Site icon Vistara News

Viral News: ಅಪಘಾತದಲ್ಲಿ ಮೃತಪಟ್ಟ ಸಂಗಾತಿಯ ಕಳೇಬರದ ಎದುರು ಬುರ್ಲಿ ಹಕ್ಕಿ ಕಂಬನಿ

A Button quails bird cries in front of its mates corpse

ಹಗರಿಬೊಮ್ಮನಹಳ್ಳಿ: ರಸ್ತೆ ದಾಟುವ ವೇಳೆ ವಾಹನವೊಂದು ಡಿಕ್ಕಿ (Vehicle collision) ಹೊಡೆದು ಹೆಣ್ಣು ಬುರ್ಲಿಯೊಂದು (Button quails) ಜೀವಬಿಟ್ಟಿದ್ದರಿಂದ, ಅದರ ಸಂಗಾತಿ ಗಂಡು ಬುರ್ಲಿ ಹಕ್ಕಿಯು ಕಳೇಬರದ ಪಕ್ಕದಲ್ಲೇ ಕುಳಿತು ಕಣ್ಣೀರು ಹಾಕಿತು. ಈ ಮನಕಲಕುವ ದೃಶ್ಯ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಕೊಂಡನಹಳ್ಳಿಯ ವ್ಯಾಪ್ತಿಯ ಹೊರವಲಯದಲ್ಲಿ ನಡೆದಿದೆ.

ಬುರ್ಲಿ (Button quails) ಎಂದು ಕರೆಯಲ್ಪಡುವ ಈ ನೆಲವಾಸಿ ಹಕ್ಕಿಗಳು ಗುಬ್ಬಚ್ಚಿಗಿಂತ ತುಸು ದೊಡ್ಡದಾಗಿರುತ್ತವೆ. ಹೆಣ್ಣು ಹಕ್ಕಿಗೆ ಹೆಚ್ಚಿನ ವರ್ಣವಿನ್ಯಾಸವಿರುತ್ತದೆ. ಇವು ಅತ್ಯಂತ ನಾಚಿಕೆ ಸ್ವಭಾವದ ಜೀವಿಗಳಾಗಿದ್ದು, ಮನುಷ್ಯರನ್ನ ಕಂಡರೆ ಸಾಕು ಕ್ಷಣಾರ್ಧದಲ್ಲಿ ಮಾಯವಾಗುತ್ತವೆ. ಆದರೆ ಸಂಗಾತಿ ತೀರಿಹೋಗಿದ್ದರಿಂದ ಯಾರೇ ಹತ್ತಿರ ಹೋದರೂ ಸ್ವಲ್ಪವೂ ಅಲುಗಾಡದೆ ಧರಣಿ ಮಾಡುವ ರೀತಿಯಲ್ಲಿ ಕುಳಿತಿರುವುದನ್ನು ನೋಡಿ ಜನ ಅಚ್ಚರಿಗೊಂಡರು.

ಇದನ್ನೂ ಓದಿ: Mayor Election: ಹುಬ್ಬಳ್ಳಿ ಧಾರವಾಡ ಪಾಲಿಕೆ ಮತ್ತೆ ಬಿಜೆಪಿ ತೆಕ್ಕೆಗೆ; ಶತಪ್ರಯತ್ನ ನಡೆಸಿದ ಶೆಟ್ಟರ್‌ ಟೀಮ್‌ಗೆ ಮುಖಭಂಗ

ಇದನ್ನು ಗಮನಿಸಿದ ಹಗರಿಬೊಮ್ಮನಹಳ್ಳಿ ಪಟ್ಟಣದ ಖಾಸಗಿ ಬ್ಯಾಂಕ್ ಮ್ಯಾನೇಜರ್ ಮಲ್ಲಿಕಾರ್ಜುನ ಅವರು, ಪಕ್ಷಿಗಳ ಪ್ರೇಮಿ ಬಾಚಿಗೊಂಡನಹಳ್ಳಿಯ ಮಹೇಶ್ ಹುರುಕಡ್ಲಿ ಅವರ ಗಮನಕ್ಕೆ ತಂದರು. ಅವರು ಸ್ಥಳಕ್ಕೆ ಭೇಟಿ ನೀಡಿ ಬುರ್ಲಿ ಹಕ್ಕಿಯ ನಡೆ ಕಂಡು ಆಶ್ಚರ್ಯ ವ್ಯಕ್ತಪಡಿಸಿದರು.

ಈ ಘಟನೆಯ ಬಗ್ಗೆ ಮಹೇಶ್ ಹುರುಕಡ್ಲಿ ಪ್ರತಿಕ್ರಿಯಿಸಿ “”ಬುರ್ಲಿ ಹಕ್ಕಿ ಸದಾ ಭಯಪಡುವ ಪಕ್ಷಿಗಳ ಜಾತಿಗೆ ಸೇರಿದೆ. ಈ ರೀತಿ ಸಂಗಾತಿಯ ಮೃತ ದೇಹದ ಪಕ್ಕವೇ ಕೂತಿರುವುದು ಅಪರೂಪದ ಘಟನೆಯಾಗಿದೆʼʼ ಎಂದು ಅಭಿಪ್ರಾಯಪಟ್ಟರು.

Exit mobile version