ತಂತ್ರಜ್ಞಾನ
Aadhaar Services: ಆನ್‌ಲೈನ್ ಮೂಲಕ ಆಧಾರ್ ‘ಲಾಕ್’ ಮತ್ತು ‘ಅನ್‌ಲಾಕ್’ ಮಾಡುವುದು ಹೇಗೆ?
Aadhaar Services: ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ಮತ್ತು ಗುರುತು ದೃಢೀಕರಣಕ್ಕೆ ಆಧಾರ್ ಅತ್ಯಗತ್ಯ ಸರ್ಕಾರಿ ಗುರುತಿನ ಪತ್ರವಾಗಿದೆ.
ಬೆಂಗಳೂರು: ಕರ್ನಾಟಕದಲ್ಲಿ ಈಗ ಗ್ಯಾರಂಟಿಗಳ ಭರಾಟೆ. ಈ ಗ್ಯಾರಂಟಿ ಸೇವೆಗಳನ್ನು ಪಡೆಯಲು ಇತರ ಅಧಿಕೃತ ದಾಖಲೆಗಳ ಜತೆಗೆ ಆಧಾರ್ ಕೂಡ ಕಡ್ಡಾಯವಾಗಿಬೇಕು. ಹಾಗಾಗಿ, ಆಧಾರ್ ಮಾಡಿಸಿಕೊಳ್ಳಲು ಜನರು ಮುಗಿ ಬೀಳುತ್ತಿರುವ ವರದಿಗಳಾಗುತ್ತಿವೆ. ಗ್ಯಾರಂಟಿ ಮಾತ್ರವಲ್ಲದೇ ಕೇಂದ್ರವಾಗಲೀ, ರಾಜ್ಯ ಸರ್ಕಾರದ ಸೇವೆಗಳನ್ನು ಪಡೆಯಲು, ನಿಮ್ಮ ಅಧಿಕೃತ ವಿಳಾಸವನ್ನು ದೃಢೀಕರಿಸಲು ಈ ಆಧಾರ್ (Aadhaar Services) ಬೇಕೇ ಬೇಕು. ಆದರೆ, ಆಧಾರ್ ಮಾಹಿತಿ ಕಳುವಾದರೆ ಎಂಬ ಆತಂಕ ಇದ್ದೇ ಇರುತ್ತದೆ. ಬಳಕೆದಾರರಿಗೆ ಅಂಥದೊಂದು ಅನುಮಾನ ಮೂಡಿದರೆ, ನಿಮ್ಮ ಆಧಾರ್ ಸೇವೆಯನ್ನು ಲಾಕ್ (Lock) ಮಾಡಬಹುದು, ಅಗತ್ಯ ಎನಿಸಿದಾಗಿ ಮತ್ತೆ ಅನ್‌ಲಾಕ್ (Unlock) ಮಾಡಬಹುದು. ಅಂಥದೊಂದು ಅವಕಾಶವನ್ನು ಯುಐಡಿಎಐ ನೀಡಿದೆ.
ಬಳಕೆದಾರರ ಆಧಾರ್ ಸಂಖ್ಯೆಯ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ನಿವಾಸಿಗಳಿಗೆ ನಿಯಂತ್ರಣವನ್ನು ಒದಗಿಸಲು ಆಧಾರ್ ಸಂಖ್ಯೆಗಳನ್ನು ಲಾಕ್ ಮಾಡಲು ಮತ್ತು ಅನ್ಲಾಕ್ ಮಾಡಲು ಯುಐಡಿಎಐ ವ್ಯವಸ್ಥೆಯನ್ನು ಒದಗಿಸಿದೆ. ಬಳಕೆದಾರರು ಯುಐಡಿಎಐ ಜಾಲತಾಣ (www.myaadhaar.uidai.gov.in) ಅಥವಾ ಎಂಆಧಾರ್ (mAadhaar) ಆ್ಯಪ್ ಮೂಲಕ ಆಧಾರ್ ಲಾಕ್ ಮಾಡಬಹುದಾಗಿದೆ.
ಆಧಾರ್ ಹೇಗೆ ಲಾಕ್ ಮಾಡುವುದು?
ಎಸ್ಸೆಮ್ಮೆಸ್ ಮೂಲಕ: GVID ಟೈಪ್ ಮಾಡಿ ನಿಮ್ಮ ನಾಲ್ಕು ಅಥಾ ಎಂಟು ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ ಮತ್ತು ಅದನ್ನು 1947ಕೆ ಸೆಂಡ್ ಮಾಡಿದೆ. ಉದಾಹರಣೆ: GVID 7893 SMS to 1947
ವೆಬ್‌ಸೈಟ್ ಮೂಲಕ: ಯುಐಡಿಎಐ ವೆಬ್‌ಸೈಟ್ (https://resident.uidai.gov.in/aadhaar-lockunlock)ಗೆ ಭೇಟಿ ನೀಡಿ. ಹೋಮ್‌ಪುಟದಲ್ಲಿರುವ ಮೈ ಆಧಾರ್ ಸೆಕ್ಷನ್‌ನಲ್ಲಿರುವ ಲಾಕ್ ಆಧಾರ್ (Lock Aadhaar) ಮೇಲೆ ಕ್ಲಿಕ್ ಮಾಡಿ. ಬಳಿಕ ಯುಐಡಿ ಲಾಕ್ ಆಪ್ಷನ್ ಸೆಲೆಕ್ಟ್ ಮಾಡಿ. ಯುಐಡಿ ನಂಬರ್, ಹೆಸರು ಇತ್ಯಾದಿ ಮಾಹಿತಿಯನ್ನು ನಮೂದಿಸಿ. ಸೆಂಡ್ ಸೆಕ್ಯೂರಿಟಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್‌ಗೆ ಬರುವ ಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಆಗ ನಿಮ್ಮ ಆಧಾರ್ ಯಶಸ್ವಿಯಾಗಿ ಲಾಕ್ ಆಗುತ್ತದೆ.
