ಹೊಸಪೇಟೆ: ಬಂಜಾರ ಸಮುದಾಯದಿಂದ ಹೊಸಪೇಟೆ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೀತ್ಲಾ ಹಬ್ಬವನ್ನು ಮಂಗಳವಾರ ಸಂಭ್ರಮದಿಂದ (Vijayanagara News) ಆಚರಿಸಲಾಯಿತು.
ಇದನ್ನೂ ಓದಿ: Foreign Investment: ಜಪಾನ್, ದಕ್ಷಿಣ ಕೊರಿಯಾದಿಂದ ರಾಜ್ಯದಲ್ಲಿ ₹6,450 ಕೋಟಿ ಹೂಡಿಕೆ: ಎಂಬಿ ಪಾಟೀಲ್
ಮಣ್ಣೆತ್ತಿನ ಅಮಾವಾಸ್ಯೆಯ ಮೊದಲ ಮಂಗಳವಾರ ಹೊಸಪೇಟೆ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಂಜಾರ ಸಮುದಾಯದವರು, ಮಾರಕ ರೋಗ-ರುಜಿನಗಳು ದೂರಾಗಲಿ, ಧನ-ಧಾನ್ಯ ಸಮೃದ್ಧಿಯಾಗಿ ಬೆಳೆದು ಸುಖ, ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸಿ ತುಳಜಾ ಭವಾನಿ, ಈಂಗಳ ಭವಾನಿ, ಮರಿಯಾ ಭವಾನಿ, ಮತ್ರೋಡಿ ಭವಾನಿ, ದೋಳಂಗಲ್ ಭವಾನಿ ಹಾಗೂ ಕೀಲಕಂಟಕ ಭವಾನಿ ಎಂಬ ದೇವತೆಗಳನ್ನು ಊರ ಹೊರಗೆ ಪ್ರತಿಷ್ಠಾಪಿಸಿ, ಪೂಜೆ ನೆರವೇರಿಸಿದರು.
ಇದನ್ನೂ ಓದಿ: Gold Rate Today: ಏರಿಕೆಯೂ ಇಲ್ಲ ಇಳಿಕೆಯೂ ಇಲ್ಲ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ
ಊರ ಹೊರಗಿನ ಬೇವಿನಮರದ ಬುಡದಲ್ಲಿ ಏಳು ಮಾತೆಯರನ್ನು ಪ್ರತಿಬಿಂಬಿಸುವ ಮರದ ಏಳು ಕೊಂಬೆಯ ತುಂಡುಗಳನ್ನು ಇಲ್ಲವೇ, ಏಳು ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡುವುದು ಪದ್ಧತಿ. ಮಾತೆಯರ ಪ್ರತಿಬಿಂಬದ ಹಿಂದೆ ‘ಲೂಕಡ್’ (ಸೇವಕ) ನನ್ನು ಪ್ರತಿಷ್ಠಾಪಿಸಿ, ಎಡೆ ಅರ್ಪಿಸಿ, ಪೂಜೆ ಸಲ್ಲಿಸಿದರು.