Site icon Vistara News

Vijayanagara News: ಹಗರಿಬೊಮ್ಮನಹಳ್ಳಿಯಲ್ಲಿ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸಾ ಶಿಬಿರ

Free eye checkup and surgery camp at Hagaribommanahalli

ಹಗರಿಬೊಮ್ಮನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಿ.ಸಿ.ಆರ್. ಫೌಂಡೇಷನ್, ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್ ಹಾಗೂ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆಯ ಸಂಬಂಧಿತ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು (Vijayanagara News)ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜಮುಖಿ ಟ್ರಸ್ಟ್‌ನ ಗೌರವಾಧ್ಯಕ್ಷ ಎ.ವೀರಣ್ಣ ಮಾತನಾಡಿ, ಟ್ರಸ್ಟ್ ಮತ್ತು ಫೌಂಡೇಷನ್‌ಗಳ ಸಹಯೋಗದೊಂದಿಗೆ ತಾಲೂಕು ಸೇರಿದಂತೆ ಹರಪನಹಳ್ಳಿ, ಹೊಸಪೇಟೆ ಹಾಗೂ ಹಡಗಲಿ ತಾಲೂಕುಗಳಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದೇವೆ. ಮುಂದೆ ಕೂಡ ಇಂತಹ ಜನಪರ ಕೆಲಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಸತತ ಎರಡನೆ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

ಈ ವೇಳೆ ಒಟ್ಟು 209 ಜನರು ತಪಾಸಣೆಗೊಳಗಾದರು. ಅದರಲ್ಲಿ 94 ಜನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಬಳಿಕ 15ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಟ್ರಸ್ಟ್‌ನ ಪದಾಧಿಕಾರಿಗಳು ಗೌರವಿಸಿ, ಸನ್ಮಾನಿಸಿದರು.

ಶಿಬಿರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆಯ ಮೇಲ್ವಿಚಾರಕ ಕೃಷ್ಣ, ವೈದ್ಯರಾದ ಡಾ. ವಿನಯ್, ಡಾ. ದೀಪ, ತ್ಯಾಗರಾಜ್‌ ನಾಯ್ಕ್, ಇಲ್ಲಿಯ ಸರ್ಕಾರಿ ವೈದ್ಯ ಡಾ. ಶರತ್ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

ಟ್ರಸ್ಟ್‌ನ ತಾಲೂಕು ಅಧ್ಯಕ್ಷ ಭದ್ರವಾಡಿ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಸುಧಾಕರ ಪಾಟೀಲ್, ಕೆ. ಪ್ರಭಾಕರ, ನರೆಗಲ್ ಮಲ್ಲಿಕಾರ್ಜುನ, ದಿವಾಕರಗೌಡ, ಕರಿಬಸವರಾಜ್, ನಾಗರಾಜ್, ಗಜಾಪುರ ಮಂಜುನಾಥ, ಕರಿಯಪ್ಪ ಗುಜನೂರು, ಪೂಜಾರ್ ಮಲ್ಲಿಕಾರ್ಜುನ, ಕುಂಟೂರು ನಿಂಗಣ್ಣ, ಇಟ್ಟಿಗಿ ಗುರುಬಸವರಾಜ್, ಮಲ್ಲಯ್ಯ, ಕಡಬಾಳು ಮಂಜಣ್ಣ, ಎಲಿಗಾರ್ ಮಂಜುನಾಥ, ಭದ್ರವಾಡಿ ಸುರೇಶ, ಹನಸಿ ವೀರೇಶ, ಆನಂದ, ವಿಜಯ್, ಕುಮಾರಸ್ವಾಮಿ, ನೆಲ್ಕುದ್ರಿ ಕುಮಾರ್, ಐನಳ್ಳಿ ಶೇಖರ್, ಬಾಬುವಲಿ, ಸಾಲ್ಮನಿ ನಾಗರಾಜ್ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ಎಚ್.ಎಂ. ನಾಗರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version