ವಿಜಯನಗರ: ಹೊಸಪೇಟೆಯ (Vijayanagara) ಕೇಂದ್ರ ಸ್ಥಾನ ಜಿಲ್ಲಾ ಕ್ರೀಡಾಂಗಣದಲ್ಲಿ 405 ಅಡಿ ಎತ್ತರದ ಧ್ವಜ ಸ್ತಂಭ ಶನಿವಾರ (ಆ.6) ಸ್ಥಾಪನೆ ಮಾಡಲಾಗುತ್ತಿದೆ. ಸುಮಾರು ಆರು ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಮಹಾರಾಷ್ಟ್ರದಿಂದ ನಾಲ್ಕು ಲಾರಿಗಳಲ್ಲಿ ಧ್ವಜ ಸ್ತಂಭದ ಪರಿಕರಗಳು ಈಗಾಗಲೇ ಬಂದಿವೆ.
ರಸ್ತೆ ಉದ್ದಕ್ಕೂ ಸಾಲುಗಟ್ಟಿ ನಿಂತ ಬೃಹತ್ ಕಂಬಗಳನ್ನು ಲಾರಿ ಹೊತ್ತಿವೆ. ಧ್ವಜ ಸ್ತಂಭ ಪರಿಕರ ತುಂಬಿದ ಲಾರಿಗಳನ್ನು ಹೊಸಪೇಟೆ ಜನರು ಅದ್ಧೂರಿಯಾಗಿ ಸ್ವಾಗತ ಮಾಡಿದ್ದಾರೆ. ಧ್ವಜ ಸ್ತಂಭಗಳ ಪರಿಕರಗಳನ್ನು ಹೊತ್ತ ಲಾರಿಗಳ ಎದುರು ದ್ವಿಚಕ್ರ ವಾಹನಗಳಲ್ಲಿ ಮೆರವಣಿಗೆ ಮಾಡಲಾಯಿತು.
ಇದನ್ನೂ ಓದಿ | ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾರ್ಯಕ್ಕೆ ಸಿಗಲಿದೆ ಚಾಲನೆ: ಸಚಿವ ಆನಂದ್ ಸಿಂಗ್
ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣ ಆಗುತ್ತಿರುವ ಧ್ವಜ ಸ್ತಂಭಕ್ಕೆ ಪೂಜೆ ಸಲ್ಲಿಸಿ, ಸಂಜೆ ವೇಳೆ ಧ್ವಜ ಸ್ತಂಭ ಇನ್ಸ್ಟಾಲೇಷನ್ ಮಾಡಲಾಗುತ್ತಿದೆ. ಸಚಿವ ಆನಂದ್ ಸಿಂಗ್ ಪುತ್ರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಸಚಿವ ಆನಂದ್ ಸಿಂಗ್ ಮುತುವರ್ಜಿಯಲ್ಲಿ ಧ್ವಜ ಸ್ತಂಭ ಸ್ಥಾಪನೆಯಾಗುತ್ತಿದೆ.