Site icon Vistara News

Vijayanagara Election Results : ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಗವಿಯಪ್ಪಗೆ ಜಯ

Vijayanagara Election Results H R Gaviappa Winner

#image_title

ವಿಜಯನಗರ: ನೂತನ ವಿಜಯನಗರ ವಿಧಾನಸಭೆ (Vijayanagara Election Results) ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ಹೆಚ್ ಆರ್ ಗವಿಯಪ್ಪ (1,04,863) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸಿದ್ದಾರ್ಥ ಸಿಂಗ್ (71,140) ವಿರುದ್ಧ 33723 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ ಅವರು 83,214 ಮತಗಳನ್ನು ಪಡೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್. ಆರ್. ಗವಿಯಪ್ಪ ವಿರುದ್ಧ 8,228 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Karnataka Election: ಗ್ಯಾಸ್ ಸಿಲಿಂಡರ್‌ಗೆ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್;‌ 2014ರ ಮೋದಿ ತಂತ್ರ ಅನುಸರಿಸಿ ತಿರುಗೇಟು

ಇನ್ನು 2019ರ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ 85,477 ಮತ ಪಡೆದು ಕಾಂಗ್ರೆಸ್‌ನ ವೆಂಕಟರಾವ್ ಘೋರ್ಪಡೆ (55,352 ಮತ) ವಿರುದ್ಧ 30,125 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

Exit mobile version