ವಿಜಯನಗರ: ಹೊಸಪೇಟೆ ಗ್ರಾಮೀಣ ಠಾಣೆ (Rural Police Station) ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಕಳ್ಳತನ (Theft) ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ (Accused Arrested), ಅವರಿಂದ 1.35 ಲಕ್ಷ ರೂ ಮೌಲ್ಯದ 27.17 ಗ್ರಾಂ ಚಿನ್ನದ ಸರ ಹಾಗೂ 80 ಸಾವಿರ ಮೌಲ್ಯದ ಆಟೋವನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಮೇನ್ ಬಜಾರ್ ಮಠಪತಿ ಓಣಿಯ ಆಟೋ ಚಾಲಕ ಎಚ್.ಶ್ರೀನಿವಾಸ್ (31) ಮತ್ತು ವಿಜಯ ಟಾಕೀಸ್ ಸಮೀಪದ ಆಟೋ ಚಾಲಕ ಎಂ.ಕೃಷ್ಣಗೌಡ (35) ಎಂಬುವವರೇ ಬಂಧಿತ ಆರೋಪಿಗಳು.
ಇದನ್ನೂ ಓದಿ: Asian Games 2023: ಸ್ಕ್ವ್ಯಾಶ್‌ನಲ್ಲಿ ಕಂಚು ಗೆದ್ದ 15 ವರ್ಷದ ಬಾಲಕಿ; ಬಾಕ್ಸಿಂಗ್‌ನಲ್ಲಿ ಪರ್ವೀನ್‌ಗೆ ಕಂಚು
ಘಟನೆಯ ಹಿನ್ನಲೆ ಏನು?
ನಗರದ ಜೋಳದರಾಶಿ ಗುಡ್ಡದ ಪಕ್ಕದ ಬಳ್ಳಾರಿ ಬೈಪಾಸ್ ರಸ್ತೆಯಲ್ಲಿ ಇದೇ ಅ.1ರಂದು ಈ ಸರಗಳವು ನಡೆದಿತ್ತು. ಆಟೋದಲ್ಲಿ ತನ್ನ ಮನೆಗೆ ಬಿಡುವ ಬದಲಿಗೆ ಇನ್ನೊಂದು ಕಡೆ ಕರೆದೊಯ್ದಿದ್ದ ಚಾಲಕ, ದಾರಿಯಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕೂರಿಸಿಕೊಂಡಿದ್ದ. ಆಟೋದ ಬದಿಯಲ್ಲಿನ ಪರದೆ ಹಾಕಿಕೊಂಡಿದ್ದು, ಮಹಿಳೆಯ ಸರವನ್ನು ಆರೋಪಿಗಳು ಕಿತ್ತುಕೊಂಡಿದ್ದರು. ಸರ ಕಳೆದುಕೊಂಡ ಮಹಿಳೆ ವರಲಕ್ಷ್ಮಮ್ಮ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ದೀಪಕ್ ಆರ್.ಬೂಸರೆಡ್ಡಿ, ಪಿಎಸ್‌ಐ ಬಿ.ಶೇಷಾಚಲಂ ನಾಯ್ಡು ಹಾಗೂ ಸಿಬ್ಬಂದಿ ಸರ ಕಳುವಾದ ದಿನದಂದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Maruti Suzuki: ಇನ್‌ಕಮ್ ಟ್ಯಾಕ್ಸ್ ನೋಟೀಸ್, ಮಾರುತಿ ಸುಜುಕಿ ಷೇರು ಬೆಲೆ 2% ಕುಸಿತ
ಡಿಎಸ್ಪಿ ಟಿ.ಮಂಜುನಾಥ ತಳವಾರ ಮಾರ್ಗದರ್ಶನದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪಿಐ ದೀಪಕ್ ಭೂಸರೆಡ್ಡಿ ನೇತೃತ್ವದಲ್ಲಿ ಪಿಎಸ್ಐ ಬಿ.ಶೇಷಾಚಲಂ ನಾಯ್ಡು, ಸಿಬ್ಬಂದಿಗಳಾದ ಮಂಜುನಾಥ ಮೇಟಿ, ವಿ.ರಾಘವೇಂದ್ರ, ಪಂಪಾಪತಿ, ಏಳಂಜಿ ಕೊಟ್ರೇಶ್, ಸಣ್ಣಗಾಳೆಪ್ಪ, ಅಡಿವೆಪ್ಪ, ಮಲ್ಲಿಕಾರ್ಜುನ ವೈದ್ಯಮಠ, ಬಿ.ಚಂದ್ರಪ್ಪ, ನಜೀರ್ ಸಾಹೇಬ್, ಕುಮಾರನಾಯ್ಕ ಪಾಲ್ಗೊಂಡಿದ್ದರು.