Site icon Vistara News

Basanagowda Pateel Yatnal : ಎಲ್ಲಾ ವೇಸ್ಟ್‌ ಬಾಡಿಸ್‌ ಹೋಗ್ಲಿ; ಲಮಾಣಿ ಕೈ ಸೇರ್ಪಡೆಗೆ ಯತ್ನಾಳ್‌ ಕಮೆಂಟ್

Basana gowda pateel Yatnal and Ramanna Lamani

ವಿಜಯಪುರ: ʻʻನೋಡ್ರಿ ರಾಮಣ್ಣ ಲಮಾಣಿ (Ramanna Lamani) ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಹೋದರೆ ಏನಾಗುತ್ತೆ? ಅಲ್ಲಿ ಹಾಲಿ ಬಿಜೆಪಿ ಶಾಸಕರೇ ಆರಿಸಿ ಬಂದಿದ್ದಾರೆ. ಈ ಜಗದೀಶ ಶೆಟ್ಟರ್ ಎಷ್ಟು ಒಯ್ತಾರೆ ಒಯ್ಯಲಿ, ಎಲ್ಲಾ ವೇಸ್ಟ್ ಬಾಡಿಗಳು ಹೋಗಲಿ (Let all waste Bodies go)ʼʼ: ಶಿರಹಟ್ಟಿಯ ಮಾಜಿ ಶಾಸಕ ರಾಮಣ್ಣ ಲಮಾಣಿ ಅವರು ಆಪರೇಷನ್‌ ಬಗ್ಗೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ (Basanagowda Pateel Yatnal) ಹೇಳಿದ್ದು ಹೀಗೆ.

ʻʻಶಿರಹಟ್ಟಿಯಲ್ಲಿ ಹೊಸ ಬಿಜೆಪಿ ಎಂಎಲ್‌ಎ ಗೆದ್ದಿದ್ದಾರೆ. ಪಕ್ಷಕ್ಕೆ ಹೊಸ ಹೊಸ ಜನ ಬರ್ತಾರೆ, ಹೊಸ ಹೊಸ ಯುವಕರು ಬಿಜೆಪಿಗೆ ಬರಬೇಕಾಗಿದೆ. ಹೋಗೋರು ಹೋಗ್ತಾರೆ, ಅವರಿಗೇನು ಮಾಡೋಕಾಗುತ್ತೆ? ಅವರಿಗೆ ದೇಶ ಬೇಕಾಗಿಲ್ಲ, ಧರ್ಮ ಬೇಕಾಗಿಲ್ಲ, ಅವರು ಬರಿ ಎಂಎಲ್‌ಎ ಆಗಬೇಕು ಅಂದ್ರೆ.. ಅದೆಂಗೆ ಆಗುತ್ತದೆʼʼ ಎಂದು ಪ್ರಶ್ನಿಸಿದರು ಬಸನಗೌಡ ಪಾಟೀಲ್‌ ಯತ್ನಾಳ.

ʻʻಜಗದೀಶ್‌ ಶೆಟ್ಟರ್ ಅವರು ಎಕ್ಸ್ ಆಗಿದಾರೆ. ಅವರಿಗೆ ಸಿಗೋರೆಲ್ಲ ಎಕ್ಸೇ. ಶೆಟ್ಟರ್ ಅವರು ಸೋತಿದಾರೆ, ಸೋತವರನ್ನೆಲ್ಲ ತಗೊಂಡು ಹೋಗಲಿ. ಮುಂದೆ ಹೊಸ ಹೊಸ ನಾಯಕರು ಬರಲಿ, ಹೊಸ ಯುವಕರು ಬರಲಿʼʼ ಎಂದು ಹೇಳಿದ ಯತ್ನಾಳ್‌ ಅವರು, ʻʻರಾಮಣ್ಣ ಲಮಾಣಿ ಎಲ್ಲ ಅನುಭವಿಸಿದ್ದಾರೆ 75 ವರ್ಷದ ಮೇಲೂ ಎಲ್ಲಾ ಆಗಬೇಕು ಅಂದ್ರೆ ಹೆಂಗೆ?.ʼʼ ಎಂದು ಕೇಳಿದರು.

ʻʻʻನಮ್ಮ ನಾಯಕರು ಅಧಿಕಾರ ಬಿಟ್ಟು ಕೊಡಬೇಕು, ಹೊಸ ನೀರು ಬರಬೇಕು, ಹಳೆ‌ನೀರು ರಿಟೈರ್‌ ಆಗಬೇಕುʼʼ ಎಂದರು.