ಆಧಾರ್ ಅನ್‌ಲಾಕ್ ಮಾಡುವುದು ಹೇಗೆ?
ಎಸ್ಸೆಮ್ಮೆಸ್ ಮೂಲಕ: RVID ಅಂತಾ ಟೈಪ್ ಮಾಡಿ ಸ್ಪೇಸ್ ಬಿಟ್ಟು ನಾಲ್ಕು ಅಥವಾ 8 ಅಂಕಿಗಳ ಯುಐಡಿ ನಂಬರ್ ಟೈಪ್ ಮಾಡಿ, 1947 ನಂಬರ್‌ಗೆ ಸೆಂಡ್ ಮಾಡಿ.
ಇದನ್ನೂ ಓದಿ: Aadhaar card : ಆಧಾರ್ ಜತೆ ನಿಮ್ಮ ಇ-ಮೇಲ್, ಮೊಬೈಲ್ ಲಿಂಕ್ ಆಗಿದೆಯೇ ? ಹೀಗೆ ಖಾತರಿಪಡಿಸಿಕೊಳ್ಳಿ
ವೆಬ್‌ಸೈಟ್ ಮೂಲಕ ಹೀಗೆ ಮಾಡಿ: ಇಲ್ಲಿ ಕೂಡ ಸೇನ್ ಲಾಕ್ ಮಾಡುವ ಪ್ರಕ್ರಿಯೇ ಫಾಲೋ ಮಾಡಬೇಕು. ಮೊದಲಿಗೆ ಯುಐಡಿಎಐಗೆ ಹೋಗಿ. ಬಳಿಕ ಅನ್‌ಲಾಕ್ ಆಯ್ಕೆಯ ಸೆಲೆಕ್ಟ ಮಾಡಿ. ಹೊಸ ವಿಐಡಿ ಮತ್ತುಸೆಕ್ಯೂರಿಟಿ ಕೋಡ್ ಎಂಟರ್ ಮಾಡಿ. ಸೆಂಡ್ ಒಟಿಪಿ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿಯನ್ನು ನಮೂದಿಸಿ. ಆಗ ನಿಮ್ಮ ಆಧಾರ್ ನಂಬರ್ ಯಶಸ್ವಿಯಾಗಿ ಅನ್‌ಲಾಕ್ ಆಗುತ್ತದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಆಟೋಮೊಬೈಲ್
Hyundai Cars : ಹ್ಯುಂಡೈನ ಎಲ್ಲ ಕಾರುಗಳಲ್ಲಿ ಇನ್ನು ಮುಂದೆ ಆರು ಏರ್ಬ್ಯಾಗ್ಗಳು ಕಡ್ಡಾಯ
ಹ್ಯುಂಡೈ ಮೋಟಾರ್ ಇಂಡಿಯಾ (Hyundai Motor) ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಏರ್ ಬ್ಯಾಗ್ ಸೇರಿದಂತೆ ಸುರಕ್ಷತಾ ಮಾನದಂಡಗಳ ಕುರಿತು ವಿವರಣೆ ನೀಡಿದ್ದಾರೆ.
ನವ ದೆಹಲಿ : ಹ್ಯುಂಡೈ ಇಂಡಿಯಾ ಈಗ ತನ್ನ ಎಲ್ಲಾ ಮಾದರಿಗಳಲ್ಲಿ (Hyundai Cars) 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುವುದಾಗಿ ಘೋಷಿಸಿದೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಕಾರು ತಯಾರಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್ ಎಂಐಎಲ್) ಇತ್ತೀಚೆಗೆ ತನ್ನ ಹಾಟ್ ಸೆಲ್ಲಿಂಗ್ ಉತ್ಪನ್ನಗಳಲ್ಲಿ ಒಂದಾದ ವೆರ್ನಾವನ್ನು ಕ್ರ್ಯಾಶ್ ಟೆಸ್ಟ್ ಗಾಗಿ ಕಳುಹಿಸಿತ್ತು. ಕಾರ್ ಗ್ಲೋಬಲ್ ಅನ್ಕ್ಯಾಪ್ನಿಂದ ಐದು ಸ್ಟಾರ್ ರೇಟಿಂಗ್ ಅನ್ನು ಸಾಧಿಸಿದೆ. ನಿರ್ಮಾಣ ಗುಣಮಟ್ಟದ ವಿಷಯದಲ್ಲಿ ಭಾರತದ ಪ್ರಮುಖ ಕಾರು ತಯಾರಕ ಕಂಪನಿ ಗ್ರಾಹಕರಿಂದ ವಿಶ್ವಾಸವನ್ನು ಗಳಿಸಲು ಹೆಣಗಾಡುತ್ತಿರುವ ಸಮಯದಲ್ಲಿ ಈ ಫಲಿತಾಂಶ ಬಂದಿದೆ. ಇದರ ಹಿನ್ನೆಲೆಯಲ್ಲಿ ಏರ್ ಬ್ಯಾಗ್ಗಳ ಮಾಹಿತಿಯನ್ನೂ ಪ್ರಕಟಿಸಿದೆ.
