Srinivasa Hebbar work in giving life to water is an inspiration for all says Golden Star Ganesh ʼನೀರ ಯೋಧʼ ಶ್ರೀನಿವಾಸ ಹೆಬ್ಬಾರರ ಕೆಲಸ ಎಲ್ಲರಿಗೂ ಪ್ರೇರಣೆ: ನಟ ಗಣೇಶ್ ಶ್ಲಾಘನೆ - Vistara News

ಉತ್ತರ ಕನ್ನಡ

ʼನೀರ ಯೋಧʼ ಶ್ರೀನಿವಾಸ ಹೆಬ್ಬಾರರ ಕೆಲಸ ಎಲ್ಲರಿಗೂ ಪ್ರೇರಣೆ: ನಟ ಗಣೇಶ್ ಶ್ಲಾಘನೆ

Srinivasa Hebbar: ಶಿರಸಿ ಜೀವಜಲ ಕಾರ್ಯಪಡೆ ವತಿಯಿಂದ ಕಳೆದ 45 ದಿನಗಳಿಂದ ನಿರಂತರ ಶ್ರಮವಹಿಸಿ ಕರಸುಳ್ಳಿ ಗ್ರಾಮದಲ್ಲಿ ಕರೆ ಪುನರುಜ್ಜೀವನ ನಡೆಸಲಾಗಿತ್ತು. ಈಗ ಅದರ ಸಮರ್ಪಣಾ ಕಾರ್ಯಕ್ರಮ ನಡೆಸಲಾಗಿದ್ದು, ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ನಾಮಫಲಕವನ್ನು ಅನಾವರಣಗೊಳಿಸಿದರು.

VISTARANEWS.COM


on

lake programme inaguration
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಸ್ತಾರ ನ್ಯೂಸ್‌, ಶಿರಸಿ

ಪ್ರಕೃತಿಗೆ ನಾವು ಏನು ಕೊಡುತ್ತೇವೆಯೋ ಅದೂ ಸಹ ನಮಗೆ ಅದನ್ನೇ ನೀಡುತ್ತದೆ. ಹಾಗಾಗಿ ಪರಿಸರಕ್ಕೆ ನಮ್ಮಿಂದ ಕೈಲಾದಷ್ಟು ಒಳಿತನ್ನೇ ಬಯಸೋಣ. ನೀರಿಗಾಗಿ ಬದುಕನ್ನೇ ಮೀಸಲಿಟ್ಟಿರುವ ಶ್ರೀನಿವಾಸ ಹೆಬ್ಬಾರ (Srinivasa Hebbar) ಅವರ ಕೆಲಸಗಳು ಜನರಿಗೆ ಪ್ರೇರಣೆಯಾಗಿದೆ ಎಂದು ಖ್ಯಾತ ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿಪ್ರಾಯಪಟ್ಟರು.

ತಾಲೂಕಿನ ಕರಸುಳ್ಳಿ ಗ್ರಾಮದಲ್ಲಿ ಶಿರಸಿ ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವಗೊಂಡ ಕೆರೆ ಸಮರ್ಪಣೆಯ ನಾಮಫಲಕ ಅನಾವರಣ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಗಣೇಶ್‌ ಮಾತನಾಡಿದರು.

ಇದನ್ನೂ ಓದಿ: Srinivas Hebbar: ಜೈನ ಮಠದ ಕೆರೆಗೆ ಜೀವ ತುಂಬಿದ ಶ್ರೀನಿವಾಸ ಹೆಬ್ಬಾರ್‌; ಇನ್ನೊಂದು ವಾರದಲ್ಲಿ ಕಾಮಗಾರಿ ಪೂರ್ಣ

ಪರಿಸರಕ್ಕೆ ನಾವು ಪ್ರೀತಿ ತುಂಬುವುದರಿಂದ ಅದು ಜೀವಸಂಕುಲಕ್ಕೆ ಹೆಚ್ಚಿನ ಅನುಕೂಲ ನೀಡುತ್ತದೆ. ಪರಿಸರಕ್ಕೆ ಇನ್ನಷ್ಟು ಒಳಿತನ್ನು ಮಾಡಬೇಕು. ನಮಗೆಲ್ಲ ಜೀವ ಕೊಡುವುದು ನೀರು. ನೀರಿಗೆ ಜೀವ ಕೊಡುವವರು ಶ್ರೀನಿವಾಸ ಹೆಬ್ಬಾರರು. ಇವರು ಪರಿಸರಕ್ಕೆ, ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಇವರು ಮಾಡುವ ಕೆಲಸಗಳು ನಾಲ್ಕಾರು ಜನರಿಗೆ ಪ್ರೇರಣೆಯಾಗಲಿದೆ ಎಂದು ಗಣೇಶ್‌ ಹೇಳಿದರು.

Unveiling nameplate of lake in sirsi
ಕೆರೆ ಸಮರ್ಪಣೆಯ ನಾಮಫಲಕ ಅನಾವರಣ ಮಾಡಿದ ನಟ ಗಣೇಶ್‌, ಶ್ರೀನಿವಾಸ ಹೆಬ್ಬಾರ್‌, ಹರಿಪ್ರಕಾಶ್‌ ಕೋಣೆಮನೆ, ಎಚ್‌ ವಿ ಧರ್ಮೇಶ್‌ ಮತ್ತಿತರರಿದ್ದರು.

