ಹರಪನಹಳ್ಳಿ: ಸೋಲು (defeat) ಗೆಲುವು (Victory) ಸಹಜ. ಆದರೆ ಕ್ರೀಡೆಯಲ್ಲಿ (Sports) ಭಾಗವಹಿಸುವುದು ಮುಖ್ಯ ಎಂದು ಹರಪನಹಳ್ಳಿ ಇಸಿಒ ಕಬೀರ್ ನಾಯ್ಕ್ ಹೇಳಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಜ್ಞಾನಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲೆಯ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ, ಮಕ್ಕಳಿಗೆ ಪಾಠದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ, ಪ್ರತಿಭೆಯನ್ನು ಗುರುತಿಸಬೇಕು. ಸೋಲು ಗೆಲುವು ಸಹಜ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಹೇಳಿದರು.
ಇದನ್ನೂ ಓದಿ: Chandrayaan 3: ಚಂದ್ರಯಾನ ನೌಕೆಯ 4ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಸಕ್ಸೆಸ್, ಚಂದಿರನ ಅಂಗಳಕ್ಕೆ ಮತ್ತಷ್ಟು ಹತ್ತಿರ!
ಚಿಕ್ಕ ಕಬ್ಬಳ್ಳಿ ಶಾಲಾ ವತಿಯಿಂದ ವಲಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಚಿಕ್ಕ ಕಬ್ಬಳ್ಳಿ ಸ.ಹಿ. ಪ್ರಾಥಮಿಕ ಶಾಲೆಯ ಮುಖ್ಯಗುರು ಬಸವರಾಜ್, ಜ್ಯೋತಿ ಬೆಳಗಿಸಿದರು. ಗ್ರಾ.ಪಂ ಸದಸ್ಯ ಪಾಂಡು ಧ್ವಜಾರೋಹಣ ನೆರವೇರಿಸಿದರು. ಚಿಕ್ಕ ಕಬ್ಬಳ್ಳಿ ಕೊಟ್ರೇಶ್ ಗುಂಡು ಎಸೆಯುವುದರ ಮೂಲಕ ಆಟಕ್ಕೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ 15 ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: Non-Basmati White Rice Export : ಬಾಸ್ಮತಿಯೇತರ ಅಕ್ಕಿ ರಫ್ತಿಗೆ ಭಾರತ ನಿಷೇಧ
ಈ ಸಂದರ್ಭದಲ್ಲಿ ಗುರುಮೂರ್ತಯ್ಯ, ಮುಖ್ಯ ಗುರು ಅರ್ಜುನ್ ಪರುಸಪ್ಪ, ಜಗದೀಶ್. ಲಕ್ಯಾನಾಯ್ಕ್, ಬಿ. ಮಂಜುನಾಥ್, ಸಿದ್ದೇಶ್ವರ, ಬಂದಮ್ಮ, ಚೇತನಾ, ಬಂದೋಳ್ ಸಿದ್ದೇಶ್, ರಮೇಶ್ ಸೇರಿದಂತೆ ಶಿಕ್ಷಕರು ಹಾಗೂ ಇತರರು ಹಾಜರಿದ್ದರು.