿ!

ದೇಹದಲ್ಲಿ ಸ್ವಲ್ಪವೇ ಜಾಗವನ್ನು (Foods for brain power) ಆಕ್ರಮಿಸಿಕೊಳ್ಳುವ ಮೆದುಳು ಮಾಡುವ ಕೆಲಸಗಳು ಮಾತ್ರ ವಿರಾಟ್‌ ಸ್ವರೂಪದ್ದು. ಇಂಥ ಮೆದುಳಿಗೆ ಸೂಕ್ತವಾದ ಗ್ರಾಸ ನೀಡಬೇಡವೇ? ಆಗ ಮಾತ್ರ ದೇಹ ಮತ್ತು ಮನಸ್ಸು ಚೈತನ್ಯಪೂರ್ಣವಾಗಿರುತ್ತದೆ. ಈ ಕುರಿತ ಉಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

Foods For Brain Power
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೆಲವು ಆಹಾರಗಳು (Foods for brain power) ಸ್ಮರಣಶಕ್ತಿಯನ್ನು ಉತ್ತೇಜಿಸಬಲ್ಲವು. ಮಾತ್ರವಲ್ಲ, ಒಟ್ಟಾರೆಯಾಗಿ ಮೆದುಳಿನ (foods that boost brain power) ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು. ಯೋಚನೆ, ಯೋಜನೆ, ಸೃಜನಶೀಲತೆ ಮುಂತಾದ ಬಹಳಷ್ಟನ್ನು ಪ್ರಚೋದಿಸಬಲ್ಲವು. ಹಾಗಾದರೆ ಎಂಥಾ ಆಹಾರಗಳು ವಿದ್ಯಾರ್ಥಿಗಳಿಗೆ ಅನುಕೂಲವಾದೀತು ನೋಡೋಣ. ದೇಹದಲ್ಲಿ ಸ್ವಲ್ಪವೇ ಜಾಗವನ್ನು ಆಕ್ರಮಿಸಿಕೊಳ್ಳುವ ಮೆದುಳು ಮಾಡುವ ಕೆಲಸಗಳು ಮಾತ್ರ ವಿರಾಟ್‌ ಸ್ವರೂಪದ್ದು. ಇಂಥ ಮೆದುಳಿಗೆ ಸೂಕ್ತವಾದ ಗ್ರಾಸ ನೀಡಬೇಡವೇ? ಆಗ ಮಾತ್ರ ದೇಹ ಮತ್ತು ಮನಸ್ಸು ಚೈತನ್ಯಪೂರ್ಣವಾಗಿರುತ್ತದೆ. ಓದುವ ಮಕ್ಕಳಿಗೆ ನೆನಪಿನ ಶಕ್ತಿ ಸರಿಯಾಗಿ ಬೆಳೆಯುವಲ್ಲಿಂದ ಹಿಡಿದು ವೃದ್ಧರ ನೆನಪು ಉಳಿಯುವಲ್ಲಿವರೆಗೆ ಮೆದುಳಿನ ಕ್ಷಮತೆ ಚೆನ್ನಾಗಿರಬೇಕು. ಹಾಗಾದರೆ ನೆನಪು ಚುರುಕು ಮಾಡುವ ಆಹಾರಗಳೂ (foods that boost brain power) ಉಂಟೇ ಎಂಬುದೀಗ ಪ್ರಶ್ನೆ.

ಉತ್ತರವೆಂದರೆ- ಹೌದು! ಕೆಲವು ಆಹಾರಗಳು ಸ್ಮರಣಶಕ್ತಿಯನ್ನು ಉತ್ತೇಜಿಸಬಲ್ಲವು. ಮಾತ್ರವಲ್ಲ, ಒಟ್ಟಾರೆಯಾಗಿ ಮೆದುಳಿನ (foods that boost brain power) ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು. ಯೋಚನೆ, ಯೋಜನೆ, ಸೃಜನಶೀಲತೆ ಮುಂತಾದ ಬಹಳಷ್ಟನ್ನು ಪ್ರಚೋದಿಸಬಲ್ಲವು. ಹಾಗಾದರೆ ಎಂಥಾ ಆಹಾರಗಳು ವಿದ್ಯಾರ್ಥಿಗಳಿಗೆ ಅನುಕೂಲವಾದೀತು? ಅವರ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸೀತು? ಅಂಥ ಕೆಲವು ಆಹಾರಗಳು ಇಲ್ಲಿವೆ-

fish

ಮೀನು

ಸಾಲ್ಮನ್‌ (ವಾಮೀನು), ಸೋಧಿ, ಭೂತಾಯಿ, ಗೆದರೆ, ಸಿಹಿ ನೀರಿನ ಟ್ರೌಟ್‌ಗಳು ಮುಂತಾದ ಮೀನುಗಳಲ್ಲಿ ಒಮೇಗಾ ೩ ಫ್ಯಾಟಿ ಆಮ್ಲ ಹೇರಳವಾಗಿದೆ. ಮೆದುಳಿನ ಅರ್ಧಕ್ಕರ್ಧ ಭಾಗ ಮಾಡಿರುವುದು ಕೊಬ್ಬಿನಿಂದ. ಈ ಕೊಬ್ಬಿನ ಹೆಚ್ಚಿನ ಭಾಗ ಒಮೇಗಾ ೩ ಫ್ಯಾಟ್‌ ಕೋಶಗಳಿಂದ ಆವರಿಸಿದೆ. ಹಾಗಾಗಿ ಮೆದುಳಿನ ಯೋಗಕ್ಷೇಮ ಚೆನ್ನಾಗಿರಬೇಕೆಂದರೆ ಒಮೇಗಾ ೩ ಸೇವನೆ ಕಡ್ಡಾಯ.

ಬ್ಲೂಬೆರ್ರಿ

ಆಂಥೋಸಯನಿನ್‌ಗಳಿಂದ ತುಂಬಿರುವ ಈ ಕಡುನೀಲಿ ಹಣ್ಣುಗಳು ದೇಹದಲ್ಲಿ ಉರಿಯೂತ ನಿವಾರಿಸುತ್ತವೆ. ಉರಿಯೂತ ಮತ್ತು ಆಕ್ಸಿಡೇಶನ್‌ ಹೆಚ್ಚಾಗುವುದರಿಂದ ಮೆದುಳಿಗೆ ಬೇಗ ವಯಸ್ಸಾಗುತ್ತದೆ. ಬ್ಲೂಬೆರ್ರಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿಗೆ ವಯಸ್ಸಾಗುವುದನ್ನು ಮುಂದೂಡಿ, ಮೆದುಳಿನ ಕೋಶಗಳ ನಡುವಿನ ಸಂವಹನವನ್ನು ಸುಧಾರಿಸುತ್ತವೆ

turmeric

ಅರಿಶಿನ

ಇದರಲ್ಲಿರುವ ಕರ್ಕುಮಿನ್‌ ಎಂಬ ಅಂಶ ನಿಜಕ್ಕೂ ಮಾಯಾಮದ್ದಿನಂತೆ ಕೆಲಸ ಮಾಡಬಲ್ಲದು. ಮೆದುಳಿಗೆ ಆವರಿಸುವ ಅಮೈಲಾಯ್ಡ್ ಪೊರೆಯನ್ನು ನಿವಾರಿಸುವಲ್ಲಿ ಅರಿಶಿನದ ಸಾಮರ್ಥ್ಯ ಬಹುದೊಡ್ಡದು. ಅಲ್‌ಜೈಮರ್ಸ್‌ ಇರುವ ರೋಗಿಗಳು ಸಹ ಕರ್ಕುಮಿನ್‌ ಪೂರಕ ಮಾತ್ರೆಗಳಿಗೆ ಉತ್ತಮ ಸ್ಪಂದನೆ ತೋರಿದ್ದಾರೆ. ದೇಹದಲ್ಲಿ ಸೆರೊಟೋನಿನ್‌ ಮತ್ತು ಡೋಪಮಿನ್‌ ಚೋದಕಗಳ ಮಟ್ಟವನ್ನು ಹೆಚ್ಚಿನ, ಖಿನ್ನತೆ ಆವರಿಸದಂತೆ ತಡೆಯುತ್ತದೆ. ಮಾತ್ರವಲ್ಲ, ಮೆದುಳಿನಲ್ಲಿ ಹೊಸ ಕೋಶಗಳ ಬೆಳವಣಿಯನ್ನು ಸಹ ಅರಿಶಿನದಲ್ಲಿರುವ ಕರ್ಕುಮಿನ್‌ ಉತ್ತೇಜಿಸುತ್ತದೆ.