ಪ್ರತಿಫಲ ಅಪೇಕ್ಷೆ ಇಲ್ಲದ ಜನಪರ ಕೆಲಸ: ಹರಿಪ್ರಕಾಶ್‌ ಕೋಣೆಮನೆ

ವಿಸ್ತಾರ ನ್ಯೂಸ್‌ ಸಿಇಒ ಹಾಗೂ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ಮಾತನಾಡಿ, ಒಬ್ಬ ವ್ಯಕ್ತಿಗೆ ಸಂಕಲ್ಪ ಶಕ್ತಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಶ್ರೀನಿವಾಸ ಹೆಬ್ಬಾರ್ ಉದಾಹರಣೆ ಆಗಿದ್ದಾರೆ. ಯಾವ ಸರ್ಕಾರ, ಯಾವ ಜನಪ್ರತಿನಿಧಿಗಳೂ ಮಾಡದ ಕೆಲಸವನ್ನು ಹೆಬ್ಬಾರ್ ಅವರು ಮಾಡುತ್ತಿದ್ದಾರೆ. ಯಾವುದೇ ಪ್ರತಿಫಲವನ್ನು ಅಪೇಕ್ಷೆ ಮಾಡದೆ, ಜನಪರ ಕೆಲಸಗಳನ್ನು ಬಹಳ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.

welcome for Golden Star Ganesh
ನಟ ಗಣೇಶ್‌ಗೆ ಹೂಮಳೆಯ ಸ್ವಾಗತ

ಶಿರಸಿ ಭಾಗದಲ್ಲಿ ಇದುವರೆಗೆ 20ಕ್ಕೂ ಅಧಿಕ ಕೆರೆಗಳನ್ನು ಅಭಿವೃದ್ಧಿಪಡಿಸಿರುವ ಶ್ರೀನಿವಾಸ್ ಹೆಬ್ಬಾರ್ ಅವರ ಡಿಕ್ಷನರಿಯಲ್ಲಿ ನೋ‌ ಎನ್ನುವ ಶಬ್ದವೇ ಇಲ್ಲ. ಅವರ ಇಚ್ಛಾಶಕ್ತಿ, ಪರಿಶ್ರಮ, ಕಾಳಜಿ ಇದಕ್ಕೆ ಕಾರಣ. ಶ್ರೀನಿವಾಸ್ ಹೆಬ್ಬಾರ್ ಅವರ ಪತ್ನಿ, ಕುಟುಂಬಸ್ಥರು ಸಹ ಅವರಿಗೆ ಈ ಎಲ್ಲ ಸತ್ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

Srinivas Hebbar couple felicitated
ಶ್ರೀನಿವಾಸ ಹೆಬ್ಬಾರ್‌ ದಂಪತಿಗೆ ಸನ್ಮಾನ

ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಸಹಾಯವನ್ನು ಸಮಾಜಕ್ಕೆ ಮಾಡಿದರೆ ದೇಶ ಸುಭಿಕ್ಷವಾಗಿರುತ್ತದೆ. ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿದ ಸಮಯದಲ್ಲಿ ನೆರವಿಗೆ ನಿಲ್ಲುವ ಧೀಮಂತ ನಾಯಕ ಶ್ರೀನಿವಾಸ ಹೆಬ್ಬಾರ್. ಚುನಾವಣೆಗೆ ಸ್ಪರ್ಧಿಸುವಂತೆ ಎಲ್ಲ ಪಕ್ಷದ ಹಿರಿಯ ನಾಯಕರು ಒತ್ತಡ ಹೇರಿದರೂ ಒಪ್ಪದೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮತನವನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಹರಿಪ್ರಕಾಶ್‌ ಕೋಣೆಮನೆ ತಿಳಿಸಿದರು.

ಇಂದಿನಿಂದಲೇ ನೀರಿನ ರಕ್ಷಣೆಯಾಗಲಿ: ಶ್ರೀನಿವಾಸ ಹೆಬ್ಬಾರ್

ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ನಿರ್ದೇಶಕರಾದ ಶ್ರೀನಿವಾಸ ಹೆಬ್ಬಾರ್ ಅವರು ಮಾತನಾಡಿ, ಮಾರ್ಚ್ 25ರಂದು ಕರಸುಳ್ಳಿ ಕೆರೆ ಅಭಿವೃದ್ಧಿ ಕೆಲಸವನ್ನು ಪ್ರಾರಂಭ ಮಾಡಿದ್ದೆವು. ಸತತ 45 ದಿನಗಳ ಕಾಲ ಕೆಲಸ ಮಾಡಿ ಗ್ರಾಮಸ್ಥರಿಗೆ ಹಸ್ತಾಂತರ ಮಾಡಿದ್ದೇವೆ. ಜೀವ ಜಲ ಕಾರ್ಯಪಡೆ ಆರಂಭವಾಗಲು ಮೂಲ ಕಾರಣ ರಾಜು ಮೊಗವೀರ ಅವರು. ಕಾರ್ಯಪಡೆ ಆರಂಭವಾದ 24 ಗಂಟೆಯೊಳಗೆ ನಾವು ಕೆರೆ ಅಭಿವೃದ್ಧಿ ಕೆಲಸವನ್ನು ಪ್ರಾರಂಭ ಮಾಡಿದ್ದೆವು. ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮ ಕೈಲಾದಷ್ಟು ಕೊಡುಗೆ ನೀಡಬೇಕು. ಕರಸುಳ್ಳಿ ಕೆರೆ ಅಭಿವೃದ್ಧಿ ಮಾಡುವಾಗ ಗ್ರಾಮಸ್ಥರು ಬಹಳ ಸಹಕಾರ ನೀಡಿದ್ದಾರೆ. ಮುಂದೊಂದು ದಿನ ನೀರಿಗಾಗಿ ಯುದ್ಧವಾಗುವ ಸಂಭವ ಬರಬಹುದು. ಆದ್ದರಿಂದ ನಾವು ಇಂದಿನಿಂದಲೇ ನೀರಿನ ರಕ್ಷಣೆ ಬಗ್ಗೆ ಗಮನಹರಿಸಬೇಕಿದೆ ಎಂದು ಹೇಳಿದರು.

