ಹೊಸಪೇಟೆ: ತಾಲೂಕು ಬೇಡ ಜಂಗಮ ಸಮಾಜ ವತಿಯಿಂದ ಇದೇ ಜ.21 ರಂದು ಭಾನುವಾರ ನಗರದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ (Free Health Checkup Camp) ಹಮ್ಮಿಕೊಳ್ಳಲಾಗಿದೆ ಎಂದು ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಎಸ್.ಎಂ.ಕಾಶಿನಾಥಯ್ಯ ಹೇಳಿದರು.
ಇಲ್ಲಿನ ಕೊಟ್ಟೂರು ಸಂಸ್ಥಾನ ಮಠದಲ್ಲಿ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಬಡ ಹಾಗು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಇದೇ ಜ.21 ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯುವ ಶಿಬಿರದಲ್ಲಿ ಹೃದಯ ತಪಾಸಣೆ, 2 ಡಿ, ಇಕೋ, ಇಸಿಜಿ, ಪರೀಕ್ಷೆಯನ್ನು ತಜ್ಞ ವೈದ್ಯರು ಉಚಿತವಾಗಿ ತಪಾಸಣೆ ಮಾಡಲಿದ್ದಾರೆ.
ಇದರ ಜತೆಗೆ ಮೊಣಕಾಲು, ಮಂಡಿನೋವು, ಕಿವಿ, ಮೂಗು, ಗಂಟಲು, ಬಿ.ಪಿ, ಶುಗರ್, ಸೇರಿದಂತೆ ಎಲ್ಲಾ ತರಹದ ಕಾಯಿಲೆಗಳಿಗೆ ತಪಾಸಣೆ ಮಾಡಲಿದ್ದಾರೆ.
ಇದನ್ನೂ ಓದಿ: Job Alert: ಮಂಡ್ಯ ಡಿಸಿಸಿ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ
ಇದಕ್ಕಾಗಿ ಎಸ್.ಡಿ.ಎಂ. ನಾರಾಯಣ ಹಾರ್ಟ್ ಸೆಂಟರ್ ಮತ್ತು ಸ್ಥಳೀಯ ವೈದ್ಯರ ನೆರವು ಕೇಳಲಾಗಿದೆ. ಅವರು ಸಹ ಸಹಕಾರ ನೀಡಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೊಸಪೇಟೆ ತಾಲೂಕು ಮತ್ತು ವಿಜಯನಗರ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಬಂದು ಈ ಉಚಿತ ತಪಾಸಣೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ: Mutual fund : 2,500ಕ್ಕೂ ಹೆಚ್ಚು ಮ್ಯೂಚುವಲ್ ಫಂಡ್ ಸ್ಕೀಮ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಈ ಸಂಧರ್ಭದಲ್ಲಿ ಮುಖಂಡರಾದ ಬಿ.ಎಂ.ತಿಪ್ಪಯ್ಯ, ವೈ.ಎಂ.ಪ್ರಕಾಶ್, ಎನ್.ವೀರಮಂಗಳ, ಕೆ.ಸುಮಾ, ಗಿರಿಜಾ ನಾಗಲೀಕರ, ವೀರಭದ್ರಯ್ಯ, ಪರಮೇಶ್ವರಪ್ಪ ಉಪಸ್ಥಿತರಿದ್ದರು.