ಹರಪನಹಳ್ಳಿ: ಸಾಮಾಜಿಕ ಬದಲಾವಣೆಗೆ ಪೂರಕವಾದ ನಾಟಕಗಳನ್ನು (Drama) ರಚಿಸುವ ಮೂಲಕ ಜನಜಾಗೃತಿಗೊಳಿಸುವ ಕಾರ್ಯ ಆಗಬೇಕಿದೆ ಎಂದು ರಂಗಕರ್ಮಿ, ನಿರ್ದೇಶಕ ಬಿ. ಪರುಶುರಾಮ (Vijayanagara News) ತಿಳಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಂಗಾರದ ಹಕ್ಕಿ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮೂಲಕ ನವ ಸಮಾಜ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ತರವಾಗಿದೆ, ಚಿಂತನಾಪರ ಅವರ ನಾಟಕ ನೋಡಿದರೆ ಬದುಕಿನಲ್ಲಿ ಬದಲಾವಣೆ ಹೊಂದಲು ಸಾಧ್ಯವಾಗುತ್ತದೆ. ನಾಟಕಗಳು ಕೇವಲ ಮನರಂಜನೆಯಲ್ಲ. ಅವುಗಳು ಪ್ರಸ್ತುತ ಸಮಾಜದ ಅಭಿವ್ಯಕ್ತಿಯಾಗಿ ಕೆಲಸ ಮಾಡುತ್ತವೆ ಎಂದು ಹೇಳಿದರು.
ಇದನ್ನೂ ಓದಿ: Job Fair : ಫೆ.26-27ರಂದು ಬೃಹತ್ ಉದ್ಯೋಗ ಮೇಳ, 500 ಕಂಪನಿಗಳು ಭಾಗಿ, 1 ಲಕ್ಷ ಜಾಬ್!
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅದ್ಯಕ್ಷ. ಕೆ.ಉಚ್ಚೆಂಗೆಪ್ಪ ಮಾತನಾಡಿ, ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ಪುರಾತನ ಕಾಲದಲ್ಲಿ ಸಮಾಜದಲ್ಲಿ ಮನೆ ಮಾಡಿದ್ದ ಮೌಢ್ಯವನ್ನು ನಾಟಕಗಳ ಮೂಲಕ ಎತ್ತಿ ತೊರಿಸಲಾಗುತ್ತಿತ್ತು. ಇತ್ತಿಚೀನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿದ್ದು,ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ನಾಟಕ ಕಲೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.
ಜೆ.ಸಿ.ಐ ಮಾಜಿ ಅಧ್ಯಕ್ಷ ಹೇಮಣ್ಣ ಮೋರಗೇರಿ ಮಾತನಾಡಿದರು.
ಇದನ್ನೂ ಓದಿ: Health Benefits Of Strawberries: ಸ್ಟ್ರಾಬೆರಿ ತಿಂದರೆ ಲಾಭಗಳು ಒಂದೆರಡಲ್ಲ!
ಈ ಸಂದರ್ಭದಲ್ಲಿ ಸಹ ನಿರ್ದೇಶಕ ಕುಮಾರ್, ಸಂಗೀತ ಕಲಾವಿದ ಆನಂದ, ಪಾತ್ರದಾರಿಗಳಾದ ಜೆ.ಪೂರ್ಣಿಮ, ಲಕ್ಷ್ಮೀ ಟಿ., ಬಿ.ನೀಲಮ್ಮ, ಎಚ್.ಐಶ್ವರ್ಯ, ಟಿ.ಗಗನ್ ದೀಪ್, ಪಿ.ಎಂ. ರಾಕೇಶ, ಟಿ.ಐಶ್ವರ್ಯ, ಶಿಕ್ಷಕರಾದ ಹೊನ್ನಪ್ಪ, ಶರಣಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.