ಕಂಪನಿಯು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಅಲ್ಲಿ ಇನ್ನು ಮುಂದೆ ಪ್ರತಿ ವಾಹನವು ಎಲ್ಲಾ ವೇರಿಯೆಂಟ್ಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ ಎಂದು ಹೇಳಿದೆ. ಈ ವೇಳೆ ಮಾತನಾಡಿದ ಕಂಪನಿಯ ಅಧಿಕಾರಿಗಳು, ಭಾರತ್ ಅನ್ಕ್ಯಾಪ್ನ ಸುರಕ್ಷತಾ ಪರೀಕ್ಷೆಗಾಗಿ ಕಂಪನಿಯ ಮೂರು ವಾಹನಗಳನ್ನು ಕಳುಹಿಸುವುದಾಗಿಯೂ ಹೇಳಿದೆ.
ಹ್ಯುಂಡೈ ಮೋಟಾರ್ ಇಂಡಿಯಾ ಈಗಾಗಲೇ ತನ್ನ ಐಷಾರಾಮಿ ಕಾರುಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿತ್ತು. ಆದರೆ, ಗ್ರ್ಯಾಂಡ್ ಐ 10 ನಿಯೋಸ್, ಔರಾ ಮತ್ತು ವೆನ್ಯೂವಿನಲ್ಲಿ ಕೊಟ್ಟಿರಲಿಲ್ಲ. ಇಲ್ಲಿಯವರೆಗೆ, ಈ ಮಾಡೆಲ್‌ಗಳು 4 ಏರ್ ಬ್ಯಾಗ್ ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತಿದ್ದವು. ಈಗ ಎಲ್ಲಾ ವೇರಿಯೆಂಟ್ಗಳಲ್ಲಿ 6 ಏರ್ ಬ್ಯಾಗ್ ಗಳನ್ನು ಪಡೆಯುತ್ತವೆ.
ಸೀಟ್ ಬೆಲ್ಟ್ ರಿಮೈಂಡರ್
2023ರ ವರ್ಷಾರಂಭದಲ್ಲಿ ಹ್ಯುಂಡೈ ಎಲ್ಲಾ ಕಾರುಗಳಲ್ಲಿ ಸೀಟ್ ಬೆಲ್ಟ್ ರಿಮೈಂಡರ್ ಸ್ಟ್ಯಾಂಡರ್ಡ್ ಆಗಿ ನೀಡಿತ್ತು. 3 ಪಾಯಿಂಟ್ ಸೀಟ್ ಬೆಲ್ಟ್ ಗಳನ್ನು ತಯಾರಿಸಿತ್ತು. ವಿಶೇಷವೆಂದರೆ, ಹ್ಯುಂಡೈ ಭಾರತದಲ್ಲಿ ಮಾರಾಟವಾಗುತ್ತಿರುವ 13 ಮಾದರಿಗಳಲ್ಲಿ, 10 ಇಎಸ್ಸಿ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ಅನ್ನು ಸ್ಟ್ಯಾಂಡರ್ಡ್ ಆಗಿ ಹೊಂದಿವೆ. ಎಕ್ಸ್ಟೆರ್ ಗ್ರ್ಯಾಂಡ್ ಐ 10 ನಿಯೋಸ್ ಮತ್ತು ಔರಾ ಮಾತ್ರ ಹೊಂದಿಲ್ಲ .
ಹ್ಯುಂಡೈ ಕಂಪನಿಯು 3 ಮಾದರಿಗಳನ್ನು ಕ್ರ್ಯಾಶ್ ಟೆಸ್ಟಿಂಗ್ ಗಾಗಿ ಭಾರತ್ ಎನ್ ಸಿಎಪಿಗೆ ಕಳುಹಿಸಿದೆ ಎಂದು ಹೇಳಿಕೊಂಡಿದೆ. ಆದಾಗ್ಯೂ ಈ ಮಾದರಿಗಳು ಯಾವುವು ಎಂಬುದನ್ನು ಇನ್ನೂ ನಿರ್ದಿಷ್ಟಪಡಿಸಿಲ್ಲ. ಮುಂಬರುವ ತಿಂಗಳುಗಳಲ್ಲಿ ಫಲಿತಾಂಶಗಳನ್ನು ನಿರೀಕ್ಷಿಸಬಹುದು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದೇನು?
ಕಂಪನಿಯ ಸಾಧನೆಗಳ ಬಗ್ಗೆ ಪ್ರತಿಕ್ರಿಯಿಸಿದ ಕಂಪನಿಯ ಎಂಡಿ ಮತ್ತು ಸಿಇಒ ಉನ್ಸೂ ಕಿಮ್, ಎಲ್ಲರಿಗೂ ಸುರಕ್ಷತೆ ನೀಡುವುದು ನಮ್ಮ ಅತ್ಯಂತ ಆದ್ಯತೆಯಾಗಿದೆ. ವಾಹನ ಸುರಕ್ಷತಾ ವೈಶಿಷ್ಟ್ಯಗಳ ಪ್ರಮಾಣೀಕರಣದಲ್ಲಿ ನಾವು ಮಾನದಂಡಗಳನ್ನು ಸೃಷ್ಟಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Hyundai Creta : ಅಡ್ವೆಂಚರ್ ಪ್ರೇಮಿಗಳಿಗೆ ಇದೋ ಬಂದಿದೆ ಹ್ಯುಂಡೈನ ಎರಡು ಕಾರುಗಳು