ಕೆರೆ ಸಮರ್ಪಣೆಯ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ‌ನಟ ಗಣೇಶ್

ಜಲಮೂಲಗಳು ಅಭಿವೃದ್ಧಿಯಾಗಲಿ: ರಾಜು ಮೊಗವೀರ

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ಮಾನವತ್ವದ ಸೆಲೆ ಚಿಗುರಿದಾಗ ಅದು ದೈವತ್ವಕ್ಕೆ ಏರುತ್ತದೆ. 2016ರಲ್ಲಿ ಮಳೆಯ ಅಭಾವದಿಂದ ನೀರಿನ ಸಮಸ್ಯೆ ಶಿರಸಿಯಲ್ಲಿ ಉಂಟಾಗಿತ್ತು. ಜಲಮೂಲಗಳನ್ನು ಮರೆತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದರು. ನಂತರ ಹಲವು ಬಾರಿ ಚರ್ಚೆ ನಡೆಸಿ 2017ರ ಯುಗಾದಿ ದಿನದಂದು ಆನೆಹೊಂಡ ಕೆರೆಯನ್ನು ಹೂಳೆತ್ತುವ ಮೂಲಕ ಕೆಲಸ ಪ್ರಾರಂಭ ಮಾಡಲಾಯಿತು. ಈ ಕೆಲಸಗಳು ಶ್ರೀನಿವಾಸ ಹೆಬ್ಬಾರ್ ನಾಯಕತ್ವದಲ್ಲಿ ಪ್ರಾರಂಭವಾಯಿತು. ಕೆರೆ ಹೂಳೆತ್ತುವ ಕೆಲಸ ಮಾಡುವಾಗ ಸಾಕಷ್ಟು ಸವಾಲುಗಳು ಎದುರಾಗುತ್ತದೆ. ಅದೆಷ್ಟೋ ಕೆರೆಗಳು ಅತಿಕ್ರಮಣಕ್ಕೊಳಗಾಗಿದ್ದವು. ಅಂತಹ‌ ಕೆರೆಗಳನ್ನೂ ಅಭಿವೃದ್ಧಿಪಡಿಸಲಾಗಿದೆ. ಹಣವಂತರು ಬಹಳ ಮಂದಿ ಇದ್ದಾರೆ. ಆದರೆ, ಹಣವನ್ನು ಜನೋಪಯೋಗಿ ಕಾರ್ಯಗಳಿಗೆ ಬಳಸುವ ಮನಸ್ಸು ಇರುವವರು ಬಹಳ ವಿರಳ. ಕೆರೆಗಳು ನಮ್ಮ ಅಕ್ಷಯ ಪಾತ್ರೆಗಳು. ಕೆರೆಗಳಲ್ಲಿ ನೀರಿದ್ದರೆ ಭೂಮಿ ತಂಪಾಗಿರುತ್ತದೆ. ಜಲಮೂಲಗಳು ಅಭಿವೃದ್ಧಿಯಾಗಿದ್ದರೆ ಪರಿಸರ ಸಮೃದ್ಧವಾಗಿರುತ್ತದೆ ಎಂದರು.

ಕರಸುಳ್ಳಿ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಶ್ರೀನಿವಾಸ ಹೆಬ್ಬಾರ್ ದಂಪತಿಯನ್ನು ಸನ್ಮಾನಿಸಲಾಯಿತು. ವಿಸ್ತಾರ ಮೀಡಿಯಾ ಚೇರ್ಮನ್‌, ವ್ಯವಸ್ಥಾಪಕ ನಿರ್ದೇಶಕರಾದ ಎಚ್‌ ವಿ ಧರ್ಮೇಶ್, ಶಿರಸಿ ಉಪವಿಭಾಗಾಧಿಕಾರಿ ದೇವರಾಜ್ ಆರ್., ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಕೇಶವ ಹೆಗಡೆ, ಡಿ.ಆರ್. ಭಟ್ ಸೇರಿ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: Documents Digitalization: ಶ್ರೀನಿವಾಸ್‌ ಹೆಬ್ಬಾರ್‌ ಮತ್ತೊಂದು ಸಾಹಸ; ಶಿರಸಿ ಉಪ ವಿಭಾಗದ ದಾಖಲೆ ಸಂಪೂರ್ಣ ಡಿಜಿಟಲೀಕರಣ

ಹಾಡು ಹಾಡಿ ರಂಜಿಸಿದ ಗೋಲ್ಡನ್‌ ಸ್ಟಾರ್‌

ಈ ವೇಳೆ ಸಾರ್ವಜನಿಕರು ಹಾಡು ಹೇಳುವಂತೆ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಬೇಡಿಕೆಯಿಟ್ಟರು. ಅಭಿಮಾನಿಗಳ ಒತ್ತಾಸೆಗೆ ಮಣಿದ ಗಣೇಶ್‌, ಹಾಡು ಹೇಳಿ ರಂಜಿಸಿದರು. ಈ ಸಂದರ್ಭದಲ್ಲಿ ಗಣೇಶ್ ಜತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉತ್ತರ ಕನ್ನಡ

Lok Sabha Election 2024: ಉ.ಕ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನದ ಗುರಿ; ಡಿಸಿ

Lok Sabha Election 2024: ಕಾರವಾರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ನಡೆಯಿತು.

