ಹರಪನಹಳ್ಳಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ (Karnataka election 2023) ಹರಪನಹಳ್ಳಿ ಕ್ಷೇತ್ರದಿಂದ ಎಂ.ಪಿ.ಲತಾ ಮಲ್ಲಿಕಾರ್ಜುನ ಗೆಲುವು ಸಾಧಿಸಿದ್ದಕ್ಕೆ, 371 ಜೆ (371 J) ಕಲಂ ಸೌಲಭ್ಯ ನಾನು ಮಾಡಿಸಿದ್ದು ಎಂದು ಸುಳ್ಳು ಹೇಳಿದವರಿಗೆ ತಕ್ಕ ಪಾಠ ಕಲಿಸಿದ್ದಕ್ಕೆ ಮಾಜಿ ಶಾಸಕ ದಿ. ಎಂ.ಪಿ.ರವೀಂದ್ರ ಅಭಿಮಾನಿಗಳು ಉಚ್ಚಂಗಿದುರ್ಗದ ಅಧಿದೇವತೆ ಉಚ್ಚೆಂಗೆಮ್ಮದೇವಿಗೆ 371 ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಲಾಗಿದೆ.
ಪಟ್ಟಣದ ಉಪ್ಪಾರಗೇರಿಯ ಶಿಕ್ಷಕ ಮೇಘರಾಜ್ ಅವರ ನೇತೃತ್ವದಲ್ಲಿ ಮುಖಂಡರು, ಉಚ್ಚಂಗಿದುರ್ಗದ ಉಚ್ಚೆಂಗೆಮ್ಮದೇವಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಪಾದಗಟ್ಟೆಯ ಬಳಿ 371 ತೆಂಗಿನಕಾಯಿ ಒಡೆದು ಭಕ್ತಿ ಅರ್ಪಿಸಿದರು.
ಇದನ್ನೂ ಓದಿ: Housewife death: ಗೃಹಿಣಿ ಅನುಮಾನಾಸ್ಪದ ಸಾವು, ಗಂಡನಿಂದಲೇ ಕೊಲೆ ಶಂಕೆ
ಶಿಕ್ಷಕ ಮೇಘರಾಜ್ ಮಾತನಾಡಿ, ಹೂವಿನಹಡಗಲಿ ಮಾಜಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರು ಉಚ್ಚಂಗಿದುರ್ಗ ಗ್ರಾಮದಲ್ಲಿ ಕಳೆದ ವಿಧಾನ ಪರಿಷತ್ ಚುನಾವಣಾ ಪ್ರಚಾರದ ವೇಳೆ ಹರಪನಹಳ್ಳಿ ತಾಲೂಕಿಗೆ 371ಜೆ ಕಲಂ ಸೌಲಭ್ಯ ಒದಗಿಸಿದ್ದು ನಾನು ಎಂದಿದ್ದರು. ಆಗ ಮಧ್ಯೆ ಪ್ರವೇಶಿಸಿದ್ದ ನಾನು, 371ಜೆ ಸೌಲಭ್ಯವನ್ನು ಕಲ್ಪಿಸಿದ್ದು ನೀವಲ್ಲ ಎಂ.ಪಿ.ರವೀಂದ್ರ ಅವರು ಎಂದು ಹೇಳಿದ್ದೆ. ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡು ದೇವಿ ಎಂದು ಬೇಡಿಕೊಂಡಿದ್ದೆ. ಅದರಂತೆ ಪರಮೇಶ್ವರ ನಾಯ್ಕ ಚುನಾವಣೆಯಲ್ಲಿ ಸೋತಿದ್ದಾರೆ. ದೇವಿ ತಕ್ಕ ಪಾಠ ಕಲಿಸಿದ್ದಾಳೆ. ಹೀಗಾಗಿ ದೇವಿಗೆ 371 ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಣೆ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ʼನೀರ ಯೋಧʼ ಶ್ರೀನಿವಾಸ ಹೆಬ್ಬಾರರ ಕೆಲಸ ಎಲ್ಲರಿಗೂ ಪ್ರೇರಣೆ: ನಟ ಗಣೇಶ್ ಶ್ಲಾಘನೆ
ಈ ವೇಳೆ ಮುಖಂಡರಾದ ಗುಡಿ ನಾಗಾರಾಜ್, ಜಕಾತಿ ಆನಂದ, ಗುಡೆಕಟ್ಟೆಕೆರೆ ಅಂಜಿನಪ್ಪ, ಶಿಕಾರಿ ಅಂಜಿನಪ್ಪ, ಮಟ್ಟೇರ ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯರ ತಾಲೂಕು ಒಕ್ಕೂಟದ ಅಧ್ಯಕ್ಷ ಕಡಬಗೆರೆ ಕಾರ್ತಿಕ್ ಸೇರಿದಂತೆ ಇತರರು ಹಾಜರಿದ್ದರು.