ಬ್ರೊಕೊಲಿ

ವಿಟಮಿನ್‌ ಕೆ ಭರಪೂರ ಇರುವ ಈ ಹಸಿರು ತರಕಾರಿ ಮೆದುಳಿನ ಕ್ಷಮತೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಒಂದು ಕಪ್‌ ಬೇಯಿಸಿದ ಬ್ರೊಕೊಲಿಯಲ್ಲಿ, ಇಡೀ ದಿನಕ್ಕೆ ಸಾಕಾಗುವಷ್ಟು ಕೆ ಜೀವಸತ್ವ ದೊರೆಯುತ್ತದೆ. ಇದರಲ್ಲಿರುವ ಒಂದು ವಿಶಿಷ್ಟವಾದ ಲಿಪಿಡ್‌ ಮೆದುಳಿನ ಕೋಶಗಳ ಬೆಳವಣಿಗೆಯನ್ನು ಪ್ರಚೋದಿಸುತ್ತದೆ. ಇದಲ್ಲದೆ, ಬ್ರೊಕೊಲಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮೆದುಳಿಗೆ ಹಾನಿಯಾಗದಂತೆ ರಕ್ಷಿಸಬಲ್ಲವು

Pumpkin seed

ಕುಂಬಳಕಾಯಿ ಬೀಜ

ಇದರಲ್ಲಿರುವ ಮೆಗ್ನಿಶಿಯಂ, ಜಿಂಕ್‌, ಕಬ್ಬಿಣ ಮತ್ತು ತಾವ್ರದ ಸತ್ವಗಳು ಮೆದುಳಿನ ರಕ್ಷಕರಂತೆ ಕೆಲಸ ಮಾಡುತ್ತವೆ. ಜಿಂಕ್‌ ಕೊರತೆಯಾದರೆ, ಅಲ್‌ಜೈಮರ್ಸ್‌, ಪಾರ್ಕಿನ್ಸನ್‌ ಸೇರಿದಂತೆ ಗಂಭೀರವಾದ ನರರೋಗಗಳು ಅಮರಿಕೊಳ್ಳುತ್ತವೆ. ಕಲಿಕೆ ಮತ್ತು ನೆನಪಿನ ವೃದ್ಧಿಗೆ ಮೆಗ್ನೀಶಿಯಂ ಬೇಕೆಬೇಕು. ತಾಮ್ರ ಮತ್ತು ಕಬ್ಬಿಣದ ಕೊರತೆಗಳೂ ಸಹ ನೇರವಾಗಿ ಮೆದುಳಿನ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಈ ಎಲ್ಲಾ ಖನಿಜಗಳು ಹೇರಳವಾಗಿ ಕುಂಬಳ ಬೀಜದಲ್ಲಿ ದೊರೆಯುವುದರಿಂದ, ಒಂದಿಷ್ಟು ಬಾಯಾಡುವುದು ಒಳ್ಳೆಯದು

ಕಪ್ಪು ಚಾಕೊಲೇಟ್:

ಫ್ಲವನಾಯ್ಡ್‌, ಕೆಫೇನ್‌ ಮತ್ತು ಉತ್ಕರ್ಷಣ ನಿರೋಧಕಗಳಿಂಬ ತುಂಬಿದ ಕಪ್ಪು ಚಾಕಲೇಟ್‌ ಹೆಚ್ಚಿನ ಜನರಿಗೆ ಅಂಥ ಇಷ್ಟವಾಗುವುದಿಲ್ಲ. ಚಾಕಲೇಟ್‌ ಹೌದಾದರೂ ರುಚಿ ಸ್ವಲ್ಪ ಕಹಿ. ಹಾಲು ಬೆರೆಸಿದ ಚಾಕಲೇಟ್‌ಗಳಿಗಿಂತ ಅಧಿಕ ಪ್ರಮಾಣದಲ್ಲಿ ಡಾರ್ಕ್‌ ಚಾಕಲೇಟ್‌ಗಳು ಕೊಕೊ ಹೊಂದಿರುತ್ತವೆ. ಹಾಗಾಗಿ ಇದರಲ್ಲಿ ಫ್ಲವನಾಯ್ಡ್‌ಗಳೂ ಸಾಂದ್ರವಾಗಿರುತ್ತವೆ. ಕಲಿಕೆ ಮತ್ತು ನೆನಪನ್ನು ಹೆಚ್ಚಿಸುವ ಸಾಮರ್ಥ್ಯ ಇವುಗಳಿಗಿದೆ.

The seeds

ಬೀಜಗಳು

ವಾಲ್‌ನಟ್‌, ಬಾದಾಮಿಯಂಥ ಬೀಜಗಳಲ್ಲಿ ಒಮೇಗಾ ೩ ಫ್ಯಾಟಿ ಆಮ್ಲಗಳಿರುವುದರಿಂದ ಮೆದುಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಇದಲ್ಲದೆ, ವಿಟಮಿನ್‌ ಇ, ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳು ವಿಫುಲವಾಗಿ ಇರುವುದರಿಂದ, ನೆನಪನ್ನು ಹೆಚ್ಚಿಸಿ, ಮೆದುಳಿಗೆ ಹಾನಿಯಾಗದಂತೆ ಕಾಪಾಡುತ್ತವೆ.

ಇದಲ್ಲದೆ, ವಿಟಮಿನ್‌ ಬಿ6, ಬಿ12, ಫೋಲೇಟ್‌ ಮತ್ತು ಕೋಲಿನ್‌ ಇರುವ ಮೊಟ್ಟೆ, ವಿಟಮಿನ್‌ ಸಿ ಸಾಂದ್ರವಾಗಿರುವ ಕಿತ್ತಳೆ ಹಣ್ಣು, ಕಾಫಿ, ಗ್ರೀನ್‌ ಟೀ ಮುಂತಾದ ಹಲವಾರು ಆಹಾರಗಳು ನೆನಪಿನ ಶಕ್ತಿ ಹೆಚ್ಚಳಕ್ಕೆ, ಮೆದುಳನ್ನು ಸಶಕ್ತವಾಗಿ ಇರಿಸುವುದಕ್ಕೆ ಸಹಕಾರ ನೀಡುವಂಥವು. ಮುಖ್ಯವಾಗಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿರುವ ಆಹಾರಗಳು ಮೆದುಳನ್ನು ಘಾಸಿಗೊಳ್ಳುವುದರಿಂದ ಕಾಪಾಡಬಲ್ಲವು. ಸ್ಮರಣಶಕ್ತಿ ವೃದ್ಧಿಸಿ, ಏಕಾಗ್ರತೆ ಮತ್ತು ಕಲಿಕೆಯನ್ನು ಹೆಚ್ಚಿಸುವ ಉದ್ದೇಶವಿದ್ದರೆ ಈ ಆಹಾರಗಳು ಪೂರಕ.

ಇದನ್ನೂ ಓದಿ: Health Tips: ನಿತ್ಯ 20 ನಿಮಿಷವೂ ದೈಹಿಕ ಚಟುವಟಿಕೆ ನಡೆಸುವುದಿಲ್ಲವೆ? ಹಾಗಾದರೆ ಅಪಾಯ ಖಚಿತ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಆರೋಗ್ಯ

Eyes Care While Studying: ಪರೀಕ್ಷೆಯ ದಿನಗಳಲ್ಲಿ ಕಣ್ಣಿನ ಕಾಳಜಿ ಹೀಗಿರಲಿ…

ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಗಳಿವು. ದೇಹ ಮತ್ತು ಮನಸ್ಸಿನ ಒತ್ತಡದ ಜೊತೆಗೆ ಕಣ್ಣಿಗೂ ಬಹಳ ಶ್ರಮವಾಗುವ ಸಮಯವಿದು. ಪರೀಕ್ಷೆಯ ದಿನಗಳಲ್ಲಿ (eyes care while studying) ನೇತ್ರಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಏನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು? ಇಲ್ಲಿದೆ ಉಪಯುಕ್ತ ಮಾಹಿತಿ.