VISTARANEWS.COM


on

kaalnadige Jatha programme in Uttara kannada
Koo

ಕಾರವಾರ: ಜಿಲ್ಲೆಯಾದ್ಯಂತ ಮತದಾನ ಜಾಗೃತಿಗಾಗಿ (Voting Awareness) ಜಿಲ್ಲಾ ಸ್ವೀಪ್ ಸಮಿತಿ ನೇತೃತ್ವದಲ್ಲಿ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಕಳೆದ ವಿಧಾನಸಭಾ ಚುನಾವಣೆಗಿಂತ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮತದಾರರು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡಬೇಕು ಎಂದು ಡಿಸಿ ಗಂಗೂಬಾಯಿ ಮಾನಕರ್‌ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪಾರರ್ದಶಕ ಮತ್ತು ನ್ಯಾಯ ಸಮ್ಮತವಾದ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 85 ವರ್ಷ ಮೇಲ್ಪಟ್ಟ ಹಿರಿಯ ನೋಂದಾಯಿತ ನಾಗರಿಕರು ಹಾಗೂ ದಿವ್ಯಾಂಗ ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗಿದ್ದು, ಮತದಾರರನ್ನು ಜಾಗೃತಗೊಳಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: Char Dham Yatra 2024: ಈ ಬೇಸಿಗೆಯಲ್ಲಿ ಚಾರ್ ಧಾಮ್ ಯಾತ್ರೆಗೆ ಸಿದ್ಧರಾಗಿ! ನೋಂದಣಿ ಮಾಹಿತಿ ಇಲ್ಲಿದೆ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ ಮಾತನಾಡಿ, ಉತ್ತಮ ಜನ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಯುವ ಮತದಾರರ ಪಾತ್ರ ಮಹತ್ವದ್ದಾಗಿರುತ್ತದೆ. ತಾವೆಲ್ಲರೂ ಯಾವುದೇ ಆಮಿಷಗಳಿಗೆ ಒಳಗಾಗದೇ ಜಾಗೃತ ಮತದಾರರಾಗಬೇಕು.

ನಿಮ್ಮ ಕುಟುಂಬದ ಸದಸ್ಯರಿಗೆ ಮತ್ತು ಅಕ್ಕಪಕ್ಕದ ಮನೆಯವರಿಗೆ ಕಡ್ಡಾಯ ಮತದಾನದ ಮಹತ್ವವನ್ನು ಮನವರಿಕೆ ಮಾಡಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರಣೆ ನೀಡಬೇಕು. ಸಮಾಜಕ್ಕೆ ಉತ್ತಮರೆನಿಸಬಹುದಾದ ನಾಯಕರನ್ನು ಆರಿಸುವಲ್ಲಿ ಪ್ರಜ್ಞಾವಂತ ಯುವ ಮತದಾರರು ನೆರವಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಆವರಣದಿಂದ ಆರಂಭಗೊಂಡ ಜಾಥಾವು ಡಾ.ಪಿಕಳೆ ರಸ್ತೆ, ಸುಭಾಷ್ ಚಂದ್ರ ಬೋಸ್ ವೃತ್ತ, ಸವಿತಾ ಹೋಟೆಲ್ ವೃತ್ತ, ಟಿಎಚ್‌ಒ ಆಫೀಸ್ ಸರ್ಕಲ್ ಮಾರ್ಗವಾಗಿ ಸಾಗಿ ಜಿ.ಪಂ. ಆವರಣದಲ್ಲಿ ಅಂತ್ಯಗೊಂಡಿತು. ಬಳಿಕ ಜಿ.ಪಂ. ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ‘ನಾ ಭಾರತ’ ಚುನಾವಣಾ ಜಾಗೃತಿ ಗೀತೆಯನ್ನು ಪ್ರದರ್ಶಿಸಲಾಯಿತು.

ಇದನ್ನೂ ಓದಿ: Money Guide: ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಾ? ಇದರಲ್ಲಿನ ವಿಧಗಳ ಬಗ್ಗೆ ಇಲ್ಲಿದೆ ಮಾಹಿತಿ

ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನೀರಜ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Continue Reading

ಉತ್ತರ ಕನ್ನಡ

Uttara Kannada News: ಬನವಾಸಿಯ ಐತಿಹಾಸಿಕ ಶ್ರೀ ಉಮಾಮಧುಕೇಶ್ವರ ದೇವರ ಮಹಾರಥೋತ್ಸವ

Uttara Kannada News: ಬನವಾಸಿಯ ಐತಿಹಾಸಿಕ ಮಾತೋಬರ ಶ್ರೀ ಉಮಾಮಧುಕೇಶ್ವರ ದೇವರ ಮಹಾರಥೋತ್ಸವು ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

VISTARANEWS.COM


on

Mathobara Sri Umamadhukeshwara devara Maharathotsava at Banavasi
Koo

ಬನವಾಸಿ: ಬನವಾಸಿಯ ಐತಿಹಾಸಿಕ ಮಾತೋಬರ ಶ್ರೀ ಉಮಾಮಧುಕೇಶ್ವರ ದೇವರ ಮಹಾರಥೋತ್ಸವು ಭಕ್ತ ಸಾಗರದ ಮಧ್ಯೆ ವಿಜೃಂಭಣೆಯಿಂದ (Uttara Kannada News) ನಡೆಯಿತು.

ಮಹಾರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ಶ್ರೀ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿ, ಬಳಿಕ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಉಮಾಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ಮನ್ಮಹಾಸ್ಯಂದನ ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.

ಇದನ್ನೂ ಓದಿ: Jackfruit Benefits: ಈ ಬೇಸಿಗೆಯಲ್ಲಿ ಹಲಸಿನಹಣ್ಣನ್ನು ಯಾಕೆ ತಿನ್ನಲೇಬೇಕು ಗೊತ್ತೆ? ಇಲ್ಲಿವೆ 10 ಕಾರಣಗಳು!