ಸುರಕ್ಷಿತ ಪ್ರಯಾಣಕ್ಕಾಗಿ ಹ್ಯುಂಡೈ ಮೊದಲು ಮೈಲಿಗಲ್ಲನ್ನು ಸಾಧಿಸಿದೆ, ಹ್ಯುಂಡೈ ವೆರ್ನಾವ ಗ್ಲೋಬಲ್ ಅನ್ಕ್ಯಾಪ್ನಿಂದ ಹಿರಿಯರ ಮತ್ತು ಮಕ್ಕಳ ಪ್ರಯಾಣಿಕರ ರಕ್ಷಣೆಗಾಗಿ 5-ಸ್ಟಾರ್ ಎಂದು ರೇಟಿಂಗ್ ಪಡೆದುಕೊಂಡಿದೆ. ನಾವು ಸ್ಮಾರ್ಟ್ ಮೊಬಿಲಿಟಿ ಪರಿಹಾರಗಳನ್ನು ಒದಗಿಸುವವರು ಮಾತ್ರವಲ್ಲ, ಸುರಕ್ಷಿತ ಚಲನಶೀಲತೆ ಪರಿಹಾರಗಳನ್ನು ಸಹ ಒದಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಹ್ಯುಂಡೈ ವರ್ನಾ ಸುರಕ್ಷತೆ
ಎಚ್ಎಂಐಎಲ್ ವೆರ್ನಾವನ್ನು ಬಿಡುಗಡೆ ಮಾಡಿದಾಗಿನಿಂದ, ಗ್ರಾಹಕರಿಂದ ಬೇಡಿಕೆ ಪಡೆಯುತ್ತಿದೆ. ಅದರ ನಿರ್ಮಾಣ ಗುಣಮಟ್ಟ ಮತ್ತು ವಿಎಸ್ಎಂ (ವಾಹನ ಸ್ಥಿರತೆ ನಿರ್ವಹಣೆ), ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ), ಇಂಪ್ಯಾಕ್ಟ್ ಸೆನ್ಸಿಂಗ್ ಆಟೋ ಡೋರ್ ಅನ್ಲಾಕ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ (ಇಎಸ್ಎಸ್), ಐಎಸ್ಒಫಿಕ್ಸ್, ಹೆಡ್ಲ್ಯಾಂಪ್ ಎಸ್ಕಾರ್ಟ್ ಫಂಕ್ಷನ್ ಸುರಕ್ಷತೆಯನ್ನು ಹೆಚ್ಚಿಸಿದೆ. ಲೆವೆಲ್ 2 ಎಡಿಎಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಇತರ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಗ್ಯಾಜೆಟ್ಸ್
WhatsApp Accounts: 74 ಲಕ್ಷ ಖಾತೆ ಬ್ಯಾನ್ ಮಾಡಿದ ವಾಟ್ಸಾಪ್, ಕಾರಣ ಏನು?
WhatsApp Accounts: 2021ರ ಹೊಸ ಐಟಿ ನಿಯಮಗಳ ಅನುಸಾರ ವಾಟ್ಸಾಪ್, ನಿಯಮಗಳನ್ನು ಉಲ್ಲಂಘಿಸಿದ 74 ಲಕ್ಷ ಭಾರತೀಯ ಖಾತೆಗಳನ್ನು ಡಿಲಿಟ್ ಮಾಡಿದೆ.
ನವದೆಹಲಿ: 2021ರ ಹೊಸ ಐಟಿ ನಿಯಮಗಳ (IT Rules of 2021) ಅನುಸಾರ ವಾಟ್ಸಾಪ್ ಭಾರತದ ಸುಮಾರು 74 ಲಕ್ಷ ವಾಟ್ಸಾಪ್ ಖಾತೆಗಳನ್ನು(WhatsApp Accounts) ಡಿಲೀಟ್ ಮಾಡಿದೆ. ವರದಿಯ ಪ್ರಕಾರ, ಆಗಸ್ಟ್ 1ರಿಂದ 31ರ ಅವಧಿಯಲ್ಲಿ ವಾಟ್ಸಾಪ್ ಕನಿಷ್ಠ 7,420,748 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದೆ(WhatsApp Accounts Ban). ಅಲ್ಲದೇ, ಯಾವುದೇ ಬಳಕೆದಾರರು ವರದಿ ಮಾಡುವ ಮುನ್ನವೇ ವಾಟ್ಸಾಪ್ ನಿಯಮಗಳನ್ನು ಉಲ್ಲಂಘಿಸಿದ 3,506,905 ಖಾತೆಗಳನ್ನು ನಿಷೇಧಿಸಿದೆ.
ಮೆಟಾ-ಮಾಲೀಕತ್ವದ ಅಪ್ಲಿಕೇಶನ್, ಅದರ ಮಾಸಿಕ ಅನುಸರಣೆ ವರದಿಯಲ್ಲಿ, ಭಾರತದಲ್ಲಿ ಆಗಸ್ಟ್‌ನಲ್ಲಿ ದಾಖಲೆಯ 14,767 ದೂರು ವರದಿಗಳನ್ನು ಸ್ವೀಕರಿಸಿದೆ. ವಾಟ್ಸಾಪ್ ವರದಿಯ ಆಧಾರದ ಮೇಲೆ ಪರಿಹಾರ ಕ್ರಮಗಳನ್ನು ತೆಗೆದುಕೊಂಡ ವರದಿಗಳನ್ನು “ಖಾತೆಗಳು ಕ್ರಮಬದ್ಧಗೊಳಿಸಲಾಗಿದೆ” ಎಂದು ಸೂಚಿಸುತ್ತದೆ ಮತ್ತು ಕ್ರಮವನ್ನು ತೆಗೆದುಕೊಳ್ಳುವುದರಿಂದ ಖಾತೆಯನ್ನು ನಿಷೇಧಿಸುವುದು ಅಥವಾ ಈ ಹಿಂದೆ ನಿಷೇಧಿತ ಖಾತೆಯನ್ನು ಮರುಸ್ಥಾಪಿಸುವುದನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.