VISTARANEWS.COM


on

Eyes Care While Studying
Koo

ಪರೀಕ್ಷೆಯ ಋತು ಬಂತು. ಈ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಒತ್ತಡಗಳಿರುತ್ತವೆ. ರಾತ್ರಿ ನಿದ್ದೆಗೆಟ್ಟು ಓದಬೇಕು ಎನ್ನುವ ದೈಹಿಕ ಒತ್ತಡ, ಹೆಚ್ಚಿನ ಅಂಕಗಳು ಬೇಕು ಎನ್ನುವ ಮಾನಸಿಕ ಒತ್ತಡ, ಇವೆಲ್ಲವುಗಳ ಮೊತ್ತವಾಗಿ ಒತ್ತಡ ಹೆಚ್ಚುವುದು ಕಣ್ಣುಗಳ ಮೇಲೆ. ಪುಸ್ತಕದಲ್ಲಿರುವುದು ಮಸ್ತಕಕ್ಕೆ ಇಳಿಯಬೇಕೆಂದರೆ ಕಣ್ಣಿನ ಶ್ರಮವೂ ಅಗತ್ಯ. ಈಗಿನ ಹೈಬ್ರಿಡ್‌ ವ್ಯಾಸಂಗದ ಮಾದರಿಗಳಲ್ಲಿ ದಿನವೂ ಗಂಟೆಗಟ್ಟಲೆ ಸ್ಕ್ರೀನ್‌ ನೋಡದೆ ದಾರಿಯಿಲ್ಲ. ಅಂತೂ, ಕಣ್ಣಿಗೆ ತೊಂದರೆ ತಪ್ಪಿದ್ದಲ್ಲ. ಹಾಗಾದರೆ ಪರೀಕ್ಷೆ ಮುಗಿಯುವಷ್ಟರಲ್ಲಿ ಕಣ್ಣಿನ ಕತೆಯೂ ಮುಗೀತು ಎಂಬಂತಾಗದೆ ಇರಲು ಏನು ಮಾಡಬೇಕು? ಪರೀಕ್ಷೆಯ ದಿನಗಳಲ್ಲಿ (eyes care while studying) ಕಣ್ಣಿನ ಕಾಳಜಿ ಮಾಡುವುದು ಹೇಗೆ?

Hardworking student studying

ಸಮಯ ಬದಲಿಸಿ

ರಾತ್ರಿಯ ಸಮಯ ಹೆಚ್ಚಿನ ಓದು ಅನಿವಾರ್ಯವಾದರೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಹಗಲಿನ ಸ್ವಚ್ಛ ಬೆಳಕಿನಲ್ಲಿ ಗೆಜೆಟ್‌ಗಳಲ್ಲಿ ಕೆಲಸ ಮಾಡಿ, ರಾತ್ರಿಯ ಬೆಳಕಿನಲ್ಲಿ ಪುಸ್ತಕದ ಕೆಲಸಗಳಲ್ಲಿ ಕೆಲಸ ಮುಗಿಸಿಕೊಳ್ಳಿ. ರಾತ್ರಿಯ ಹೊತ್ತು ಪರದೆಗಳನ್ನು ನೋಡುವುದು ನಿದ್ದೆಯ ಗುಣಮಟ್ಟವನ್ನು ತಗ್ಗಿಸುತ್ತದೆ. ನಿದ್ದೆಗೆಡುವ ಈ ದಿನಗಳಲ್ಲಿ, ಮಲಗಿದಾಗಲೂ ನಿದ್ದೆ ಬರದಂತಾದರೆ ಆರೋಗ್ಯ… ದೇವ್ರೇ ಗತಿ!

Studying deep into the night

ಆದ್ಯತೆ ನೀಡಿ

ಓದುವುದಕ್ಕೆ ಆನ್‌ಲೈನ್‌ ಆಯ್ಕೆಗಿಂತ ಪುಸ್ತಕ ಹಿಡಿಯುವುದಕ್ಕೆ ಆದ್ಯತೆ ನೀಡಿ. ಅನಿವಾರ್ಯವಾದ್ದನ್ನು ಮಾತ್ರವೇ ಗೆಜೆಟ್‌ ಮೂಲಕ ಮಾಡಿ. ಕೈಯಲ್ಲಿ ಪುಸ್ತಕವಿದ್ದರೂ, ಅದನ್ನು ಬದಿಗಿರಿಸಿ, ಆಪ್‌ಗಳಲ್ಲಿ ಪಠ್ಯಗಳನ್ನು ಓದುವ ಅಭ್ಯಾಸವನ್ನು ಕಡಿಮೆ ಮಾಡುವುದು ಎಲ್ಲ ದೃಷ್ಟಿಯಿಂದಲೂ ಸೂಕ್ತ. ಇದರಿಂದ ಕಣ್ಣುಗಳ ಮೇಲಿನ ಒತ್ತಡವನ್ನು ಕೊಂಚ ಕಡಿಮೆ ಮಾಡಬಹುದು. ಹನಿಗೂಡಿದರೆ ಹಳ್ಳ ಎಂಬಂತೆ, ಇಷ್ಟಿಷ್ಟಾಗಿಯೇ ಕಣ್ಣುಗಳ ಮೇಲಿನ ಒತ್ತಡ ಅತೀವವಾಗಿ ಹೆಚ್ಚುವುದನ್ನು ತಡೆಯಬಹುದು.

Cramming for exams

ಭಂಗಿ ಸರಿಯಿರಲಿ

ಓದಲು ಕುಳಿತುಕೊಳ್ಳುವಾಗಿನ ಭಂಗಿಯನ್ನು ಸರಿಯಾಗಿರಿಸಿಕೊಳ್ಳಿ. ಕೈಯಲ್ಲಿ ಪುಸ್ತಕ ಹಿಡಿದು ಬಿದ್ದುಕೊಳ್ಳುವುದು, ಟ್ಯಾಬ್‌ ಹಿಡಿದು ಮಂಚದ ಮೇಲೆ ಉರುಳಿಕೊಳ್ಳುವುದು- ಇಂಥವುಗಳಿಂದ ಕಣ್ಣುಗಳ ಮೇಲಿನ ಒತ್ತಡ ಹೆಚ್ಚುತ್ತದೆ. ಟ್ಯಾಬ್ಲೆಟ್‌ ಅಥವಾ ಸ್ಮಾರ್ಟ್‌ ಫೋನ್‌ನಲ್ಲಿ ಓದುವ ಬದಲು ಲ್ಯಾಪ್‌ಟಾಪ್‌ ಬಳಸುವುದು ಕ್ಷೇಮ. ಇದನ್ನಾದರೂ ಸ್ವಚ್ಛ ಬೆಳಕಿನಲ್ಲಿ ಸರಿಯಾದ ಭಂಗಿಯಲ್ಲಿ ಹಿಡಿದು ಕುಳಿತುಕೊಳ್ಳಿ. ಮೇಮೇಲೆ ಇರಿಸುವುದಕ್ಕಿಂತ ಸರಿಯಾದ ಮೇಜು ಉಪಯೋಗಿಸಿ. ಇದರಿಂದ ಕಣ್ಣುಗಳು ಮಾತ್ರವಲ್ಲ, ತಲೆ, ಕುತ್ತಿಗೆ ಮತ್ತು ಬೆನ್ನಿನ ಮೇಲಿನ ಒತ್ತಡವನ್ನೂ ತಪ್ಪಿಸಬಹುದು.

