Site icon Vistara News

Murder Case | ನಡು ರಸ್ತೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; ದುಷ್ಕರ್ಮಿಗಳು ಪರಾರಿ

Murder

ವಿಜಯಪುರ: ಇಲ್ಲಿನ ಸಿಂದಗಿ ಪಟ್ಟಣದ ಹುಡ್ಕೊ ಕಾಲೋನಿಯಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಹತ್ಯೆಗೈದು ಪರಾರಿಯಾಗಿರುವ (Murder Case) ಘಟನೆ ನಡೆದಿದೆ. ಭಾನುವಾರ (ನ. ೨೭) ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೈದಿದ್ದು, 54 ವರ್ಷದ ಶಾಂತಾಬಾಯಿ ತಳವಾರ ಮೃತಪಟ್ಟಿರುವ ದುರ್ದೈವಿ.

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಶಾಂತಾಬಾಯಿ ಅವರ ಮೇಲೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾರೆ. ಸ್ಥಳದಲ್ಲಿ ಅನುಮಾಸ್ಪದ ರೀತಿಯಲ್ಲಿ ಬೈಕ್ ಪತ್ತೆ ಆಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆದರೆ, ಶಾಂತಾಬಾಯಿ ಅವರನ್ನು ಏಕೆ ಹತ್ಯೆ ಮಾಡಲಾಗಿದೆ? ಇದರ ಹಿಂದೆ ಯಾರಿದ್ದಾರೆ ಎಂಬ ವಿಷಯ ಇನ್ನೂ ಗೊತ್ತಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ | Forced conversion | ಮಂಗಳೂರಿನಲ್ಲಿ ಇಸ್ಲಾಂಗೆ ಹಿಂದೂ ಯುವತಿಯ ಬಲವಂತದ ಮತಾಂತರ ಆರೋಪ, ಕೇಸ್‌ ದಾಖಲು

Exit mobile version