ಖಾತೆಗಳ ಕುರಿತು ಬಳಕೆದಾರರು ಮಾಡಿದ ರಿಪೋರ್ಟ್ ಮತ್ತು ಆ ಮನವಿಗಳು ಕುರಿತು ತೆಗೆದುಕೊಳ್ಳಲಾದ ಕ್ರಮಗಳನ್ನು ಈ ವರದಿಯು ಹೊಂದಿದೆ. ಅಲ್ಲದೇ, ವೇದಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಖಾತೆಗಳ ಕುರಿತು ಸ್ವಯಂ ಆಗಿ ಕ್ರಮಗಳನ್ನು ಕೈಗೊಂಡ ವಿವರ ಕುರಿತು ಮಾಹಿತಿಯನ್ನು ನೀಡಲಾಗಿದೆ. ಬಳಕೆದಾರರ ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರವು ಕುಂದುಕೊರತೆ ಮೇಲ್ಮನವಿ ಸಮಿತಿಯನ್ನು ಆರಂಭಿಸಿದೆ. ಈ ಮೂಲಕ ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸಲು ಕ್ರಮವನ್ನು ಕೈಗೊಳ್ಳಲಾಗಿದೆ.
ವಾಟ್ಸಾಪ್‌ನಲ್ಲಿ ಇನ್ನು ಎಚ್‌ಡಿ ಫೋಟೋ ಕಳುಹಿಸಬಹುದು!
ಫೋಟೋ ಸೆಂಡ್ ಮಾಡಲು ಸ್ಟ್ಯಾಂಡರ್ಡ್ ಗುಣಮಟ್ಟವು ಡೀಫಾಲ್ಟ್ ಆಯ್ಕೆಯಾಗಿದ್ದು, ಇದರಲ್ಲಿ ಫೋಟೋಗಳನ್ನು ಅಪ್ಲಿಕೇಶನ್‌ನಲ್ಲಿ ಕಳುಹಿಸಲಾಗುತ್ತದೆ ಎಂದು ವಾಟ್ಸಾಪ್ ಹೇಳಿದೆ. ಬಳಕೆದಾರರು ಕಡಿಮೆ ಬ್ಯಾಂಡ್‌ವಿಡ್ತ್ ಸಂಪರ್ಕದಲ್ಲಿ ವಾಟ್ಸಾಪ್‌ನಲ್ಲಿ ಚಿತ್ರವನ್ನು ಸ್ವೀಕರಿಸಿದರೆ, ಅವನು/ಅವಳು ಪ್ರಮಾಣಿತ ಆವೃತ್ತಿಯನ್ನು ಇಟ್ಟುಕೊಳ್ಳಬೇಕೆ ಅಥವಾ ಅದನ್ನು ಎಚ್‌ಡಿಗೆ ಅಪ್‌ಗ್ರೇಡ್ ಮಾಡಬೇಕೇ ಎಂಬುದನ್ನು ಫೋಟೋ-ಬೈ-ಫೋಟೋ ಆಧಾರದ ಮೇಲೆ ಆಯ್ಕೆ ಮಾಡಬಹುದಾಗಿದೆ.
ಈ ಸುದ್ದಿಯನ್ನೂ ಓದಿ: WhatsApp New Feature: ವಾಟ್ಸಾಪ್‌ನಲ್ಲಿ 32 ಜನರೊಂದಿಗೆ ವಿಡಿಯೋ ಕಾಲ್ ಮಾಡಬಹುದು!
ಎಚ್‌ಡಿ ಫೋಟೋಗಳ ಫೀಚರ್ ಮುಂದಿನ ಕೆಲವು ವಾರಗಳಲ್ಲಿ ಜಾಗತಿಕವಾಗಿ ಬಳಕೆಗೆ ಸಿಗಲಿದೆ. ಇದಾದ ಬಳಿಕ ಶೀಘ್ರವೇ ಎಚ್‌ಡಿ ವಿಡಿಯೋಗಳನ್ನು ಕಳುಹಿಸಲು ವಾಟ್ಸಾಪ್ ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮೊದಲು, ವಾಟ್ಸಾಪ್ ಬಳಕೆದಾರರು ತಮ್ಮ ವಾಟ್ಸಾಪ್ ವಿಡಿಯೋ ಕಾಲ್ ವೇಳೆ ವಿಡಿಯೋ ಷೇರಿಂಗ್ ಫೀಚರ್ ಪರಿಚಯಸಲಾಗುತ್ತಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಅವರು ಘೋಷಿಸಿದ್ದರು. ಈ ವೈಶಿಷ್ಟ್ಯವು ಬಳಕೆದಾರರಿಗೆ ಕಾಲ್ ಸಮಯದಲ್ಲಿ ಸ್ಕ್ರೀನ್ ಲೈವ್ ವೀಕ್ಷಣೆಯನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಅಂದರೆ, ಕಾಲ್ ಮಧ್ಯೆಯೇ, ನೀವು ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವುದು, ಕುಟುಂಬದೊಂದಿಗೆ ಫೋಟೋಗಳನ್ನು ಬ್ರೌಸ್ ಮಾಡುವುದು, ರಜೆಯ ಯೋಜನೆ ಅಥವಾ ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದನ್ನು ಒಳಗೊಂಡಿರಬಹುದು.
ಆಟೋಮೊಬೈಲ್
Car Sales: ಆಟೊಮೊಬೈಲ್ ವಲಯ ಚೇತರಿಕೆ, ಸೆಪ್ಟೆಂಬರ್‌ನಲ್ಲಿ ಕಾರುಗಳ ಸಾರ್ವಕಾಲಿಕ ದಾಖಲೆ ಮಾರಾಟ
ಸೆಪ್ಟೆಂಬರ್ ತಿಂಗಳಿನಲ್ಲಿ ಕಾರುಗಳ ಮಾರಾಟ ದಾಖಲೆ ಬರೆದಿದೆ. ಮಾರಾಟವಾದ ಎಲ್ಲ ಕಂಪನಿಗಳ ಕಾರುಗಳ ಒಟ್ಟಾರೆ ಸಂಖ್ಯೆ 3,63,733.