20-20-20

ಅಂದರೆ ಪ್ರತಿ 20 ನಿಮಿಷಗಳಿಗೆ ಒಮ್ಮೆ ಕನಿಷ್ಠ 20 ಸೆಕೆಂಡುಗಳ ಕಾಲ 20 ಅಡಿ ದೂರದ ವಸ್ತುವನ್ನು ದಿಟ್ಟಿಸಿ ನೋಡಿ. ಇದರಿಂದ ಕಣ್ಣುಗಳಿಗೆ ಅಗತ್ಯವಾದ ವಿಶ್ರಾಂತಿ ಪದೇಪದೆ ನೀಡುತ್ತಿರಬಹುದು. ಇದು ಕಣ್ಣಿನ ಸ್ನಾಯುಗಳಿಗೆ ಸರಿಯಾದ ಬಿಡುವನ್ನೂ ನೀಡುತ್ತದೆ, ದೃಷ್ಟಿಯನ್ನು ಕಾಪಾಡುತ್ತದೆ.

drink water

ನೀರು

ದಿನಕ್ಕೆ ಮೂರು ಲೀ. ನೀರು ಕುಡಿಯುವುದನ್ನು ತಪ್ಪಿಸುವಂತಿಲ್ಲ. ಓದುವ ಭರದಲ್ಲಿ ಇದನ್ನು ತಪ್ಪಿಸಿದರೆ ಹಲವು ರೀತಿಯಲ್ಲಿ ಒದ್ದಾಡಬೇಕಾಗುತ್ತದೆ. ಆಗಾಗ ಕಣ್ಣು ಮಿಟುಕಿಸುತ್ತಿರಿ. ಇದರಿಂದ ಕಣ್ಣು ಶುಷ್ಕವಾಗದೆ ತೇವವನ್ನು ಕಾಪಾಡಬಹುದು. ಕಣ್ಣಿನ ಸ್ವಚ್ಛತೆಗೂ ಇದು ಅನುಕೂಲ. ಪರದೆಯನ್ನು ತದೇಕದೃಷ್ಟಿಯಿಂದ ನೋಡುತ್ತಿದ್ದರೆ ಕಣ್ಣು ಒಣಗುವುದು ಹೆಚ್ಚು. ಅಂಥ ಸಂದರ್ಭಗಳಲ್ಲಿ 20-20-20 ನಿಮಯವನ್ನು ಕಟ್ಟುನಿಟ್ಟಾಗಿ ಪಾಲಿಸಿ.

ನೀಲಿ ಫಿಲ್ಟರ್‌

ಬಹಳ ಹೊತ್ತು ಲ್ಯಾಪ್‌ಟಾಪ್‌ ಬಳಕೆ ಅನಿವಾರ್ಯ ಎಂದಾದರೆ, ಪರದೆಗಳಿಂದ ಸೂಸುವ ನೀಲಿ ಬೆಳಕನ್ನು ತಡೆಯುವಂಥ ಫಿಲ್ಟರ್‌ಗಳನ್ನು ಬಳಸಿ. ಕತ್ತಲೆಯಲ್ಲಂತೂ ಓದಲೇಬೇಡಿ. ಇದರಿಂದ ದೃಷ್ಟಿಗೆ ಆಪತ್ತು ಬರುವುದು ಖಂಡಿತ. ಓದುವ ಒತ್ತಡ ಎಷ್ಟೇ ಇದ್ದರೂ, ದಿನಕ್ಕೆ ಕನಿಷ್ಟ ಆರು ತಾಸಿನ ನಿದ್ದೆ ಬೇಕೆಬೇಕು. ಇದು ಕಣ್ಣಿಗಷ್ಟೇ ಅಲ್ಲ, ದೇಹ ಸ್ವಾಸ್ಥ್ಯಕ್ಕೆ ಹಿತ.

beautiful asian young woman eating healthy food Sleep Tips

ಆಹಾರ

ಸತ್ವಯುತ ಆಹಾರವನ್ನೇ ಸೇವಿಸಿ. ಆಹಾರದಲ್ಲಿ ಸಾಕಷ್ಟು ಸಂಕೀರ್ಣ ಪಿಷ್ಟಗಳು, ನಾರು ಮತ್ತು ಪ್ರೊಟೀನ್‌ ಇರಲಿ. ವಿಟಮಿನ್‌ ಎ ಮತ್ತು ಡಿ ಹೆಚ್ಚಿರುವ ಆಹಾರಗಳು ಈಗ ಕಣ್ಣಿನ ಕ್ಷೇಮಕ್ಕಾಗಿ ಬೇಕು. ಖನಿಜಗಳಿಗಾಗಿ ಬೀಜಗಳು, ಹಸಿರು ಸೊಪ್ಪುಗಳು, ಹಾಲು, ಮೊಟ್ಟೆ ಮತ್ತು ಇಡೀ ಧಾನ್ಯಗಳನ್ನು ಬಳಸಿ. ಋತುಮಾನದ ಹಣ್ನುಗಳನ್ನು ತಿನ್ನಿ. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಇದನ್ನೂ ಓದಿ: Harmful Effects Of Cotton Candy: ಕಾಟನ್‌ ಕ್ಯಾಂಡಿಯ ಅಸಲಿ ಬಣ್ಣ ಭಯಾನಕ!

Continue Reading

ಪ್ರಮುಖ ಸುದ್ದಿ

Private Laboratory: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ಒಳಗಿನ ಖಾಸಗಿ ಲ್ಯಾಬ್‌ ಬಂದ್‌; ಸರ್ಕಾರದ ಖಡಕ್‌ ಆದೇಶ!

Private Laboratory: ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡುವಂತಿಲ್ಲ. ಇಷ್ಟಾದರೂ ಕೆಲವು ಖಾಸಗಿ ಲ್ಯಾಬೋರೇಟರಿಗಳು ತಲೆ ಎತ್ತಿವೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಈ ಹಿನ್ನೆಲೆಯುಲ್ಲಿ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

VISTARANEWS.COM


on

Private Laboratory within 200 metres of government hospital closed
Koo

ಬೆಂಗಳೂರು: ಸರ್ಕಾರಿ ಆಸ್ಪತ್ರೆಯಿಂದ 200 ಮೀಟ‌ರ್ ಅಂತರದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು (Private Laboratory) ಪರಿಶೀಲನೆ ನಡೆಸಿ, ಹಾಲಿ ಇರುವ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದಲ್ಲಿ ಅವುಗಳನ್ನು ಮುಚ್ಚಿಸುವಂತೆ ರಾಜ್ಯ ಸರ್ಕಾರ (Karnataka Government order) ಆದೇಶ ನೀಡಿದೆ. ಖಾಸಗಿ ಲ್ಯಾಬ್‌ಗಳ ಕುರಿತು ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಈ ಮೂಲಕ ಅನಧಿಕೃತವಾಗಿ ಖಾಸಗಿ ಪ್ರಯೋಗಾಲಯಗಳನ್ನು ನಡೆಸುತ್ತಿದ್ದವರಿಗೆ ಶಾಕ್ ಕೊಡಲಾಗಿದೆ.

ಈಗಾಗಲೇ ಇರುವ ಕಾಯ್ದೆಯಂತೆ (2019ರ ಆದೇಶದನ್ವಯ) ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡುವಂತಿಲ್ಲ. ಇಷ್ಟಾದರೂ ಕೆಲವು ಖಾಸಗಿ ಲ್ಯಾಬೋರೇಟರಿಗಳು ತಲೆ ಎತ್ತಿವೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಈ ಹಿನ್ನೆಲೆಯುಲ್ಲಿ ಈಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.

ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಕೆ.ಪಿ.ಎಂ.ಇ ಅಧಿನಿಯಮ 2017 ರ ಸೆಕ್ಷನ್ (22) ರಸ್ತೆಯ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನವನ್ನು ನೀಡಿದ್ದಾರೆ. ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು, ನೋಂದಣಿ ಮತ್ತು ಕುಂದು ನಿವಾರಣಾ ಪ್ರಾಧಿಕಾರ, ಕೆ.ಪಿ.ಎಂ.ಇಗೆ ಈ ನಿರ್ದೇಶನವನ್ನು ನೀಡಲಾಗಿದೆ. ಈ ಕುರಿತು ಕೈಗೊಂಡ ಕ್ರಮದ ಬಗ್ಗೆ ಮಾರ್ಚ್‌ 30ರೊಳಗೆ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಆದೇಶದಲ್ಲೇನಿದೆ?

ಕೆ.ಪಿ.ಎಂ.ಇ ತಿದ್ದುಪಡಿ ಅಧಿನಿಯಮ, 2017ರ ಸೆಕ್ಷನ್ 6ರನ್ವಯ, ದಿನಾಂಕ 04-04-2019 ರಿಂದ ಜಾರಿಗೆ ಬರುವಂತೆ, ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ/ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪ್ರವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರ್ ದೂರದೊಳಗೆ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಕ್ಕೆ ಅನುಮತಿಯನ್ನು ನೀಡತಕ್ಕದ್ದಲ್ಲ.

