ವಿಜಯನಗರ: ಹೊಸಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮತ್ತೆ 25ಕ್ಕೂ ಅಧಿಕ ಜನ ಅಸ್ವಸ್ಥಗೊಂಡಿದ್ದಾರೆ. ಹೊಸಪೇಟೆಯ ರಾಣಿಪೇಟೆಯಲ್ಲಿ ಇದು ಸಂಭವಿಸಿದೆ.
ಅಸ್ವಸ್ಥಗೊಂಡವರಲ್ಲಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದವರು ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿದ್ದಾರೆ. ಹೀಗೆ ಅಸ್ವಸ್ಥಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಒಟ್ಟು 145ಕ್ಕೆ ಏರಿದೆ.
ಪ್ರಕರಣ ಸಂಬಂಧ ಲೋಕಾಯುಕ್ತ ಎಸ್.ಪಿ ಪುರುಷೋತ್ತಮ್ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಅದಕ್ಕೂ ಮೊದಲು ಘಟನೆ ನಡೆದ ಪ್ರದೇಶಕ್ಕೆ ಲೋಕಾಯುಕ್ತ ಎಸ್‌ಪಿ ಭೇಟಿ ನೀಡಿದ್ದರು.
ಇದನ್ನೂ ಓದಿ | Water Contamination | ಹೊಸಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 50ಕ್ಕೂ ಅಧಿಕ ಮಂದಿ ಅಸ್ವಸ್ಥ
ರಾಣಿಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗುತ್ತಿರುವ ಹೊಸ ಪ್ರಕರಣಗಳು ಹೆಚ್ಚುತ್ತಲಿವೆ. ಇಂಥ ಅಸ್ವಸ್ಥರಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಮುಂದುವರಿಸಲಾಗಿದೆ. ಜ.6ರಿಂದಲೇ ರಾಣಿಪೇಟೆಯಲ್ಲಿ ಅಶುದ್ಧ ಕುಡಿಯುವ ನೀರು ಸೇವಿಸಿ ಅನಾರೋಗ್ಯಪೀಡಿತರಾದ ಪ್ರಕರಣಗಳು ಕಾಣಲು ಆರಂಭವಾಗಿದ್ದವು. ಕಲುಷಿತ ನೀರು ಸೇವಿಸಿ ಮೊನ್ನೆಯಷ್ಟೇ ಲಕ್ಷ್ಮೀದೇವಿ ಎಂಬ ಮಹಿಳೆ ಸಾವೀಗೀಡಾಗಿದ್ದರು. ಅದೇ ದಿನ ಕಾರಣ ಕೇಳಿ ಐದು ಜನ ಅಧಿಕಾರಿಗಳಿಗೆ ಡಿಸಿ ವೆಂಕಟೇಶ ಬಾಬು ನೋಟಿಸ್ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಟ್ಯಾಂಕರ್ ಮೂಲಕ ರಾಣಿಪೇಟೆ ಏರಿಯಾಕ್ಕೆ ನೀರು ಪೂರೈಕೆಯಾಗುತ್ತಿದೆ.
ಇದೇ ರಾಣಿಪೇಟೆ ಏರಿಯಾದಲ್ಲಿಯೇ ಸಚಿವ ಆನಂದ್ ಸಿಂಗ್ ಕಚೇರಿಯಿದೆ.
ಇದನ್ನೂ ಓದಿ | Contaminated water | ರಾಮದುರ್ಗ ಕಲುಷಿತ ನೀರು ಸೇವನೆ ಪ್ರಕರಣ; ಮೃತರ ಕುಟುಂಬಕ್ಕೆ ₹10 ಲಕ್ಷ ಘೋಷಣೆ