ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಚಲಿಸುತ್ತಿದ್ದ ಕಾರು ಡಿಕ್ಕಿಯಾಗಿ ಕುದುರೆ ಮೃತಪಟ್ಟಿದ್ದು, ಅಪಘಾತದಲ್ಲಿ ಕಾರಿನಲ್ಲಿದ್ದ ಕೃಷಿ ಅಧಿಕಾರಿಯೊಬ್ಬರಿಗೆ ಗಾಯಗಳಾಗಿವೆ.
ರಸ್ತೆಯಲ್ಲಿ ಸೋಮವಾರ ಏಕಾಏಕಿ ಕುದುರೆ ಅಡ್ಡಬಂದಿದ್ದರಿಂದ ಕಾರು ಡಿಕ್ಕಿಹೊಡೆದಿದೆ. ಈ ವೇಳೆ ಕಾರಿಗೆ ಹಿಂದಿನಿಂದ ಸಾರಿಗೆ ಬಸ್ ಡಿಕ್ಕಿಹೊಡೆದಿದ್ದರಿಂದ ಕಾರು ಪಲ್ಟಿಯಾಗಿದ್ದು, ನಿಡಗುಂದಿ ತಾಲೂಕು ಕೃಷಿ ಇಲಾಖೆಯ ಕೃಷಿ ಅಧಿಕಾರಿ ಎನ್.ಟಿ.ಗೌಡ ಗಾಯಗೊಂಡಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಕುದುರೆ ಮೃತಪಟ್ಟಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Accident | ಖಾಸಗಿ ಬಸ್-ಕಾರ್ ಅಪಘಾತದಲ್ಲಿ ಚಾಲಕ ಸಾವು