ಪ್ರತಿಷ್ಟಾಪನೆಯ ನಂತರ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಭಕ್ತಿ ಸಮರ್ಪಿಸಿದರು. ರಾತ್ರಿ 12 ಗಂಟೆಯವರೆಗೆ ಸಾವಿರಾರು ಭಕ್ತರು ದರ್ಶನ ಪಡೆದರು.

ಬಳಿಕ ರಾತ್ರಿ 12-30ಕ್ಕೆ ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರ ಹರ್ಷೋದ್ಗಾರದ ನಡುವೆ ಶ್ರೀ ಮಧುಕೇಶ್ವರ ದೇವರ ಮಹಾರಥೋತ್ಸವ ಆರಂಭಗೊಂಡಿತು. ಬೃಹತ್ ರುದ್ರಾಕ್ಷಿ ಮಾಲೆ, ವಿವಿಧ ಫಲ-ಪುಷ್ಪ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಹಾರಥವನ್ನು ಭಕ್ತ ಸಮೂಹ ಹರಹರ ಮಹಾದೇವ ಎಂಬ ಜಯ ಘೋಷ ಮೊಳಗಿಸುತ್ತ ಎಳೆಯುತ್ತ ಸಾಗಿದರು.

ಇದನ್ನೂ ಓದಿ: Wipro Q4 Results: ಐಟಿ ದೈತ್ಯ ವಿಪ್ರೋದ ನಿವ್ವಳ ಲಾಭದಲ್ಲಿ ಶೇ. 8ರಷ್ಟು ಕುಸಿತ

ನೆರೆದಿದ್ದ ಸಾವಿರಾರು ಭಕ್ತರು ಹೂ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ಮಹಾ ರಥೋತ್ಸವವು ಶುಕ್ರವಾರ ಬೆಳಿಗ್ಗೆ 5 ಗಂಟೆ ವೇಳೆಗೆ ಸಂಪನ್ನಗೊಂಡಿತು.

Continue Reading

ಮಳೆ

Karnataka Weather : ವರ್ಷಾಘಾತಕ್ಕೆ ಉತ್ತರ ಕರ್ನಾಟಕ ಸುಸ್ತು; ರಾತ್ರಿಯೆಲ್ಲ ಗಾಳಿ ಸಹಿತ ಮಳೆಯಾರ್ಭಟ

Rain News : ಹಲವೆಡೆ ಸುರಿಯುತ್ತಿರುವ ಬಿರುಗಾಳಿ ಮಳೆಯು ನಾನಾ ಅನಾಹುತಗಳನ್ನು ಸೃಷ್ಟಿ ಮಾಡಿದೆ. ಗಾಳಿ ಮಳೆಗೆ ಮನೆಯ ಚಾವಣಿ ಹಾರಿ ಹೋಗಿದೆ. ಮತ್ತೊಂದು ಕಡೆಗೆ ಸಿಡಿಲಿಗೆ ಜಾನುವಾರು ಹಾಗೂ ತೆಂಗಿನ ಮರ ಸುಟ್ಟು ಕರಕಲಾಗಿದೆ. ಮುಂದಿನ 3 ಗಂಟೆಯಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಬೇಸಿಗೆ ಮಳೆ (Rain News) ಅಬ್ಬರ ಜೋರಾಗಿದೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ಹಾಗೂ ಯಲಹಂಕದಲ್ಲಿ ವರ್ಷದ ಮೊದಲ ಮಳೆಯಾಗಿದೆ. ಕಾದ ಕೆಂಡದಂತಾಗಿದ್ದ ಧರೆಗೆ ಶುಕ್ರವಾರ ಮಧ್ಯಾಹ್ನ ಕೆಲಕಾಲ ಸುರಿದ ಮಳೆಯು ಜನರಲ್ಲಿ ಸಂತಸ (Karnataka weather Forecast) ಮೂಡಿಸಿತ್ತು.

ಶುಕ್ರವಾರ ಸಂಜೆ ನಂತರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಬಳ್ಳಾರಿ, ಬೀದರ್‌, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮೈಸೂರು, ರಾಮನಗರ, ಶಿವಮೊಗ್ಗದ ಒಂದೆರಡು ಕಡೆಗಳಲ್ಲಿ ಗಾಳಿ ಸಹಿತ ಮಳೆಯಾಗಿದೆ.