ಆದಾಗ್ಯೂ, ಕೆಲವು ಅನಧಿಕೃತ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, ಸರ್ಕಾರಿ ಆಸ್ಪತ್ರೆಯಿಂದ 200 ಮೀಟ‌ರ್ ಅಂತರದೊಳಗೆ ಕಾರ್ಯ ನಿರ್ವಹಿಸುತ್ತಿರುವ ಸಂಬಂಧ ಈ ಆಯುಕ್ತಾಲಯಕ್ಕೆ ದೂರು ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ, ತಮ್ಮ ಕಾರ್ಯ ವ್ಯಾಪ್ತಿಗೆ ಒಳಪಡುವ ಮತ್ತು ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್‌ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸ್ಥಳ ಪರಿಶೀಲನೆ ಮಾಡುವಂತೆ ಮತ್ತು ಅವುಗಳು ಕೆ.ಪಿ.ಎಂ.ಇ ಕಾಯ್ದೆ ಅಥವಾ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದಲ್ಲಿ ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಅಂತಹ ಪ್ರಯೋಗಾಲಯಗಳನ್ನು ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ & ಕುಂದು ಕೊರತೆ ನಿವಾರಣಾ ಪ್ರಾಧಿಕಾರ) & ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿತ್ತು. ಹಾಗಿದ್ದರೂ ಸದರಿ ಆದೇಶದಂತೆ ಯಾವುದೇ ಜಿಲ್ಲೆಗಳು ಕಟ್ಟು ನಿಟ್ಟಿನ ಕ್ರಮವಹಿಸದೇ ಇರುವುದನ್ನು ಗಮನಿಸಲಾಗಿ, ಈ ಕೆಳಗಿನಂತೆ ಆದೇಶಿಸಿದೆ.

ಇದನ್ನೂ ಓದಿ: Job News: ಶೀಘ್ರ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ ನೇಮಕ; ವೇತನದಲ್ಲೂ ಹೆಚ್ಚಳ!

ದಿನಾಂಕ 04.04.2019 ದ ನಂತರದಿಂದ ಯಾವುದೇ ಹೊಸ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು, “ಸರ್ಕಾರಿ ಆಸ್ಪತ್ರೆಯಿಂದ / ರಾಜ್ಯ ಸರ್ಕಾರ / ಕೇಂದ್ರ ಸರ್ಕಾರ / ಸ್ಥಳೀಯ ನಿಕಾಯಗಳು ಒಡೆತನ ಹೊಂದಿರುವ/ ನಿಯಂತ್ರಣ ಹೊಂದಿರುವ ಸೊಸೈಟಿ ಅಥವಾ ನ್ಯಾಸ / ಸ್ವಾಯತ್ತ ಸಂಸ್ಥೆಯಿಂದ ಪ್ರವರ್ತಿಸಲಾದ ಅಥವಾ ನಿರ್ವಹಿಸಲಾದ ಆಸ್ಪತ್ರೆಯಿಂದ 200 ಮೀಟರ್‌ಗಳ ದೂರದ ಒಳಗೆ ಕಾರ್ಯನಿರ್ವಹಿಸುತ್ತಿದ್ದಲ್ಲಿ, ಅಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳನ್ನು ಕೆ.ಪಿ.ಎಂ.ಇ ಅಧಿನಿಯಮ 2007 ರ ಸೆಕ್ಷನ್ (22) ರನ್ವಯ ಮುಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ.ಪಿ.ಎಂ.ಇ ಯ ಎಲ್ಲ ತಾಲೂಕು ಆರೋಗ್ಯ ಅಧಿಕಾರಿಗಳು, ಪ್ರಾಧಿಕೃತ ಅಧಿಕಾರಿಗಳು, ಕೆ.ಪಿ.ಎಂ.ಇ ಇವರಿಗೆ ಆದೇಶಿಸಲು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು (ಅಧ್ಯಕ್ಷರು, ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ) ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮತ್ತೊಮ್ಮೆ ನಿರ್ದೇಶಿಸಿದೆ. ಹಾಗೂ ಮೊಹರು ಬಂದ್‌ ಮಾಡಲಾದಂತಹ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳ ಸಂಪೂರ್ಣ ಕ್ರೋಢೀಕೃತ ವಿವರವನ್ನು ದಿನಾಂಕ: 30.03.2024 ರೊಳಗೆ dd2medical@gmail.com ಗೆ ತಪ್ಪದೆ ರವಾನಿಸಲು ಎಲ್ಲ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದೆ” ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Continue Reading

ಆರೋಗ್ಯ

Homemade Protein Smoothie: ಬೇಸಿಗೆಗೆ ಬೇಕು ತಂಪಾದ ಪ್ರೊಟೀನ್‌ ಸ್ಮೂದಿಗಳು

ಬೇಸಿಗೆಯಲ್ಲಿ ತಿನ್ನುವುದೇ ಬೇಡ ಎನಿಸಬಹುದು. ಹಾಗೆಂದು ಬರೀ ನೀರು ಕುಡಿಯುತ್ತ ಉಪವಾಸ ಇರಲಾದೀತೆ? ಬದಲಿಗೆ, ಒಂದಿಷ್ಟು ಆರೋಗ್ಯಕರ ಸ್ಮೂದಿಗಳನ್ನು (Homemade protein smoothie) ಮಾಡಿಕೊಂಡರೆ ದಾಹವೂ ತಣಿಯುತ್ತದೆ, ಹೊಟ್ಟೆಯೂ ತುಂಬುತ್ತದೆ.

VISTARANEWS.COM


on

Homemade Protein Smoothie
Koo

ಬೇಸಿಗೆ ಬಂತೆಂದರೆ ಮುಗಿಯದ ದಾಹ. ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯುವುದಿಲ್ಲ. ಇದರಲ್ಲೇ ಹೊಟ್ಟೆ ತುಂಬಿದಂತಾಗಿ ಸುಸ್ತು, ಆಯಾಸ ಶುರುವಾಗುತ್ತದೆ. ಇದಕ್ಕಾಗಿ ನಾನಾ ರೀತಿಯ ಆರೋಗ್ಯಕರ ಪೇಯಗಳನ್ನು ಹುಡುಕಿಕೊಳ್ಳದಿದ್ದರೆ, ಬೇಸಿಗೆಯಲ್ಲಿ ಅಕಾರಣವಾಗಿ ದಣಿಯುವುದು ಖಚಿತ. ಮಕ್ಕಳಿಗಂತೂ ಬೆಳಗ್ಗೆ ಏಳುತ್ತಿದ್ದಂತೆಯೇ ಸೆಕೆ ಎನಿಸಿ, ತಿಂಡಿ ಬೇಡ ಎನ್ನುವುದೂ ಇದೆ. ಇಂಥ ಸಂದರ್ಭಗಳಲ್ಲಿ ನೆರವಿಗೆ ಬರುವುದು ತರಹೇವಾಗಿ ಸ್ಮೂದಿಗಳು. ಈ ಸ್ಮೂದಿಗಳಿಗೆ ಹಲವು ರೀತಿಯಲ್ಲಿ ಪ್ರೊಟೀನ್‌ ಅಂಶಗಳನ್ನು ಸೇರಿಸುತ್ತಾ ಬಂದರೆ ದಾಹವೂ ಇಂಗುತ್ತದೆ, ಹೊಟ್ಟೆಯೂ ತುಂಬುತ್ತದೆ. ಸ್ಮೂದಿಗಳನ್ನು ತಯಾರಿಸುವಾಗ (Homemade protein smoothie) ಹೆಚ್ಚುವರಿ ಸಕ್ಕರೆಯನ್ನು ಸೇರಿಸದಂತೆ ಎಚ್ಚರ ವಹಿಸಬೇಕು. ಹಾಗಿಲ್ಲದಿದ್ದರೆ ತೂಕ ಹೆಚ್ಚುವುದರ ಜೊತೆಗೆ ಅಧಿಕ ಸಕ್ಕರೆಯಿಂದಾಗಿ ದಾಹವೂ ಹೆಚ್ಚುತ್ತದೆ. ಸಕ್ಕರೆಯಂಶದ ಬದಲು ನಾರು ಮತ್ತು ಪ್ರೊಟೀನ್‌ ಸೇರಿಸುತ್ತಾ ಬಂದರೆ ಹೆಚ್ಚು ಸಮಯದವರೆಗೆ ಹಸಿವಾಗದಂತೆ ತಡೆಯುವುದೂ ಸಾಧ್ಯ. ಸ್ಮೂದಿಗಳಿಗೆ ಪ್ರೊಟೀನ್‌ ಪೂರಕಗಳನ್ನು ಸೇರಿಸುವುದು ಸುಲಭದ ಕೆಲಸವೇನೋ ಹೌದು. ಆದರೆ ಅವುಗಳ ಬದಲಿಗೆ ನಿಸರ್ಗದತ್ತ ವಸ್ತುಗಳನ್ನೇ ಆಯ್ದುಕೊಂಡರೆ ಆರೋಗ್ಯ ಕ್ಷೇಮ. ಹಾಗಾದರೆ ಏನು ಮಾಡಬಹುದು?

