Site icon Vistara News

Rain news | ಆಕಳನ್ನು ರಕ್ಷಿಸಲು ನೀರಿಗೆ ಜಿಗಿದ ವ್ಯಕ್ತಿ; ಆಕಳು ನೀರುಪಾಲು, ವ್ಯಕ್ತಿ ಪಾರು

rain news

ವಿಜಯನಗರ: ಮನೆಯ ಸದಸ್ಯನಂತಿದ್ದ ಆಕಳು ಎಂದರೆ ಆ ವಾರಸುದಾರನಿಗೆ ಜೀವ. ಹೀಗೆ ಜೀವಕ್ಕೆ ಜೀವಾಗಿದ್ದ ಆಕಳಿನ ಮೈತೊಳೆಯುವ ವೇಳೆ ಅದು ಹಗರಿ ಹಳ್ಳದಲ್ಲಿ (Rain news) ಕೊಚ್ಚಿ ಹೋಗಿದೆ. ಹೇಗಾದರೂ ಮಾಡಿ ತನ್ನ ಆಕಳನ್ನು ಉಳಿಸಿಕೊಳ್ಳಬೇಕೆಂದು ಆತ ಮಾಡಿದ್ದು ಮಾತ್ರ ಸಾಹಸ. ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಜಿಗಿದು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಆ ವ್ಯಕ್ತಿಯನ್ನು ಸ್ಥಳೀಯರು ರಕ್ಷಣೆ ಮಾಡಿದರು.

ಇಲ್ಲಿನ ಹಗರಿಬೊಮ್ಮನಹಳ್ಳಿ ತಾಲೂಕಿನ ಅಲಬೂರು ಗ್ರಾಮದಲ್ಲಿ ಭಾನುವಾರ ಸುರಿದ ಮಳೆಗೆ ಹಗರಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಇದರ ಅರಿವು ಇರದ ಅಲಬೂರು ಗ್ರಾಮದ ನಿವಾಸಿ ಬಾರಿಕರ ಫಕೀರಪ್ಪ ಎಂಬುವರು ಹಳ್ಳದ ಸಮೀಪ ಆಕಳ ಮೈತೊಳೆಯುತ್ತಿದ್ದರು.

ಈ ವೇಳೆ ನೀರಿನ ರಭಸ ಹೆಚ್ಚಾಗಿ ಆಕಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಆಕಳನ್ನು ಕಾಪಾಡಲು ಫಕೀರಪ್ಪ ಸಹ ನೀರಿಗೆ ಜಿಗಿದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರೆಲ್ಲ ಸೇರಿ ಫಕೀರಪ್ಪನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ನೀರಿನ ರಭಸಕ್ಕೆ ಆಕಳು ಕೊಚ್ಚಿಹೋಗಿದ್ದು, ಪತ್ತೆಯಾಗಿಲ್ಲ. ಮಾಲವಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಹಗರಿ ಹಳ್ಳ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಬಳಿ ಯಾರೂ ಹೋಗದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ | Bulls Death | ವಿಜಯನಗರದಲ್ಲಿ ಏಕಾಏಕಿ ಕುಸಿದು ಜೀವಬಿಡುತ್ತಿರುವ ಎತ್ತುಗಳು; ದಡಾರ ಕಾಯಿಲೆ ಶಂಕೆ

Exit mobile version