ಹೊಸದಿಲ್ಲಿ: ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಕಾರುಗಳ ಮಾರಾಟ (Car Sales) ದಾಖಲೆ ಸಂಖ್ಯೆ ಮುಟ್ಟಿದ್ದು, ಆಟೊಮೊಬೈಲ್ ವಲಯದಲ್ಲಿ (Automobile industry) ಹರ್ಷ ಮೂಡಿಸಿದೆ. ಬಹುತೇಕ ಎಲ್ಲ ಕಂಪನಿಗಳ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ.
ಭಾರತೀಯ ಪ್ರಯಾಣಿಕ ವಾಹನ (Passenger Vehicles) ಮಾರುಕಟ್ಟೆಯ ವಹಿವಾಟಿನಲ್ಲಿ ಸೆಪ್ಟೆಂಬರ್‌ನಲ್ಲಿ ಬಹಳಷ್ಟು ಹೆಚ್ಚಳ ಕಂಡುಬಂತು. ಕಳೆದ ಎರಡು ವರ್ಷಗಳಲ್ಲಿ ಆಟೊಮೊಬೈಲ್ ಕ್ಷೇತ್ರ ಕೋವಿಡ್ ಸಂದರ್ಭದ ಲಾಕ್‌ಡೌನ್ ಪರಿಣಾಮ ತತ್ತರಿಸಿತ್ತು. ನಂತರ ಸೆಮಿ ಕಂಡಕ್ಟರ್‌ಗಳ (Semi conductor) ಕೊರತೆ ಉಂಟಾಗಿತ್ತು. ಇದೀಗ ಆಟೊಮೊಬೈಲ್ ತಯಾರಿಕರಿಗೆ ಸಿಹಿ ಸುದ್ದಿ ಬಂದಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಕಾರುಗಳ ಮಾರಾಟ ದಾಖಲೆ ಬರೆದಿದೆ. ಮಾರಾಟವಾದ ಎಲ್ಲ ಕಂಪನಿಗಳ ಕಾರುಗಳ ಒಟ್ಟಾರೆ ಸಂಖ್ಯೆ 3,63,733. ಇದು ಮಾಸಿಕ ಮಾರಾಟದ ಸಾರ್ವಕಾಲಿಕ ದಾಖಲೆ. ಇನ್ನಷ್ಟು ಸಂತಸದ ಸಂಗತಿಯೆಂದರೆ ಬೇಡಿಕೆಯು ಏರುತ್ತಿದೆ ಮತ್ತು ಉತ್ಪಾದನಾ ನಿರ್ಬಂಧಗಳು ಈಗ ಮರೆಯಾಗುತ್ತಿವೆ.
ಮಾರುತಿ ಸುಜುಕಿಯನ್ನೇ (Maruti Suzuki) ತೆಗೆದುಕೊಂಡರೆ, ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಇದು 1,81,343 ಕಾರುಗಳನ್ನು ಮಾರಿದೆ. ಇದು ಹೊಸ ವೈಯಕ್ತಿಕ ದಾಖಲೆ. ಇದು ಒಂದು ತಿಂಗಳ ಇದುವರೆಗಿನ ಗರಿಷ್ಠ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವೆ ಕಂಪನಿಯ ಒಟ್ಟು ಮಾರಾಟ 10 ಲಕ್ಷ ಯುನಿಟ್‌ಗಳನ್ನು ಮೀರಿದೆ.
“ಸೆಮಿಕಂಡಕ್ಟರ್ ಸಮಸ್ಯೆ ಕಡಿಮೆಯಾಗಿದೆ. ಬೇಡಿಕೆ ಹೆಚ್ಚುತ್ತಿದೆ. ನಮ್ಮ ಹೊಸ ಮಾಡೆಲ್‌ಗಳು, ವಿಶೇಷವಾಗಿ ವಿಟಾರಾ ಬ್ರೆಝಾ ಹೆಚ್ಚು ಬೇಡಿಕೆ ಹೊಂದಿದೆ” ಎಂದು ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ನ ಮಾರ್ಕೆಟಿಂಗ್ ಮತ್ತು ಸೇಲ್ಸ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಸದ್ಯ 40,000 ಬ್ರೆಝಾ, 23,000 ವಿಟಾರಾ ಬ್ರೆಝಾ, 20,000 ಫ್ರಾಂಕ್ಸ್, 10,000 ಜಿಮ್ಮಿ, 7,500 ಇನ್‌ವಿಕ್ಟೊಗಳಿಗೆ ಬೇಡಿಕೆ ಇದೆ.
ಇತರ ಕಂಪನಿಗಳಾದ ಹ್ಯುಂಡೈ, ಮಹಿಂದ್ರ, ಟೊಯೊಟಾ ಕೂಡ ದಾಖಲೆ ಮಾರಾಟ ಮಾಡಿವೆ. ಹ್ಯುಂಡೈ ಕಂಪನಿ 71,641 ಕಾರುಗಳನ್ನು ಮಾರಿದೆ. ಇದರಲ್ಲಿ ಕ್ರೆಟಾ, ವೆನ್ಯೂ, ಎಕ್ಸ್‌ಟರ್ ಸೇರಿವೆ.
ಮಹಿಂದ್ರದ ಎಸ್‌ಯುವಿಗಳು 41,267ರಷ್ಟು ಮಾರಾಟವಾಗಿವೆ.