ಹಾಲು, ಮೊಸರು

ಹೆಚ್ಚಿನ ಬಾರಿ ಸ್ಮೂದಿಗೆ ದಪ್ಪನೆಯ ಹಾಲು ಸೇರಿಸುವ ಕ್ರಮವಿರುತ್ತದೆ. ಬೆಳಗಿನ ತಿಂಡಿಯ ಬದಲಿಗೆ ಸ್ಮೂದಿ ಹೀರುವ ಅಭ್ಯಾಸವಿದ್ದರೆ, ಜೊತೆಗೆ ಹಾಲು ಸೇರಿಸಿಕೊಳ್ಳುವುದು ಆರೋಗ್ಯಕರ ಆಯ್ಕೆ. ಇದರಿಂದ ಪೇಯದ ಪ್ರೊಟೀನ್‌ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬಹುದು. ಆದರೆ ಹುಳಿ ಹಣ್ಣುಗಳ ಸ್ಮೂದಿಯಲ್ಲಿ ಹಾಲು ಸೇರಿಸಲಾಗದು. ಅಂಥ ಸಂದರ್ಭದಲ್ಲಿ ಹುಳಿಯಿಲ್ಲದ ಮೊಸರು ಸೇರಿಸುವುದು ಸೂಕ್ತ. ಇದಕ್ಕಾಗಿ ಸಕ್ಕರೆಭರಿತ ಫ್ಲೇವರ್ಡ್‌ ಯೋಗರ್ಟ್‌ ಗಳನ್ನು ಆಶ್ರಯಿಸಬೇಕಿಲ್ಲ. ಮನೆಯಲ್ಲಿರುವ ಮಾಮೂಲಿ ಮೊಸರೇ ಸಾಕಾಗುತ್ತದೆ. ಆ ಮೊಸರು ಹುಳಿಯಿಲ್ಲದಿದ್ದರೆ ಆಯಿತಷ್ಟೆ.

Almond butter

ಬಾದಾಮಿ ಬೆಣ್ಣೆ

ಸಾಮಾನ್ಯವಾಗಿ ಪೀನಟ್‌ ಬಟರ್‌ ಅಥವಾ ಶೇಂಗಾ ಬೆಣ್ಣೆಯನ್ನು ಕೇಳಿರುತ್ತೇವೆ. ಆದರೆ ಬಾದಾಮಿ ಬೆಣ್ಣೆಯನ್ನು ಕೇಳಿರುವುದು ಕಡಿಮೆ. ಒಂದು ಟೇಬಲ್‌ ಚಮಚ ಬೆಣ್ಣೆಯಲ್ಲಿ ೪ ಗ್ರಾಂಗಳಷ್ಟು ಪ್ರೊಟೀನ್‌ ದೊರೆಯುತ್ತದೆ. ಜೊತೆಗೆ, ಬಾದಾಮಿಯಲ್ಲಿರುವ ಆರೋಗ್ಯಕರ ಅಂಶಗಳು ಮತ್ತು ಉತ್ತಮ ಕೊಬ್ಬು ಸಹ ಸುಲಭದಲ್ಲಿ ದೊರೆಯುತ್ತದೆ. ಈ ಮೂಲಕ ಸ್ಮೂದಿಗಳ ರುಚಿಯನ್ನೂ ಹೆಚ್ಚಿಸಿ, ಮಕ್ಕಳನ್ನು ಮೆಚ್ಚಿಸಲು ಸಾಧ್ಯವಿದೆ.

Chia Seeds Black Foods

ಚಿಯಾ ಬೀಜ

ಇವುಗಳನ್ನು ಸ್ವಲ್ಪ ಹೊತ್ತಿಗೆ ಮುಂಚೆ ನೆನೆಸಿಕೊಳ್ಳಬೇಕಷ್ಟೆ. ಸ್ಮೂದಿ ಸಿದ್ಧವಾದ ಮೇಲೆಯೂ ಇದನ್ನು ಮೇಲಿನಿಂದಲೂ ಸೇರಿಸಬಹುದು. ಈ ಮೂಲಕ ಪ್ರೊಟೀನ್‌, ಆರೋಗ್ಯಕರ ಕೊಬ್ಬು ಮಾತ್ರವಲ್ಲ, ಸಾಕಷ್ಟು ನಾರೂ ಹೊಟ್ಟೆ ಸೇರುತ್ತದೆ. ಇದನ್ನು ಯಾವುದೇ ಹಣ್ಣಿನ ಸ್ಮೂದಿಯ ಜೊತೆಗೆ ಸೇರಿಸಿದರೂ, ಬಾಯಲ್ಲಿ ಕರುಂಕುರುಂ ರುಚಿ ಉಳಿಯುವುದು ಖಾತ್ರಿ.

Pumpkin seeds Pumpkin Seeds Benefits

ಕುಂಬಳಕಾಯಿ ಬೀಜ

ಪ್ರೊಟೀನ್‌ ಪೂರಕಗಳ ಬದಲೀ ಆಯ್ಕೆಗಳನ್ನು ನೋಡುತ್ತಿರುವವರು ನೀವಾಗಿದ್ದರೆ, ನಾನಾ ರೀತಿಯ ಬೀಜದ ಪುಡಿಗಳು ಅತ್ತ್ಯುತ್ತಮ ಆಯ್ಕೆಗಳು. ಒಂದೋ ಈ ಬೀಜಗಳನ್ನು ನೆನೆಸಿ ಪೇಸ್ಟ್‌ ಮಾಡಿಕೊಳ್ಳಬಹುದು. ಅದಿಲ್ಲದಿದ್ದರೆ, ಅವುಗಳನ್ನು ಮೊದಲೇ ಪುಡಿ ಮಾಡಿಸಿಕೊಂಡು ಸ್ಮೂದಿಗಳಿಗೆ ಸೇರಿಸಿಕೊಳ್ಳಬಹುದು. ಮೂರು ಟೇಬಲ್‌ ಚಮಚ ಕುಂಬಳ ಬೀಜದ ಪುಡಿಯಲ್ಲಿ ಸುಮಾರು ೮ ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಜೊತೆಗೆ ಬಹಳಷ್ಟು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳು ಲಭ್ಯವಾಗುತ್ತವೆ.

Peanut butter

ಶೇಂಗಾ ಬೆಣ್ಣೆ

ಇದರಲ್ಲೂ ಪ್ರೊಟೀನ್‌ ಸಾಂದ್ರತೆ ಉತ್ತಮವಾಗಿದೆ. ಒಂದು ಟೇಬಲ್‌ ಚಮಚ ಶೇಂಗಾ ಬೆಣ್ಣೆಯಲ್ಲಿ ೪ ಗ್ರಾಂನಷ್ಟು ಪ್ರೊಟೀನ್‌ ದೊರೆಯುತ್ತದೆ. ಈ ಮಾರುಕಟ್ಟೆಯಲ್ಲಿ ದೊರೆಯುವ ಉತ್ಪನ್ನಗಳು ಬೇಡ ಎನಿಸಿದರೆ, ಇವುಗಳನ್ನು ಮನೆಯಲ್ಲೇ ಪುಡಿ ಮಾಡಿ ಸ್ಮೂದಿಗಳಿಗೆ ಸೇರಿಸಿಕೊಳ್ಳಬಹುದು.

