Site icon Vistara News

ಡೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ: ಸಿಲಿಕಿಕೊಂಡ ವಾಹನಗಳು

ಪ್ರವಾಹ

ವಿಜಯಪುರ: ಕಳೆದ ಮೂರ್ನಾಲ್ಕು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಡೋಣಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ತಾಳಿಕೋಟೆ ತಾಲೂಕಿನ ಹರನಾಳ ಗ್ರಾಮದ ಬಳಿ ಡೋಣಿ ನದಿ ಪ್ರವಾಹದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ವೇಳೆ ಟ್ಯಾಕ್ಟರ್ ಸಿಲುಕಿದ ಘಟನೆ ನಡೆದಿದೆ.

ಇದನ್ನೂ ಓದಿ | ಮಕ್ಕಳನ್ನು ಕದ್ದು ಮಾರುತ್ತಿದ್ದಳ ಸ್ಟಾಫ್‌ ನರ್ಸ್‌?: ನಾಲ್ಕು ಮಕ್ಕಳ ರಕ್ಷಣೆ

ಹರನಾಳ ತಾಳಿಕೋಟೆ ಮಧ್ಯ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ ದಿಢೀರನೆ ಶನಿವಾರ ರಾತ್ರಿ ಡೋಣಿ ನದಿಗೆ ಪ್ರವಾಹ ಬಂದಿದೆ. ಕಾಮಗಾರಿ ನಡೆಯುತ್ತಿರುವದರಿಂದ ರಾತ್ರಿ ಸಮಯದಲ್ಲಿ ಟ್ಯಾಕ್ಟರ್ ಹಾಗೂ ಸಾಮಗ್ರಿಗಳನ್ನು ಡೋಣಿ ನದಿಯಲ್ಲಿಯೇ ಬಿಟ್ಟು ಹೋಗಿದ್ದಾರೆ. ರವಿವಾರ ನೋಡಿದಾಗ ಅದು ಸಂಪೂರ್ಣ ನೀರಿನಲ್ಲಿ ನಿಂತಿದೆ. ಘಟನಾ ಸ್ಥಳಕ್ಕೆ ರವಿವಾರ ತಡರಾತ್ರಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಎಸ್‌ಪಿ ಎಚ್.ಡಿ. ಆನಂದಕುಮಾರ, ಹೆಚ್ಚುವರಿ ಎಸ್‌ಪಿ ರಾಮ್ ಅರಸಿದ್ಧಿ, ಎಸಿ, ತಹಸೀಲ್ದಾರ್ ಸೇರಿ ಇನ್ನಿತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಮುಂಜಾಗ್ರತಾ ಕ್ರಮವಾಗಿ ಘಟನಾ‌ ಸ್ಥಳದಲ್ಲೇ ಬೀಡು ಬಿಡುವಂತೆ ಕೆಳಹಂತದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನದಿಯಲ್ಲಿ ಸಿಲುಕಿದ ಟ್ರ್ಯಾಕ್ಟರ್ ಹಾಗೂ ಇನ್ನಿತರ ಕಾಮಗಾರಿ ಸಾಮಗ್ರಿಗಳನ್ನು ನದಿಯಲ್ಲಿನ ನೀರಿನ‌ ಪ್ರಮಾಣ ತಗ್ಗಿದ ನಂತರವಷ್ಟೇ ಹೊರತೆಗೆಯಲು ಸಾಧ್ಯವಾಗಲಿದೆ.

ಇದನ್ನೂ ಓದಿ | Heavy Rains | ಮಳೆಗೆ ಬೆಳೆ ನಷ್ಟ; ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ

Exit mobile version