ಇದನ್ನೂ ಓದಿ: Basanagowda pateel Yatnal: ಒಂದಲ್ಲ ಒಂದಿನ ಸಿಎಂ ಆಗ್ತೀನಿ, ರಾಜ್ಯದಲ್ಲೂ ಜೆಸಿಬಿ ಓಡಿಸ್ತೀನಿ ಅಂದ್ರು ಯತ್ನಾಳ್!‌

ಸವದಿ, ಶೆಟ್ಟರ್‌ ಹೋಗಿದ್ದರಿಂದ ಬಿಜೆಪಿ ಲಾಸಿಲ್ಲ ಎಂದ ಯತ್ನಾಳ್‌

ʻʻಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ ಕಾಂಗ್ರೆಸ್‌ಗೆ ಹೋಗಿದ್ದರಿಂದ ಬಿಜೆಪಿಗೆ ಹಿನ್ನಡೆ ಆಗಿಲ್ಲ. ಒಳ ಮೀಸಲಾತಿ, ಗ್ಯಾರೆಂಟಿಗಳಿಂದ ನಮಗೆ ಹಿನ್ನಡೆ ಆಗಿದೆ. ಮತ್ತು ನಮ್ಮ ಆಡಳಿತದಲ್ಲಿರುವ ಲೋಪದೋಷಗಳು ಕಾರಣ. ಈ‌ ಮಹಾತ್ಮರು ಹೋಗಿದ್ದರಿಂದ ಏನೂ ಎಫೆಕ್ಟ್ ಆಗಿಲ್ಲ.ʼʼ ಎಂದು ವಿವರಿಸಿದರು.

ʻʻಯಾರಿಗೂ ಗೊತ್ತಿಲ್ಲದೆ ಧಿಡೀರನೆ ಒಳ‌ ಮೀಸಲಾತಿ ಮಾಡಿಬಿಟ್ಟಿದ್ದಾರೆ. ಇದರಿಂದ ನಮ್ಮ ಸಾಂಪ್ರದಾಯಿಕ ಮತದಾರರು ಕಿತ್ತುಕೊಂಡು ಹೋದ್ರು. ಪಂಚ ಗ್ಯಾರಂಟಿ, ಪುಕ್ಕಟೆ ಕರೆಂಟ್, ಪುಕ್ಕಟೆ ಬಸ್, ಎರಡು ಸಾವಿರ ರೂಪಾಯಿ ಎಂದ ಕೂಡಲೇ ಮತದಾರರು ಹೋಗಿದ್ದಾರೆʼʼ ಎಂದು ಹೇಳಿದರು.

ʻʻಪ್ರತಿ ಬಿಪಿಎಲ್ ಕಾರ್ಡಗೆ ಮೂರು ಸಾವಿರ ರೂಪಾಯಿ ಮಾಡಿ ಎಂದು ನಮ್ಮವರಿಗೆ ಮೊದಲೇ ಹೇಳಿದ್ದೆವು. ಸಬ್ಸಿಡಿ ಕೊಟ್ಟು ದೇಶ ದಿವಾಳಿ ಆಗೋದು ಬೇಡ ಎಂದು ನಮ್ಮ‌ ಮೋದಿಯವರು ಮಾಡಲಿಲ್ಲʼʼ ಎಂದರು.

ವಿಪಕ್ಷ ನಾಯಕ ಬೇಡ, ಮುಖ್ಯಮಂತ್ರಿನೇ ಮಾಡ್ತಾರೋ ಏನೋ!

ʻʻಕೈ ಮುಗಿತೆನೆ ವಿಪಕ್ಷ ನಾಯಕವ ಆಯ್ಕೆ ಮಾಡಿʼʼ ಎಂಬ ಕೆ.ಎಸ್‌. ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಏನಾಗುತ್ತೋ ಗೊತ್ತಿಲ್ಲಾ, ಏನೋ ದೊಡ್ಡದು ನಡೆದಿದೆ. ಇದರ ಹಿಂದೆ ಏನೋ ದೊಡ್ಡದು ನಡೆದಿದೆ. ನಮ್ಮವರು ಮೇಲಿನವರು ಏನು ಮಾಡ್ತಿಲ್ಲ ಅಂದ್ರೆ ಏನೋ ಇರಬೇಕುʼʼ ಎಂದು ಹೇಳಿದ ಅವರು, ʻʻವಿರೋಧ ಪಕ್ಷ ಬೇಡವೇ ಬೇಡಪ್ಪಾ, ಒಮ್ಮೆಲೇ ಮುಖ್ಯಮಂತ್ರಿ ಮಾಡೋಣ ಎಂಬುದು ಇದ್ರೆ?ʼʼ ಎಂದು ಜನರ ತಲೆಗೆ ಹುಳ ಬಿಟ್ಟರು.

Exit mobile version