ಸೂರ್ಯಕಾಂತಿ ಬೀಜ, ಅಗಸೆ ಬೀಜ, ಎಳ್ಳು

ಇಂಥ ಸಣ್ಣ ಬೀಜಗಳು ಸಹ ಸ್ಮೂದಿಗಳ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಪ್ರೊಟೀನ್‌ ಅಂಶವನ್ನೂ ಏರಿಸಬಲ್ಲವು. ಈ ಬೀಜಗಳನ್ನು ರಾತ್ರಿ ನೀರಿಗೆ ಹಾಕಿ, ಬೆಳಗ್ಗೆ ರುಬ್ಬಿಕೊಳ್ಳಬಹುದು. ಹಾಗೆ ಬೇಡದಿದ್ದರೆ ಮೊದಲೇ ಪುಡಿ ಮಾಡಿರಿಸಿಕೊಂಡು, ಸ್ಮೂದಿಗೆ ಸೇರಿಸಿಕೊಳ್ಳಬಹುದು. ಯಾವುದೇ ಕೃತಕ ವಸ್ತುಗಳಿಲ್ಲ ಇಂಥ ಆಯ್ಕೆಗಳಿಂದ ಆರೋಗ್ಯಕರ ಸ್ಮೂದಿಗಳನ್ನು ಮಾಡಿ ಬೇಸಿಗೆಯ ಬಿಸಿಯನ್ನು ತಣಿಸಿಕೊಳ್ಳಬಹುದು.

ಇದನ್ನೂ ಓದಿ: Harmful Effects Of Cotton Candy: ಕಾಟನ್‌ ಕ್ಯಾಂಡಿಯ ಅಸಲಿ ಬಣ್ಣ ಭಯಾನಕ!

Continue Reading

ಆರೋಗ್ಯ

Stress Relieving Foods: ಈ ಆಹಾರಗಳು ನಿಮ್ಮ ಮೇಲಿನ ಒತ್ತಡ ತಗ್ಗಿಸುತ್ತವೆ!

ಒತ್ತಡ ಕಡಿಮೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲೇ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಿದ್ದೀರಾ? ಹಾಗಾದರೆ ಒತ್ತಡ ಶಮನಕ್ಕೆ ನೆರವಾಗುವಂಥ ಆಹಾರಗಳ (stress relieving foods) ಪಟ್ಟಿಯೇ ಇಲ್ಲಿದೆ. ಇವುಗಳನ್ನು ಸೇವಿಸಿ, ಬದುಕಿನ ಗುಣಮಟ್ಟ ಸುಧಾರಿಸಿಕೊಳ್ಳಿ.

VISTARANEWS.COM


on

Stressed at Work
Koo

ಕಣ್ಣಿಗೆ ಕಾಣುವಂಥ ರೋಗಗಳಿಗೆ ಮದ್ದರೆಯಬಹುದು. ಆದರೆ ಕಾಣದೆಯೆ ಕಾಡುವಂಥ ಸಮಸ್ಯೆಗಳಿಗೆ ಔಷಧ ಮಾಡುವುದು ಕಷ್ಟ. ಮಾನಸಿಕ ಒತ್ತಡ ಮತ್ತು ಚಿಂತೆಯಂಥವು ಕಾಣದೆಯೇ ಆರೋಗ್ಯವನ್ನು ಹದಗೆಡಿಸುತ್ತವೆ. ಇವುಗಳಿಂದಲೇ ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. ಹಾಗೆಂದು ಮನಸ್ಸಿನ ರೋಗಗಳಿಗೆಂದು ದೇಹಕ್ಕೆ ಮದ್ದು ಮಾಡಬಹುದೇ? ಹೌದೆನ್ನುತ್ತಾರೆ ಆಹಾರ ಮತ್ತು ಜೀವನಶೈಲಿಯ ತಜ್ಞರು. ಏನು ಮಾಡುವುದರ ಅಥವಾ ಮಾಡದಿರುವುದರ ಮೂಲಕ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು, ದೈಹಿಕವಾಗಿ ಆರೋಗ್ಯದಿಂದ ಇರಬಹುದು? ಮೊದಲಿಗೆ, ನಿದ್ದೆ. ನಿದ್ದೆಗೆಟ್ಟರೆ ಬುದ್ಧಿಗೆಟ್ಟಂತೆ ಎನ್ನುತ್ತದೆ ಹಳೆಯ ಗಾದೆ. ದಿನಕ್ಕೆ ಎಂಟು ತಾಸುಗಳ ನಿಯಮಿತ ನಿದ್ದೆ ಬದುಕಿನ ಗುಣಮಟ್ಟದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಲ್ಲದು. ಶಿಸ್ತುಬದ್ಧ ವ್ಯಾಯಾಮ ನಿತ್ಯದ ಅಗತ್ಯಗಳಲ್ಲಿ ಒಂದು. ಅದರಲ್ಲೂ ಯೋಗ, ಪ್ರಾಣಾಯಾಮದಂಥ ಉಸಿರಾಟದ ವ್ಯಾಯಾಮಗಳು ಒತ್ತಡ ನಿವಾರಣೆ ಮಾಡುವಲ್ಲಿ ಮಾಯಾ ಮದ್ದಿನಂತೆಯೇ ಕೆಲಸ ಮಾಡುತ್ತವೆ. ಸಿಗರೇಟ್‌, ಆಲ್ಕೊಹಾಲ್‌ ದೂರ ಮಾಡಿದರೆ ಇನ್ನಷ್ಟು ಒತ್ತಡಗಳು ತಾನಾಗಿಯೇ ದೂರಾಗುತ್ತವೆ. ಆದರೆ ಇವೆಲ್ಲ ಹೇಳಿದಷ್ಟು ಸುಲಭವಲ್ಲ. ಇದರೊಂದಿಗೆ ನೆರವಾಗುವುದಕ್ಕೆ ಕೆಲವು ಆಹಾರಗಳು (stress relieving foods) ನಮ್ಮೊಂದಿಗಿವೆ.

Avocado slices

ಬೆಣ್ಣೆ ಹಣ್ಣು

ಅವಕಾಡೊದಲ್ಲಿರುವ ಒಮೇಗಾ 3 ಕೊಬ್ಬಿನಾಮ್ಲ ಮತ್ತು ವಿಟಮಿನ್‌ ಸಿ ನಮಗೆ ಬಹಳಷ್ಟು ರೀತಿಯಲ್ಲಿ ಸಹಾಯ ಮಾಡಬಲ್ಲದು. ಜೊತೆಗೆ ಇದರಲ್ಲಿರುವ ವಿಟಮಿನ್‌ ಬಿ ಅಂಶವು ಒತ್ತಡ ಮತ್ತು ಚಿಂತೆಯನ್ನು ದೂರ ಮಾಡುವಂಥ ಗುಣವನ್ನು ಹೊಂದಿದೆ.

Fruits and Berries Foods Consumed By Lord Rama During His 14 Year Exile

ಬೆರ್ರಿಗಳು

ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾದ ಬೆರ್ರಿಗಳು, ಅದರಲ್ಲೂ ಮುಖ್ಯವಾಗಿ ಬ್ಲೂಬೆರಿ ಹಣ್ಣು, ಒತ್ತಡ ನಿವಾರಣೆ ಮಾಡುವಲ್ಲಿ ಅತ್ತ್ಯುತ್ತಮ ಕೆಲಸವನ್ನು ಮಾಡುತ್ತವೆ. ಒತ್ತಡದಿಂದ ದೇಹದ ಕೋಶಗಳ ಮಟ್ಟದಲ್ಲಿ ಆಗುವಂಥ ಹಾನಿಯನ್ನು ಇವು ಕಡಿಮೆ ಮಾಡುತ್ತವೆ. ಯಾವುದೇ ರೀತಿಯ ಉತ್ಕರ್ಷಣ ನಿರೋಧಕಗಳು ದೇಹ ಮತ್ತು ಮನಸ್ಸಿನ ಒತ್ತಡ ಕಡಿಮೆ ಮಾಡಬಲ್ಲವು.