ಇನ್ನೂ ತುಮಕೂರಿನ ಕುಣಿಗಲ್ ತಾಲೂಕು ಡಿ.ಹೊಸಹಳ್ಳಿ, ರಾಜೇಂದ್ರಪುರ ಭಾಗದಲ್ಲಿ ಗಾಳಿ- ಮಳೆಯ ಅಬ್ಬರಕ್ಕೆ ಮನೆಯ ಮೇಲ್ಛಾವಣಿಗಳು ಹಾರಿಹೋಗಿದ್ದವು. ಜತೆಗೆ ಮರಗಳೆಲ್ಲವೂ ಧರೆಗುರುಳಿದ್ದವು. ಕುಣಿಗಲ್ ತಾಲೂಕಿನ ಹಲವೆಡೆ ನಿನ್ನೆ ತುಂತುರು ಮಳೆಯೊಂದಿಗೆ ಬಿರುಗಾಳಿ ಬೀಸಿದೆ. ಬಿರುಗಾಳಿಯ ರಭಸಕ್ಕೆ 30ಕ್ಕೂ ಹೆಚ್ಚು ಮರಗಳು ನೆಲಸಮವಾಗಿತ್ತು. ಡಿ.ಹೊಸಹಳ್ಳಿಯಲ್ಲಿ ಶಾಲಾ ಕಟ್ಟಡದ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿತ್ತು. ಇನ್ನು ರಾಜೇಂದ್ರಪುರ ಗ್ರಾಮದಲ್ಲಿ ಕಲ್ಲೂರಯ್ಯ, ಬರಿಯಯ್ಯ, ಚಿಕ್ಕಕೂರಲಯ್ಯ ಎಂಬುವವರ ಮನೆಗಳ ಮೇಲ್ಛಾವಣಿಯೇ ಹಾರಿಹೋಗಿತ್ತು. ಸ್ಥಳಕ್ಕೆ ಕುಣಿಗಲ್ ಶಾಸಕ ಡಾ.ರಂಗನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Fraud Case : ಉದ್ಯಮಿಗೆ ಚಮತ್ಕಾರಿ ಚೆಂಬು ಕೊಟ್ಟವರು ಅರೆಸ್ಟ್‌; 22 ಬ್ಯಾಂಕ್‌ಗಳಿಗೆ ಟೋಪಿ ಹಾಕಿದ ಫ್ಯಾಮಿಲಿ ಲಾಕ್‌

ಸಿಡಿಲು ಬಿಡಿದು ಹೊತ್ತಿ ಉರಿದ ತೆಂಗಿನ ಮರ

ಚಿಕ್ಕಮಗಳೂರಿನ ಬಾಳೆಹೊನ್ನುರು-ಕೊಪ್ಪ ರಸ್ತೆಯಲ್ಲಿ ಮಧ್ಯರಾತ್ರಿ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿತ್ತು. ಕೊಪ್ಪ ರಸ್ತೆಯ ಇಸಾಕ್ ಎಂಬುವರ ಮನೆಯ ತೆಂಗಿನ ಮರ ಹೊತ್ತಿ ಉರಿದಿತ್ತು. ಸಿಡಿಲು ಬಡಿದು ಸಂಪೂರ್ಣ ಸುಟ್ಟುಹೋಗಿತ್ತು. ಕಳೆದ ರಾತ್ರಿ ಬಾಳೆಹೊನ್ನೂರು ಸುತ್ತಮುತ್ತ ಗಾಳಿ-ಮಳೆ ಸುರಿದಿತ್ತು.

karnataka weather Forecast

ಸಿಡಿಲಿಗೆ ಮುರಿದು ಬಿದ್ದ ದೇವಾಲಯದ ಗರುಡುಗಂಬ

ಸಿಡಿಲು ಬಡಿದು ದೇವಾಲಯದ ಗರುಡುಗಂಬ ಮುರಿದು ಬಿದ್ದಿತ್ತು. ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಹಗರನೂರಿನಲ್ಲಿ ಘಟನೆ ನಡೆದಿತ್ತು. ನಿನ್ನೆ ತಡರಾತ್ರಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿತ್ತು. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸೇರಿದ ಗರಡುಗಂಬಕ್ಕೆ ಸಿಡಿಲು ಬಡಿದ ಪರಿಣಾಮ ಮುರಿದು ಬಿದ್ದಿತ್ತು. ಅಲ್ಲದೆ ಹಿರೇಹಡಗಲಿಯಲ್ಲಿ ರೈತ ಬಂದ್ರಕಳ್ಳಿ ಲಂಕೆಪ್ಪ ಎಂಬವರ ಹಸುವು ಸಿಡಿಲಿಗೆ ಬಲಿಯಾಗಿತ್ತು. ಹಿರೇಕೊಳಚಿ, ಚಿಕ್ಕಕೊಳಚಿ, ನಾಗತಿಬಸಾಪುರ ಹಿರೇಹಡಗಲಿ ಸೇರಿ ಹತ್ತಾರು ಗ್ರಾಮಗಳಲ್ಲಿ ಮಳೆಯಾಗಿದೆ. ಹಗರನೂರು ಗ್ರಾಮದ ರಸ್ತೆ ಮೇಲೆ ಮರಗಳು ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಾಸದ ಮನೆ, ದನದ ಕೊಟ್ಟಿಗೆ ಮೇಲೆ ಹಾಕಲಾಗಿದ್ದ ತಗಡುಗಳು ಬಿರುಗಾಳಿಗೆ ಹಾರಿಹೋಗಿದ್ದವು.

ಉತ್ತರ ಕರ್ನಾಟಕದಲ್ಲಿ ಮಳೆ ಅಬ್ಬರ

ಗುರುವಾರದಂದು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿ, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಅಥಣಿ ಹಾಗೂ ನಿಪ್ಪಾಣಿಯಲ್ಲಿ ತಲಾ 6 ಸೆಂ.ಮೀ ಮಳೆಯಾಗಿದೆ. ಮಹಾಲಿಂಗಪುರ 4, ಹೊನ್ನಾವರ, ಲೋಕಾಪುರ, ಗದಗ, ಚಿಕ್ಕೋಡಿ, ಸೇಡಬಾಳ, ಟಿಕ್ಕೋಟ, ಹುಂಚದಕಟ್ಟೆ, ಬೇಲೂರು, ತ್ಯಾಗರ್ತಿಯಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಮುಂಡಗೋಡು, ಹಾವೇರಿ, ಹಾವೇರಿ ಎಪಿಎಂಸಿ , ರಬಕವಿ , ಕುಂದಗೋಳ , ಸಂಕೇಶ್ವರ, ಕಲಘಟಗಿ , ಯಡವಾಡ, ಪೊನ್ನಂಪೇಟೆ, ಕೊಡಗು, ಹರಪನಹಳ್ಳಿಯಲ್ಲಿ ತಲಾ 2 ಸೆಂ.ಮೀ ಹಾಗೂ ಹಳಿಯಾಳ, ಸಿದ್ದಾಪುರ, ಗೋಕಾಕ್‌ , ರಾಣೆಬೆನ್ನೂರು, ಧಾರವಾಡ, ಮಂಡ್ಯದಲ್ಲಿ 1 ಸೆಂ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 41.4 ಡಿ.ಸೆ ಕಲಬುರಗಿ ಮತ್ತು ರಾಯಚೂರಿನಲ್ಲಿ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಉತ್ತರ ಕನ್ನಡ