ಹೆಚ್ಚಿನ ಕಾರುಗಳ ಮಾರಾಟ ಆಗಿರುವುದು ಎಸ್‌ಯುವಿಗಳ ವಿಭಾಗದಲ್ಲಿ. ಸಣ್ಣ ಕಾರುಗಳ ಮಾರಾಟ ಸ್ವಲ್ಪ ಕಡಿಮೆ ಇದೆ. ಮಾರುತಿಯನ್ನು ಸಣ್ಣ ಮತ್ತು ಕೈಗೆಟುಕುವ ಕಾರುಗಳ ಚಾಂಪಿಯನ್ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿದೆ. ಮಾರಾಟದಲ್ಲೂ ಅದು ನಿಜವಾಗಿದೆ. ಅದರ ಆಲ್ಟೊ ಮತ್ತು ಎಸ್-ಪ್ರೆಸ್ಸೊ ಮಾದರಿಗಳು 2022ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ಸೆಪ್ಟೆಂಬರ್‌ನಲ್ಲಿ 65 ಪ್ರತಿಶತದಷ್ಟು ಕುಸಿದಿವೆ. ಅಂದರೆ ಇಲ್ಲೂ ಎಸ್‌ಯುವಿಗಳದೇ ಪ್ರಾಬಲ್ಯ.
ಹೆಚ್ಚು ಹೆಚ್ಚು ಭಾರತೀಯರು ಸಮೂಹ- ಮಾರುಕಟ್ಟೆ ವಿಭಾಗದಲ್ಲಿ ಹೆಚ್ಚು ಪ್ರೀಮಿಯಂ ವಾಹನಗಳನ್ನು ಖರೀದಿಸುತ್ತಿದ್ದರೂ ಸಹ, ತಯಾರಕರು ಇನ್ನಷ್ಟು ಹೆಚ್ಚಿನ ವ್ಯಾಪಾರವನ್ನು ಅಕ್ಟೋಬರ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ. ಸಾಕಷ್ಟು ಹಬ್ಬಗಳು ಹಾಗೂ ಫೆಸ್ಟಿವ್ ಆಫರ್‌ಗಳು ಈ ಮಾಸದಲ್ಲಿವೆ.
ಇದನ್ನೂ ಓದಿ: Car sales up | ಆಗಸ್ಟ್‌ನಲ್ಲಿ ಕಾರುಗಳ ಬಂಪರ್ ಮಾರಾಟ, 30% ಹೆಚ್ಚಳ
ಕ್ರಿಕೆಟ್
ICC World Cup 2023: ವಿಶ್ವಕಪ್ ಪಂದ್ಯಾವಳಿ ನಡೆಯುವ ಭಾರತದ ಪ್ರತಿ ಮೈದಾನದಲ್ಲೂ ಜಿಯೋ ಡೌನ್ ಲೋಡ್ ವೇಗ ಆನಂದಿಸಿ
ICC World Cup 2023: ಜಿಯೋದ ಒಟ್ಟು ಡೌನ್‌ಲೋಡ್ ವೇಗ ಏರ್‌ಟೆಲ್‌ಗಿಂತ ಎರಡು ಪಟ್ಟು, ವೊಡಾಫೋನ್ ಐಡಿಯಾಕ್ಕಿಂತ 3.5
ನವದೆಹಲಿ: ಐಸಿಸಿ ವಿಶ್ವಕಪ್ 2023 (ICC World Cup 2023) ನಡೆಯಲಿರುವ ಭಾರತದ ಕ್ರಿಕೆಟ್ ಮೈದಾನಗಳಲ್ಲಿ (Indian Cricket Stadiums) ಕ್ರಿಕೆಟ್ ಅಭಿಮಾನಿಗಳಿಗೆ ಇಲ್ಲಿದೆ ಒಳ್ಳೆಯ ಸುದ್ದಿ. ಅದೇನೆಂದರೆ, ರಿಲಯನ್ಸ್ ಜಿಯೋ (Reliance Jio) ಡೌನ್‌ಲೋಡ್ ವೇಗವು (Download Speed) ಏರ್‌ಟೆಲ್‌ಗಿಂತ (Airtel) ಎರಡು ಪಟ್ಟು ವೇಗವಾಗಿದೆ ಮತ್ತು ವೊಡಾಫೋನ್‌ಗಿಂತ 3.5 ಪಟ್ಟು ವೇಗವಾಗಿದೆ. ಓಪನ್ ಸಿಗ್ನಲ್ (Open Signal) ವರದಿಯ ಪ್ರಕಾರ, ಭಾರತೀಯ ಕ್ರಿಕೆಟ್ ಮೈದಾನಗಳ ಒಳಗೆ ಮತ್ತು ಹೊರಗೆ ಅಳೆಯಲಾದ ಡೌನ್‌ಲೋಡ್ ವೇಗದಲ್ಲಿ ಜಿಯೋ ಗೆದ್ದಿದೆ. ರಿಲಯನ್ಸ್ ಜಿಯೋದ ಸರಾಸರಿ ಡೌನ್‌ಲೋಡ್ ವೇಗವನ್ನು 61.7 ಎಂಬಿಪಿಎಸ್ ಎಂದು ಅಳೆಯಲಾಗಿದೆ. ಏರ್‌ಟೆಲ್ 30.5 ಎಂಬಿಪಿಎಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ವೊಡಾಫೋನ್ ಐಡಿಯಾ 17.7 ಎಂಬಿಪಿಎಸ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ.
