Site icon Vistara News

ಸಿಂದಗಿಯಲ್ಲಿ ಕುಸಿದ ಗಣೇಶೋತ್ಸವ ಮಂಟಪ; 6 ಕ್ಕೂ ಹೆಚ್ಚು ಮಂದಿಗೆ ಗಾಯ

ಮಂಟಪ

ವಿಜಯಪುರ: ಗಣೇಶೋತ್ಸವದ ಅಲಂಕೃತ ಮಂಟಪ ಕುಸಿದು ಬಿದ್ದು 60ಕ್ಕೂ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಶುಕ್ರವಾರ ಅವಘಡ ನಡೆದಿದ್ದು, 6ಕ್ಕೂ ಹೆಚ್ಚು ಮಕ್ಕಳು ಮತ್ತು ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಿಂದಗಿಯ ವಿವೇಕಾನಂದ ವೃತ್ತದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಅಲಂಕೃತ ಮಂಟಪ ನಿರ್ಮಿಸಲಾಗಿತ್ತು. ಸಂಜೆ ಪೂಜೆ ವೇಳೆ ನೂರಾರು ಜನ ಮಂಟಪದ ಮೇಲೆ ಆಗಮಿಸಿದ್ದರಿಂದ ಭಾರ ತಾಳಲಾರದೆ ಮಂಟಪ ಏಕಾಏಕಿ ಕುಸಿದಿದೆ. ಈ ವೇಳೆ ಆರಕ್ಕೂ ಹೆಚ್ಚು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸುಮಾರು 60 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ನಗರ ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿಂದಗಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ | ಶಾಂತಿಗೆ ಭಂಗ ತರಲು ಯತ್ನಿಸಿದರೆ ಸತ್ಯಾಗ್ರಹ ಎಂದು ತರಳಬಾಳು ಜಗದ್ಗುರು ಎಚ್ಚರಿಕೆ

Exit mobile version