Self Harming : ಕಾಲೇಜಿನಿಂದ ಬಂದವಳೇ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

Self Harming : ಕಾಲೇಜು ಮುಗಿಸಿ ಮನೆಗೆ ವಾಪಸ್‌ ಬಂದಿದ್ದ ಯುವತಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

VISTARANEWS.COM


on

By

Self Harming In Karwar
Koo

ಕಾರವಾರ: ಬಾವಿಗೆ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ಈ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಬೆಳಕೆಯ ಕಟಗೇರಿಯಲ್ಲಿ ನಡೆದಿದೆ. ದೀಕ್ಷಾ ನಾಯ್ಕ (22) ಮೃತ ದುರ್ದೈವಿ.

ದೀಕ್ಷಾ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಎಂದಿನಂತೆ ಬೆಳಗ್ಗೆ ಕಾಲೇಜಿ ಹೋಗಿ ಮನೆಗೆ ಬಂದಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳು ಕಾಣದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಕಡೆಗೆ ಅನುಮಾನಗೊಂಡು ಬಾವಿಯಲ್ಲಿ ನೋಡಿದಾಗ ಮೃತದೇಹವು ಪತ್ತೆಯಾಗಿದೆ.

ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀರಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Assault Case: ಸಿಸಿಬಿ ಪೊಲೀಸರ ಮೇಲೆ ಕಲ್ಲು, ದೊಣ್ಣೆಯಿಂದ ನೈಜೀರಿಯಾ ಪ್ರಜೆಗಳು ಅಟ್ಯಾಕ್‌

ಸಾಲಗಾರರ ಕಾಟ; ಹೆಂಡತಿ-ಮಕ್ಕಳಿಗೆ ವಿಷವಿಕ್ಕಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ

ಮಂಡ್ಯ: ಐಪಿಎಲ್ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ (IPL‌ Betting) ಲಕ್ಷಾಂತರ ರೂಪಾಯಿ ಕಳೆದುಕೊಂಡ ವ್ಯಕ್ತಿಯೊಬ್ಬ ಸಾಲಗಾರರ ಕಾಟಕ್ಕೆ ಬೇಸತ್ತು, ಹೆಂಡತಿ, ಮಕ್ಕಳಿಗೆ ವಿಷ ನೀಡಿ (Self Harming) ಕೊಂದಿದ್ದಾನೆ. ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.

ನರಸಿಂಹ ಎಂಬಾತ ಈ ಕೃತ್ಯವೆಸಗಿದ್ದಾನೆ. ಪತ್ನಿ ಕೀರ್ತನ (23) ಮಕ್ಕಳಾದ ಜಯಸಿಂಹ (4) ದೀಪಿಕಾ (1) ಮೃತ ದುರ್ದೈವಿ. ಅಸ್ವಸ್ಥನಾಗಿರುವ ನರಸಿಂಹನನ್ನು ನಾಗಮಂಗಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಐಪಿಎಲ್ ಕ್ರಿಕೆಟ್‌ ನೋಡುತ್ತಿದ್ದ ನರಸಿಂಹ ಬೆಟ್ಟಂಗ್‌ನ ಹಿಂದೆ ಬಿದ್ದಿದ್ದ. ಇದರಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಳ್ಳುತ್ತಿದ್ದರೂ ಇವತ್ತಲ್ಲ ನಾಳೆ ಮರಳಿ ಬರುತ್ತದೆ ಎನ್ನುವ ಭರವಸೆಯೊಂದಿಗೆ ಮೇಲಿಂದ ಮೇಲೆ ಸಾಲ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದ.

ಇದರಿಂದ ಮನನೊಂದ ನರಸಿಂಹ ಪತ್ನಿ ಹಾಗೂ ಪುಟ್ಟ ಮಕ್ಕಳಿಬ್ಬರಿಗೆ ವಿಷ ನೀಡಿ ಹತ್ಯೆ ಮಾಡಿದ್ದಾನೆ. ಅವರೆಲ್ಲೂ ಮೃತಪಟ್ಟ ಬಳಿಕ ತಾನೂ ವಿಷ ಸೇವಿಸಿದ್ದಾನೆ. ಸದ್ಯ ನಾಗಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Road Accident : ಸೈಕಲ್‌ಗೆ ಗುದ್ದಿದ ಕಾರು, ನರಳಾಡಿ ವ್ಯಕ್ತಿ ಸಾವು; ಹಿಟ್‌ ಆ್ಯಂಡ್‌ ರನ್‌ಗೆ ಬೈಕ್‌ ಸವಾರ ಬಲಿ

ರೈಲಿಗೆ ತಲೆ ಕೊಟ್ಟು ಮಣಿಪಾಲ್‌ ಆಸ್ಪತ್ರೆಯ ಸ್ಟಾಫ್ ನರ್ಸ್ ಸೂಸೈಡ್‌

ಬೆಂಗಳೂರು: ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ (Student death) ಶರಣಾಗಿದ್ದಾರೆ. ಬೆಂಗಳೂರಿನ ದೀಪಾಂಜಲಿನಗರ ರೈಲ್ವೆ ಟ್ರಾಕ್ ಬಳಿ ಘಟನೆ ನಡೆದಿದೆ. ವಿಜಯಪುರ ಮೂಲದ ಚನ್ನಬಸು ಅಶೋಕ್ (22) ಮೃತ ದುರ್ದೈವಿ.

