Site icon Vistara News

ಹೊಸಪೇಟೆಯ ಮಕ್ಕಳಲ್ಲಿ ಉಣ್ಣೆ ಜ್ವರ ಪತ್ತೆ | ಹೀಗಿರುತ್ತದೆ ಅದರ ಲಕ್ಷಣ

fever

ವಿಜಯನಗರ: ಉಣ್ಣೆ ಜ್ವರ ಎಂದು ಶಂಕಿಸಲಾಗಿರುವ ವಿಚಿತ್ರ ಬಗೆಯ ಜ್ವರದ ಲಕ್ಷಣಗಳು ವಿಜಯನಗರ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕಂಡುಬಂದಿದ್ದು. ಪೋಷಕರಲ್ಲಿ ಆತಂಕ ಮೂಡಿಸಿದೆ.

ಸದ್ಯ ವಿಜಯನಗರ ಜಿಲ್ಲೆಯ ಹೊಸಪೇಟೆಯ ಮರಿಯಮ್ಮನಹಳ್ಳಿ ಭಾಗದಲ್ಲಿ ಇದು ಕಂಡು ಬಂದಿದೆ. ಮಕ್ಕಳಲ್ಲಿ ವೈರಲ್ ಫೀವರ್ ಕಾಣಿಸಿಕೊಳ್ಳುತ್ತದೆ. ಜ್ವರದ ಜತೆಗೆ ಮೈ ಮೇಲೆ ಗುಳ್ಳೆಗಳು ಕಂಡುಬರುತ್ತವೆ. ಇದು ಮಾರಣಾಂತಿಕ ಕಾಯಿಲೆ ಅಲ್ಲವಾದರೂ ಪೊಷಕರು ಎಚ್ಚರಿಕೆ ವಹಿಸಬೇಕಿದೆ. ರಕ್ತ ಪರೀಕ್ಷೆಗೆ ಒಳಪಡಿಸಿದಾಗ ಉಣ್ಣೆ ಜ್ವರದ ಲಕ್ಷಣಗಳು ಪತ್ತೆಯಾಗಿವೆ.

ಈ ಹಿಂದೆ ಜಿಲ್ಲೆಯ ಎರಡು- ಮೂರು ತಾಲೂಕುಗಳಲ್ಲಿ ಈ ಹಿಂದೆ ಉಣ್ಣೆ ಜ್ವರ ಕಂಡುಬಂದಿತ್ತು. ವಿಜಯಪುರ, ಬಾಗಲಕೋಟೆ ಸೇರಿದಂತೆ ನಾನಾ ಕಡೆ ಮಕ್ಕಳಲ್ಲಿ ಕಂಡು ಬಂದಿತ್ತು. ಕಳೆದ ಎರಡು ವರ್ಷಗಳ ಹಿಂದೆ ಹೊಸಪೇಟೆಯ ಗ್ರಾಮೀಣ ಭಾಗದಲ್ಲಿ ಕಂಡು ಬಂದಿತ್ತು.

ಈ ಜ್ವರ ಸಾಕು ಪ್ರಾಣಿಗಳು, ಮುಖ್ಯವಾಗಿ ಹಸು, ಎಮ್ಮೆ ಹಾಗೂ ನಾಯಿಗಳ ಮೈಯಲ್ಲಿರುವ ಉಣ್ಣೆಹುಳಗಳ ಕಡಿತದಿಂದ ಬರುತ್ತದೆ. ಉಣ್ಣೆಯಲ್ಲಿರುವ ರಿಕೆಟ್ಸಿಯಾ ಎಂಬ ಜಂತು ಈ ಜ್ವರಕ್ಕೆ ಕಾರಣ. ಲಕ್ಷಣಗಳೆಂದರೆ ಜ್ವರ ಬಂದು ಮೈಮೇಲೆ ಕೆಂಪು ಕಲೆಗಳು ಕಾಣಿಸಿಕೊಳ್ಳುತ್ತವೆ. ರಕ್ತ ಹೆಪ್ಪುಗಟ್ಟಿದಂತಾಗಿ ಮೈ ಕಪ್ಪಾಗಿ ಕಾಣಿಸುತ್ತದೆ. ಅಥವಾ ಚರ್ಮದಲ್ಲಿ ರಕ್ತಸ್ರಾವ ಉಂಟಾಗಿ ಕೆಂಪು ಕಲೆಗಳು ಉಂಟಾಗುತ್ತವೆ. ನಿರ್ಲಕ್ಷಿಸಿದರೆ ಈ ರೋಗ ಹೃದಯಕ್ಕೆ ಅಥವಾ ಮೆದುಳಿಗೆ ತಗುಲಿ ಜೀವಕ್ಕೆ ಅಪಾಯ ಉಂಟುಮಾಡುತ್ತದೆ. ಈ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರಲ್ಲಿಗೆ ಹೋಗಬೇಕು ಎಂದು ತಜ್ಞರು ತಿಳಿಸಿದ್ದಾರೆ.

Exit mobile version