ವಿಜಯನಗರ: ಜನ ದಟ್ಟಣೆಯಿರುವ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದ ಕೆರೆಗೊಡ್ಡ ಹಾವನ್ನು (Snake) ಉರಗ ಪ್ರೇಮಿ ಶಿವು ಹಿಡಿದಿದ್ದು, ಅದನ್ನು ಸುರಕ್ಷಿತವಾಗಿ ಕಾಡಿಗೆ (Forest) ಬಿಟ್ಟು ಬಂದಿರುವ ಘಟನೆ ಜಿಲ್ಲೆಯ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಜರುಗಿದೆ.
ಗುರುವಾರ ಮಧ್ಯಾಹ್ನದ ವೇಳೆಯಲ್ಲಿ ಕೆರೆಗೊಡ್ಡ ಹಾವು ನಿತ್ಯ ನೂರಾರು ಜನ ಓಡಾಡುವ ಸ್ಥಳದಲ್ಲಿ ಪ್ರತ್ಯಕ್ಷ ಆಗಿತ್ತು. ಕೂಡಲೇ ಸ್ಥಳೀಯರು ಉರಗ ಪ್ರೇಮಿ ಶಿವುಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಶಿವು ಹಾವನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: Monsoon Travel: ಮಲೆನಾಡಿನ ಮಳೆಹಾಡಿನ ಹೊಸತನ! ರಾಜ್ಯದ ಈ ಟಾಪ್ 5 ತಾಣಗಳಿಗೆ ಮಳೆಯಲ್ಲೊಮ್ಮೆ ಭೇಟಿ ಕೊಡಿ
ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ನಿವಾಸಿಯಾಗಿರುವ ಶಿವು ಅವರು ಹಾವು ರಕ್ಷಣೆಯಲ್ಲಿ ತೊಡಗಿದ್ದಾರೆ. ಸುತ್ತಮುತ್ತಲು ಯಾರ ಮನೆಯಲ್ಲಿ ಹಾವು ಕಂಡರೂ ಇವರಿಗೆ ಕರೆ ಮಾಡಲಾಗುತ್ತದೆ. ಹಾವನ್ನು ಹಿಡಿಯುವಾಗ ಅದಕ್ಕೆ ಹಾನಿ ಅಥವಾ ಗಾಯ ಮಾಡದೇ ರಕ್ಷಣೆ ಮಾಡುತ್ತಾರೆ.
ಹಾವುಗಳನ್ನು ಯಾರೂ ಸಾಯಿಸಬಾರದು ಎಂಬುದು ಇವರ ಉದ್ದೇಶವಾಗಿದೆ. ಜತೆಗೆ ಅವುಗಳನ್ನು ರಕ್ಷಣೆ ಮಾಡಿ ಮತ್ತೆ ಅರಣ್ಯಕ್ಕೆ ಬಿಡುವ ಕೆಲಸವನ್ನು ಮಾಡುತ್ತಾರೆ. ಎಂತಹ ವಿಷಕಾರಿ ಹಾವು ಇದ್ದರೂ ಸರಿ ಅವುಗಳನ್ನು ಹಿಡಿಯುವುದಕ್ಕೆ ಮುಂದೆ ಬರುತ್ತಾರೆ. ಗುರುವಾರ ಕಂಡುಬಂದ 10 ಅಡಿ ಉದ್ದದ ಕೇರೆಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿ: Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?
ವಿಷಕಾರಿ ಹಾವುಗಳನ್ನು ಸಂರಕ್ಷಣೆ ಮಾಡಿ ಕಾಡಿಗೆ ಬಿಟ್ಟು ಅವುಗಳನ್ನು ರಕ್ಷಣೆ ಮಾಡುವುದರ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಉರಗ ಪ್ರೇಮಿ ಶಿವು ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.