ಕೊಟ್ಟೂರು: ಪಟ್ಟಣದ ಸರ್ಕಾರಿ ಮಹಾವಿದ್ಯಾಲಯದ ಮೈದಾನದಲ್ಲಿ ಕೊಟ್ಟೂರು ತಾಲೂಕಿನ ಪ್ರಸಕ್ತ ಸಾಲಿನ ಎರಡು ದಿನಗಳ ಪದವಿಪೂರ್ವ ಕಾಲೇಜುಗಳ (PU Colleges) ಕ್ರೀಡಾಕೂಟವನ್ನು (Sports) ಹಮ್ಮಿಕೊಳ್ಳಲಾಗಿತ್ತು.
ಕೊಟ್ಟೂರು ತಹಸೀಲ್ದಾರ್ ಅಮರೇಶ್ ಜಿ.ಕೆ. ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸದೃಢವಾದ ಮನಸ್ಸು ಮತ್ತು ದೇಹ ಹೊಂದಬೇಕಾದರೆ ಕ್ರೀಡೆಗಳಲ್ಲಿ ಭಾಗವಹಿಸುವುದು ಬಹು ಮುಖ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯಚಟುವಟಿಕೆಗಳ ಜೊತೆ ಪಠ್ಯೇತರ ಚಟುವಟಿಕೆಗಳು ಕೂಡ ಬಹು ಮುಖ್ಯ, ಸೋಲು ಗೆಲುವಿನ ಕಡೆಗೆ ಗಮನ ಹರಿಸದೆ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ತಿಳಿಸಿದರು.
ಇದನ್ನೂ ಓದಿ: Jasprit Bumrah: ಹಾರ್ದಿಕ್ ಪಾಂಡ್ಯ ದಾಖಲೆ ಮೇಲೆ ಕಣ್ಣಿಟ್ಟ ಜಸ್ಪ್ರೀತ್ ಬುಮ್ರಾ
ಕ್ರೀಡಾಕೂಟದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಮಾತನಾಡಿ, ಕ್ರೀಡೆಗಳು ಜೀವನದ ಅನುಭವಗಳನ್ನು ಕಟ್ಟಿಕೊಡುತ್ತವೆ, ಮುಂದಿನ ಜೀವನದ ಭವಿಷ್ಯಕ್ಕೆ ಸಹಕಾರಿ ಎಂದು ತಿಳಿಸಿದರು.
ಕೊಟ್ಟೂರು ಎಪಿಎಂಸಿಯ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ್ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಕೊಟ್ಟೂರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಶಾಂತ್ ಕುಮಾರ್ ಎಂ. ಎಚ್. ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಇದನ್ನೂ ಓದಿ: Viral Video: ನೂರಾರು ಮೊಸಳೆಗಳ ಮೇಲೇ ಸಾಗುವ ದೋಣಿ! ಮೈ ಝುಂ ಎನ್ನಿಸುವ ವಿಡಿಯೊ
ಈ ಸಂದರ್ಭದಲ್ಲಿ ಪ್ರಾಚಾರ್ಯರುಗಳಾದ ನಿರ್ಮಲ ಶಿವನಗುತ್ತಿ, ಬೂಸನೂರಮಠ, ಪಿ.ಟಿ. ಸಂತೋಷ್ ಕುಮಾರ್, ಜಗದೀಶ್ ಚಂದ್ರಬೋಸ್ ಮತ್ತು ಡಾ. ಎಂ ರವಿಕುಮಾರ್, ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ವಿವಿಧ ಕಾಲೇಜುಗಳ ಕ್ರೀಡಾ ತರಬೇತಿದಾರರು ಹಾಗೂ ಕ್ರೀಡಾಪಟುಗಳು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಇತರರು ಭಾಗವಹಿಸಿದ್ದರು