Site icon Vistara News

Murder case: ಹಣಕ್ಕಾಗಿ ತಂದೆಯನ್ನೇ ಕೊಲೆಗೈದ ಮಗ ಅಂದರ್‌

murder case

ವಿಜಯಪುರ: 30 ಲಕ್ಷ ರೂಪಾಯಿ ಹಣಕ್ಕಾಗಿ ತಂದೆಯನ್ನೇ ಹತ್ಯೆಗೈದ ಮಗನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಮೂವರು ಆರೋಪಿಗಳ ಬಂಧನ ಮಾಡಲಾಗಿದೆ.

ಈ ಬಗ್ಗೆ ಎಸ್ಪಿ ಎಚ್‌.ಡಿ ಆನಂದಕುಮಾರ ಮಾಹಿತಿ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ. ಹಣಕ್ಕಾಗಿ ಪದೇ ಪದೆ ತಂದೆ (ಶಿವಾನಂದ ಕೋಟ್ಯಾಳ) ಹಾಗೂ ಮಗ ಮುತ್ತುರಾಜ (ಕೋಟ್ಯಾಳ್) ಮಧ್ಯೆ ಗಲಾಟೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ತಂದೆ ಮಲಗಿದ್ದ ವೇಳೆ ಮಗ ಅವರನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಕೃತ್ಯದಲ್ಲಿ ಆತನಿಗೆ ಮಹಾದೇವಿ ಕೋಟ್ಯಾಳ, ಶ್ರೀಧರ್ ಹುಲೆಪ್ಪಗೋಳ ಎಂಬವರು ಸಹಕರಿಸಿದ್ದಾರೆ. ಮೂವರನ್ನೂ ಬಂಧಿಸಿದ್ದಾರೆ. ಬಬಲೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Suicide Case: ಹೆಂಡ್ತಿ ಬಿಟ್ಟು ಪ್ರಿಯತಮೆ ಜತೆ ಪರಾರಿಯಾದವನು ಶವವಾಗಿ ಪತ್ತೆ; ಕುಟುಂಬಸ್ಥರಿಂದ ಕೊಲೆ ಶಂಕೆ

Exit mobile version