ಓಪನ್ ಸಿಗ್ನಲ್ ವರದಿಯಲ್ಲಿ, 5ಜಿ ಡೌನ್‌ಲೋಡ್ ವೇಗದಲ್ಲಿ ರಿಲಯನ್ಸ್ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋದ 5ಜಿ ಡೌನ್‌ಲೋಡ್ ವೇಗವು ಏರ್‌ಟೆಲ್‌ಗಿಂತ ಶೇ 25.5ರಷ್ಟು ಹೆಚ್ಚಾಗಿದೆ. ಜಿಯೋದ ಸರಾಸರಿ 5ಜಿ ಡೌನ್‌ಲೋಡ್ ವೇಗವು 344.5 ಎಂಬಿಪಿಎಸ್ ನಲ್ಲಿ ದಾಖಲಾಗಿದ್ದರೆ, ಏರ್‌ಟೆಲ್ 274.5 ಎಂಬಿಪಿಎಸ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ವೊಡಾಫೋನ್ ಐಡಿಯಾ ಸದ್ಯಕ್ಕೆ 5ಜಿ ಸೇವೆಯನ್ನು ಒದಗಿಸುತ್ತಿಲ್ಲ. ಐಸಿಸಿ ವಿಶ್ವಕಪ್ 2023ರ ಪಂದ್ಯಗಳು ದೇಶದ 10 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಇವುಗಳಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಂತಹ ಹೊಸ ಕ್ರೀಡಾಂಗಣಗಳು ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್‌ನಂತಹವು ಸೇರಿವೆ. ಇದಲ್ಲದೇ ದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು, ಲಖನೌ ಮತ್ತು ಧರ್ಮಶಾಲಾ ಕ್ರಿಕೆಟ್ ಮೈದಾನಗಳಲ್ಲೂ ಪಂದ್ಯಗಳು ನಡೆಯಲಿವೆ.
ಈ ಸುದ್ದಿಯನ್ನೂ ಓದಿ: Jio True 5G: ಜಿಯೋ 5ಜಿ ಡೌನ್‌ಲೋಡ್ ವೇಗದಲ್ಲಿ ಮೈಲಿಗಲ್ಲು! ಬಳಕೆದಾರರಿಗೆ 315 ಎಂಪಿಬಿಎಸ್ ಸ್ಪೀಡ್ ಲಭ್ಯ
ಕ್ರಿಕೆಟ್ ಮೈದಾನಗಳಲ್ಲಿ ಒಟ್ಟಾರೆ ಅಪ್‌ಲೋಡ್ ವೇಗದ ವಿಷಯದಲ್ಲಿ ಬಿರುಸಿನ ಪೈಪೋಟಿ ಇತ್ತು. ಏರ್‌ಟೆಲ್‌ನ ಸರಾಸರಿ ಅಪ್‌ಲೋಡ್ ವೇಗವನ್ನು 6.6 ಎಂಬಿಪಿಎಸ್ ಎಂದು ಅಳೆಯಲಾಗಿದ್ದರೆ, ಜಿಯೋ 6.3 ಎಂಬಿಪಿಎಸ್ ಇದೆ. ವೊಡಾಫೋನ್ ಐಡಿಯಾ ಎಂಬಿಪಿಎಸ್ ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಸರಾಸರಿ 5ಜಿ ಅಪ್‌ಲೋಡ್‌ನಲ್ಲಿ ಏರ್‌ಟೆಲ್ ಅಗ್ರಸ್ಥಾನದಲ್ಲಿದೆ, ಏರ್‌ಟೆಲ್‌ನ ವೇಗ 26.3 ಎಂಬಿಪಿಎಸ್ ಆಗಿದ್ದರೆ, ರಿಲಯನ್ಸ್ ಜಿಯೋ 21.6 ಎಂಬಿಪಿಎಸ್ ಆಗಿತ್ತು.
ಓಪನ್ ಸಿಗ್ನಲ್ ಐಸಿಸಿ ವಿಶ್ವಕಪ್ ಕ್ರೀಡಾಂಗಣಗಳ ಒಳಗೆ ಮತ್ತು ಹೊರಗೆ 5ಜಿ ಸಂಪರ್ಕದ ಲಭ್ಯತೆಯನ್ನು ಪರಿಶೀಲಿಸಿದೆ. ನೆಟ್‌ವರ್ಕ್ ಲಭ್ಯತೆಯನ್ನು ಗ್ರಾಹಕರು 5ಜಿ ನೆಟ್‌ವರ್ಕ್‌ನಲ್ಲಿ ಕಳೆಯುವ ಸಮಯದಿಂದ ಅಳೆಯಲಾಗುತ್ತದೆ. ವರದಿಯ ಪ್ರಕಾರ, ವಿಶ್ವಕಪ್ ಸ್ಟೇಡಿಯಂಗಳಲ್ಲಿ 5ಜಿ ಲಭ್ಯತೆಯ ವಿಷಯದಲ್ಲಿ ಜಿಯೋ ಅಗ್ರಸ್ಥಾನದಲ್ಲಿದೆ. ಜಿಯೋ ಗ್ರಾಹಕರು ಶೇ 53ಕ್ಕಿಂತ ಹೆಚ್ಚು ಸಮಯ 5ಜಿ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ್ದರು. ಆದರೆ ಏರ್‌ಟೆಲ್ ಗ್ರಾಹಕರು 5ಜಿ ನೆಟ್‌ವರ್ಕ್‌ಗೆ ಕೇವಲ ಶೇ 20.7ರಷ್ಟು ಸಮಯವನ್ನು ಮಾತ್ರ ಸಂಪರ್ಕಿಸಬಹುದು. ಇದರ ಪ್ರಕಾರ, ಜಿಯೋದ 5ಜಿ ನೆಟ್‌ವರ್ಕ್‌ನ ಲಭ್ಯತೆ ಏರ್‌ಟೆಲ್‌ಗಿಂತ 2.6 ಪಟ್ಟು ಹೆಚ್ಚು ಎಂದು ದಾಖಲಿಸಲಾಗಿದೆ.
ತಂತ್ರಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
-
ದೇಶ19 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ14 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್21 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ23 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ದೇಶ21 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್22 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ10 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕ್ರೈಂ11 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?