ವಿಜಯಪುರ: ಜಿಲ್ಲೆಯ ತಾಳಿಕೋಟೆಯಲ್ಲಿ ಶ್ರೀಶೈಲ ಜಗದ್ಗುರುಗಳ ಪಾದಯಾತ್ರೆ ಭಾಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ವಿಸ್ತಾರ ನ್ಯೂಸ್ ಬ್ಯಾನರ್ ಅನ್ನು ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಸಮ್ಮುಖದಲ್ಲಿ ಅನಾವರಣಗೊಳಿಸಿ ವಿಸ್ತಾರ ಕನ್ನಡ ಸಂಭ್ರಮ ಆಚರಿಸಲಾಯಿತು.
ಲೋಕ ಕಲ್ಯಾಣಾರ್ಥವಾಗಿ ಪರಿಸರ ರಕ್ಷಣೆ ಹಾಗೂ ದುಶ್ಚಟಗಳ ತ್ಯಜಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಯಡೂರದಿಂದ ಶ್ರೀಶೈಲದವರೆಗೆ ಪಾದಯಾತ್ರೆ ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ | Vistara News Launch | ಮಾಧ್ಯಮಗಳು ಪ್ರಜೆಗಳ ಮುಖವಾಣಿಯಾಗಲಿ, ವಿಸ್ತಾರ ನ್ಯೂಸ್ ವಿಸ್ತಾರವಾಗಲಿ: ಜಿ.ಎಂ. ಸಿದ್ದೇಶ್ವರ್
ಗುರುವಾರ ಜಿಲ್ಲೆಯ ತಾಳಿಕೋಟೆಗೆ ಆಗಮಿಸಿದ ಶ್ರೀಶೈಲ ಜಗದ್ಗುರುಗಳನ್ನು ಪಟ್ಟಣದ ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಜನತೆ ಭವ್ಯವಾದ ರೀತಿಯಲ್ಲಿ ಸ್ವಾಗತಿಸುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು. ನಂತರ ತಾಳಿಕೋಟೆ ಪಟ್ಟಣದ ರಾಜವಾಡೆಯಲ್ಲಿ ಧರ್ಮಸಭೆ ನಡೆಯಿತು. ಹತ್ತಾರು ಸಾವಿರ ಜನತೆ ನೆರೆದ, ವಿವಿಧ ಸುಕ್ಷೇತ್ರಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದ, ಗಣ್ಯಮಾನ್ಯರು ಉಪಸ್ಥಿತರಿದ್ದ ಈ ವೇದಿಕೆಯಲ್ಲಿ ರಾಜವಾಡೆಯ ಧರ್ಮಸಭೆಯಲ್ಲಿ ವಿಸ್ತಾರ ವಾಹಿನಿಯ ವಿಸ್ತಾರ ಕನ್ನಡ ಸಂಭ್ರಮ ಬ್ಯಾನರ್ ಅನಾವರಣಗೊಳಿಸಲಾಯಿತು.
ವಾಹಿನಿಯ ಪರವಾಗಿ ಧರ್ಮಸಭೆಯಲ್ಲಿ ಶ್ರೀಶೈಲ ಜಗದ್ಗುರುಗಳನ್ನು ಜಿಲ್ಲಾ ವರದಿಗಾರ ರಾಜು ಪಾಟೀಲ್ ಪೂಜ್ಯರನ್ನು ಗೌರವಿಸಿದರು. ಪ್ರತಿಯಾಗಿ ಶ್ರೀಶೈಲ ಜಗದ್ಗುರುಗಳು ನಮ್ಮ ಜಿಲ್ಲಾ ವರದಿಗಾರನಿಗೂ ಮಾಲಾರ್ಪಣೆ ಮಾಡಿ, ವಾಹಿನಿಗೂ ಶುಭಕೋರಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳ ಶಾಸಕ ಮಾತನಾಡಿದರು. ಪಾದಯಾತ್ರೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಅವರು ವಾಹಿನಿಯ ಬ್ಯಾನರ್ ಅನಾವರಣಗೊಳಿಸಿ, ವಾಹಿನಿಯ ಸಮಸ್ತ ಬಳಗಕ್ಕೆ ಶುಭಕೋರಿದರು.
ಸುಮಾರು 650 ಕಿ.ಮೀ. ಸಂಚರಿಸಲಿರುವ ಈ ಪಾದಯಾತ್ರೆ ಯೋಗಾಯೋಗ ಎನ್ನುವಂತೆ ವಿಸ್ತಾರ ನ್ಯೂಸ್ ಲೋಕಾರ್ಪಣೆಗೊಂಡ ದಿನವೇ ಬಸವನಾಡು ವಿಜಯಪುರ ಜಿಲ್ಲೆಯನ್ನು ಪ್ರವೇಶಿಸಿತ್ತು. ಶುಕ್ರವಾರ ಯಾದಗಿರಿ ಜಿಲ್ಲೆಯನ್ನು ಪಾದಯಾತ್ರೆ ಪ್ರವೇಶಿಸಲಿದೆ.
ಇದನ್ನೂ ಓದಿ | Vistara News Launch | ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ವಿಸ್ತಾರ ಕನ್ನಡ ಸಂಭ್ರಮಾಚರಣೆ