ಕ್ಯಾಲ್ಶಿಯಂ ಅಹಾರಗಳು

ಸಾಮಾನ್ಯವಾಗಿ ಡೇರಿ ಉತ್ಪನ್ನಗಳು ನಮ್ಮ ಮುಖ್ಯವಾದ ಕ್ಯಾಲ್ಶಿಯಂ ಮೂಲಗಳು. ಇದಲ್ಲದೆ ಪಾಲಕ್‌ ಸೊಪ್ಪು, ಬ್ರೊಕೊಲಿಯಂಥವು ನಮ್ಮ ಮೂಡ್‌ ಸುಧಾರಣೆಗೆ ನೆರವಾಗುತ್ತವೆ. ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಆಹಾರ ಸೇವಿಸುವ ಮಕ್ಕಳು, ಕಡಿಮೆ ಕ್ಯಾಲ್ಶಿಯಂ ಆಹಾರ ಸೇವಿಸುವ ಮಕ್ಕಳಿಗಿಂತ ಒತ್ತಡರಹಿತರಾಗಿರುತ್ತಾರೆ ಎನ್ನುತ್ತವೆ ಅಧ್ಯಯನಗಳು.

the egg

ಮೊಟ್ಟೆ

ಮೊಟ್ಟೆಯಲ್ಲಿರುವ ವಿಟಮಿನ್‌ ಡಿ ಮತ್ತು ಟ್ರಿಪ್ಟೊಫ್ಯಾನ್‌ ಅಂಶಗಳು ದೇಹದಲ್ಲಿ ಹ್ಯಾಪಿ ಹಾರ್ಮೋನುಗಳ ಬಿಡುಗಡೆಗೆ ಚೋದನೆಯನ್ನು ನೀಡುವುದಾಗಿ ಹೇಳುತ್ತವೆ ಅಧ್ಯಯನಗಳು. ಯಾವುದೇ ರೀತಿಯಲ್ಲಿ ವಿಟಮಿನ್‌ ಡಿ ದೇಹಕ್ಕೆ ದೊರೆಯುವುದರಿಂದ ಒತ್ತಡ ನಿವಾರಣೆಗೆ ನೆರವಾಗುತ್ತದೆ. ಖಿನ್ನತೆ ನಿವಾರಣೆಗೆ ಬೆಳಕಿನ ಚಿಕಿತ್ಸೆ ವ್ಯಾಪಕವಾಗಿ ಬಳಕೆಯಲ್ಲಿದೆ.

Dry seeds

ಬೀಜಗಳು

ಮೆಗ್ನೀಶಿಯಂ ಮತ್ತು ಸತುವಿನ ಕೊರತೆಯು ಮಾನಸಿಕ ಒತ್ತಡವನ್ನು ಹೆಚ್ಚಿಸಬಲ್ಲದು. ಈ ಕೊರತೆಯನ್ನು ಸುಲಭವಾಗಿ ನೀಗಿಸುವುದು ಬೀಜಗಳು. ಗೋಡಂಬಿಯಲ್ಲಿ ಅಧಿಕ ಪ್ರಮಾಣದಲ್ಲಿ ಜಿಂಕ್‌ ಅಂಶವಿದೆ. ಚಿಯಾ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಶಿಯಂ ಅಂಶವಿದೆ. ಹಾಗಾಗಿ ಹಲವು ರೀತಿಯ ಬೀಜಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒತ್ತಡ ಕಡಿಮೆ ಮಾಡುವಲ್ಲಿ ಮಹತ್ವದ್ದೆನಿಸುತ್ತದೆ.

ಫೋಲೇಟ್‌

ಹಸಿರು ಸೊಪ್ಪು ಮತ್ತು ತರಕಾರಿಗಳಲ್ಲಿ ಫೋಲೇಟ್‌ ಅಂಶ ಧಾರಾಳವಾಗಿರುತ್ತದೆ. ಮೆದುಳಿನ ಸಂವಾಹಕಗಳು ಸರಿಯಾಗಿ ಕೆಲಸ ಮಾಡುವಲ್ಲಿ ಫೋಲೇಟ್‌ಗಳು ಮಹತ್ವದ ಪಾತ್ರ ವಹಿಸುತ್ತವೆ. ಮೂಡ್‌ ಸುಧಾರಿಸಿ, ಮೆದುಳಿನ ಕ್ಷಮತೆ ಹೆಚ್ಚಿಸುವಲ್ಲಿ ಫೋಲೇಟ್‌ ಮತ್ತು ಫಾಲಿಕ್‌ ಆಮ್ಲಗಳು ಹೆಚ್ಚಿರುವ ಆಹಾರಗಳು ಅಗತ್ಯ.

ಇದನ್ನೂ ಓದಿ: Health Tips For Kidney: ಕಿಡ್ನಿಯ ಆರೋಗ್ಯಕ್ಕೆ ಯಾವೆಲ್ಲ ಆಹಾರಗಳು ಒಳ್ಳೆಯದು?

Continue Reading
Advertisement
Karnataka Weather Rain for first week of March
ಕರ್ನಾಟಕ30 mins ago

Karnataka Weather : ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೆಕೆ; ಮಾರ್ಚ್‌ ಮೊದಲ ವಾರಕ್ಕೆ ಮಳೆ?

Electricity Bil
ಸಂಪಾದಕೀಯ59 mins ago

ವಿಸ್ತಾರ ಸಂಪಾದಕೀಯ: ವಿದ್ಯುತ್‌ ದರ ಇಳಿಕೆ ಶ್ಲಾಘನೀಯ ಕ್ರಮ

dina bhavishya read your daily horoscope predictions for February 28 2024
ಭವಿಷ್ಯ2 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Jain (Deemed-to-be University)
ಬೆಂಗಳೂರು7 hours ago

ಜೈನ್ ‘ಸ್ಕೂಲ್ ಆಫ್ ಸೈನ್ಸಸ್‌’ನಲ್ಲಿ ಯಶಸ್ವಿಯಾಗಿ ನೆರವೇರಿದ SciCon-2024; 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

Siddaramaiah
ಪ್ರಮುಖ ಸುದ್ದಿ7 hours ago

ಪಶು ಸಂಗೋಪನಾ ಇಲಾಖೆ ಆಸ್ತಿ ಅಲ್ಪಸಂಖ್ಯಾತ ಇಲಾಖೆಗೆ ವರ್ಗಾವಣೆ; ಸಿದ್ದರಾಮಯ್ಯ ಆದೇಶ

Reva University
ಬೆಂಗಳೂರು7 hours ago

ರೇವಾ ವಿವಿಯಲ್ಲಿ ಜಿಯೋಪಾಲಿಟಿಕ್ಸ್, ಇಂಟರ್ ನ್ಯಾಷನಲ್ ಸ್ಟಡೀಸ್ ಉನ್ನತ ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

Reliance Disney
ದೇಶ8 hours ago

Reliance Disney: ರಿಲಯನ್ಸ್‌-ಡಿಸ್ನಿ ವಿಲೀನ, ಮಾಧ್ಯಮದಲ್ಲಿ 70 ಸಾವಿರ ಕೋಟಿ ರೂ. ಹೂಡಿಕೆ

44 Congress workers to get power in corporations and boards
ಪ್ರಮುಖ ಸುದ್ದಿ8 hours ago

Congress Karnataka: ನಿಗಮ-ಮಂಡಳಿಗಳಲ್ಲಿ 44 ಕಾಂಗ್ರೆಸ್‌ ಕಾರ್ಯಕರ್ತರಿಗೆ ಅಧಿಕಾರ ಭಾಗ್ಯ; ಸಿಎಂ ಗ್ರೀನ್ ಸಿಗ್ನಲ್

Puneri Paltan vs Haryana Steelers
ಕ್ರೀಡೆ8 hours ago

Pro Kabaddi: ಹಾಲಿ ಚಾಂಪಿಯನ್​ ಜೈಪುರಕ್ಕೆ ಸೋಲು; ಪುಣೇರಿ-ಹರ್ಯಾಣ ಫೈನಲ್​ ಫೈಟ್​

Mumbai Indians Women vs UP Warriorz
ಕ್ರೀಡೆ8 hours ago

WPL 2024: ಬಲಿಷ್ಠ ಮುಂಬೈಗೆ ಸೋಲುಣಿಸಿ ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್ಸ್

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ2 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ1 day ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ2 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ3 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