ಚನ್ನಬಸು ಅಶೋಕ್‌ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಬೆಂಗಳೂರಿನ ತನ್ನ ಚಿಕ್ಕಮ್ಮನೊಟ್ಟಿಗೆ ವಾಸವಾಗಿದ್ದ. ಇಂದು ಗುರುವಾರ ಮನೆಯಿಂದ ಹೊರಟವನು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಟಿ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
kaalnadige Jatha programme in Uttara kannada
ಉತ್ತರ ಕನ್ನಡ7 mins ago

Lok Sabha Election 2024: ಉ.ಕ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದ ಮತದಾನದ ಗುರಿ; ಡಿಸಿ

Bangalore Rural Lok Sabha Constituency Congress candidate D K Suresh Election campaign
ಬೆಂಗಳೂರು ಗ್ರಾಮಾಂತರ9 mins ago

Lok Sabha Election 2024: ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ: ಡಿ.ಕೆ. ಸುರೇಶ್

Neha Murder Case
ಕರ್ನಾಟಕ9 mins ago

Neha Murder Case: ನನ್ನ ಮಗನಿಗೆ ಶಿಕ್ಷೆ ಆಗಬೇಕು; ಯಾರೂ ಇಂಥ ಕೃತ್ಯ ಎಸಗಬೇಡಿ ಎಂದು ಫಯಾಜ್‌ ತಂದೆ ಕಣ್ಣೀರು

IPL 2024
ಪ್ರಮುಖ ಸುದ್ದಿ13 mins ago

IPL 2024 : ಇಂಪ್ಯಾಕ್ಟ್​ ಪ್ಲೇಯರ್ ನಿಯಮಕ್ಕೆ ಆಕ್ಷೇಪ ಎತ್ತಿದ ರಿಕಿ ಪಾಂಟಿಂಗ್​

Lok Sabha Election 2024
Lok Sabha Election 202415 mins ago

Lok Sabha Election 2024: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ; ಕಾರಣ ಇದು

Day 2 of CET 2024 Exam 26 out of syllabus question KEA asks to raise objections by April 27
ಶಿಕ್ಷಣ56 mins ago

CET 2024 Exam: ಸಿಇಟಿ ಪರೀಕ್ಷೆಯ 2ನೇ ದಿನವೂ 26 ಔಟ್‌ ಆಫ್‌ ಸಿಲಬಸ್‌ ಪ್ರಶ್ನೆ! ಏ.27ರೊಳಗೆ ಆಕ್ಷೇಪಣೆ ಸಲ್ಲಿಸಲು KEA ಸೂಚನೆ

Maldives Tourism
ವಿದೇಶ59 mins ago

Maldives Tourism: ಪರಿಣಾಮ ಬೀರಿದ ಮಾಲ್ಡೀವ್ಸ್ ಬಹಿಷ್ಕಾರದ ಕೂಗು; ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ ಭಾರೀ ಕುಸಿತ

IPL 2024
ಕ್ರೀಡೆ1 hour ago

IPL 2024 : ಪಾಂಡ್ಯ ಅಂದ್ರೆ ಡೋಂಟ್​ ಕೇರ್​, ರೋಹಿತ್​ಗೆ ಫುಲ್​ ರೆಸ್ಪೆಕ್ಟ್​; ಯುವ ಬೌಲರ್​ನ ನಡೆ ಫುಲ್ ವೈರಲ್​

Party symbols
ರಾಜಕೀಯ1 hour ago

Party Symbols: ವಿವಿಧ ಪಕ್ಷಗಳ ಚುನಾವಣಾ ಚಿಹ್ನೆ ಹಿಂದೆ ಹೇಗಿತ್ತು, ಈಗ ಏನಾಗಿದೆ? ಸಂಗ್ರಹಯೋಗ್ಯ ಮಾಹಿತಿ

letter to President
ಕರ್ನಾಟಕ1 hour ago

letter to President: ಗೋವಾ ಕನ್ನಡಿಗರ ಮೇಲೆ ದೌರ್ಜನ್ಯ: ನ್ಯಾಯ ಕೊಡಿಸಲು ರಾಷ್ಟ್ರಪತಿಗಳಿಗೆ ಕರವೇ ನಾರಾಯಣಗೌಡ ಮನವಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case
ಹುಬ್ಬಳ್ಳಿ6 hours ago

Neha Murder Case : ನೇಹಾ ಕೊಂದವನ ಎನ್‌ಕೌಂಟರ್ ಮಾಡಿ ಬಿಸಾಕಿ; ಮುದ್ದು ಮಗಳಿಗೆ ಪೋಷಕರ ಕಣ್ಣೀರ ವಿದಾಯ

Dina bhavishya
ಭವಿಷ್ಯ16 hours ago

Dina Bhavishya: ರಹಸ್ಯ ಕಾರ್ಯಗಳಿಂದ ಈ ರಾಶಿಯವರಿಗೆ ಇಂದು ಯಶಸ್ಸು ಗ್ಯಾರಂಟಿ

Dina Bhavishya
ಭವಿಷ್ಯ3 days ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ4 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20244 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20245 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ6 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ7 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ1 week ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

ಟ್ರೆಂಡಿಂಗ್‌