Site icon Vistara News

University | ಉಪಕುಲಪತಿ ನೇಮಕವಾಗಲು ನಾಲ್ಕೈದು ಕೋಟಿ ಡೀಲ್; ಭ್ರಷ್ಟಾಚಾರ ಬಾಂಬ್ ಸಿಡಿಸಿದ ಯತ್ನಾಳ್

yathnala

ವಿಜಯಪುರ: ವಿಶ್ವವಿದ್ಯಾಲಯಲ್ಲಿ (University) ಉಪಕುಲಪತಿ ನೇಮಕವಾಗಲು ನಾಲ್ಕೈದು ಕೋಟಿ ಡೀಲ್ ನಡೆಯುತ್ತದೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಮಾಹಿತಿ ಸಿಡಿಸಿದ್ದಾರೆ.

ಜಿಲ್ಲೆಗೊಂದು ವಿಶ್ವವಿದ್ಯಾಲಯ ಪರಿಕಲ್ಪನೆಯನ್ನು ವಿರೋಧಿಸಿರುವ ಯತ್ನಾಳ್‌, ಈಗಾಗಲೇ ವಿಜಯಪುರ ಜಿಲ್ಲೆಯಲ್ಲಿ ಒಂದು ವಿವಿ ಇದೆ. ಈಗ ಇನ್ನೊಂದು ವಿಶ್ವವಿದ್ಯಾಲಯ ಮಾಡುವುದು ಏಕೆ? ನನ್ನ ಅಭಿಪ್ರಾಯದಲ್ಲಿ ಜಿಲ್ಲೆಗೊಂದು ವಿವಿ ಮಾಡಬಾರದು. ಇದರಿಂದ ಎರಡೆರಡು ಸಾವಿರ ಕೋಟಿ ವಿವಿಗೆ ಹಾಕುತ್ತೀರಿ. ಅದು ವ್ಯರ್ಥವಾಗುತ್ತದೆ ಎಂದು ತಮ್ಮದೇ ಸರ್ಕಾರದ ಚಿಂತನೆಯನ್ನು ಟೀಕಿಸಿದರು.

ನಮ್ಮ ಸರ್ಕಾರ ಇದ್ದರೆ ಅವರು ಹೇಳಿದ್ದಕ್ಕೆಲ್ಲ ಹೌದಪ್ಪಗಳಿಗೆ ಹೌದಪ್ಪ ಅನ್ನಬೇಕಂತಿದೆಯೇನು ಎಂದು ಪ್ರಶ್ನೆ ಮಾಡಿದ ಅವರು, ಜಿಲ್ಲೆಯಲ್ಲಿ ಚೆನ್ನಮ್ಮ ವಿವಿ, ಅಕ್ಕಮಹಾದೇವಿ ವಿವಿ ಇವೆ. ವಿದ್ಯಾರ್ಥಿಗಳ ಸಂಖ್ಯೆ, ಸಾಮರ್ಥ್ಯದ ಮೇಲೆ ಮುಂದೆ ಬೇಕಾದರೆ ವಿಶ್ವವಿದ್ಯಾಲಯ ಮಾಡಲಿ. ಹೊಸ ಶಿಕ್ಷಣ ನೀತಿ ಪ್ರಕಾರ ಏನು ಆಗಬೇಕು ಆಗಲಿ ಎಂದರು.

ಕೋಟಿ ಕೋಟಿ ಕೊಟ್ಟೆ ಉಪಕುಲಪತಿ ಆಗೋದು!

ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಯಾವ ಅವ್ಯವಹಾರ ನಡೆಯುತ್ತದೆ ಎಂಬುದು ತಿಳಿದಿದೆ. ಮಂಗಳೂರು ವಿವಿ, ಮೈಸೂರು ವಿವಿ, ಬೀದರ್ ವಿವಿ, ಯುಟಿಯುಯಲ್ಲೂ ಅವ್ಯವಹಾರ ಇದ್ದೇ ಇದೆ. ಉಪಕುಲಪತಿ ಆಗಬೇಕಾದರೆ ನಾಲ್ಕೈದು ಕೋಟಿ ಕೊಟ್ಟೆ ಬಂದಿರುತ್ತಾರೆ. ಆ ಬಳಿಕ ಅವರು ಅದನ್ನು ವಾಪಸ್‌ ತೆಗೆದುಕೊಳ್ಳಬೇಕಲ್ಲ? ಅವರೇನು ಶಿಕ್ಷಣ ನೀಡುತ್ತಾರೆ? ವಿಸಿ ನೇಮಕದಲ್ಲಿ ಪಾರದರ್ಶಕ ಆಗಬೇಕು. ಒಳ್ಳೆ, ಪ್ರಾಮಾಣಿಕ ವಿಸಿ ನೇಮಕ ಆಗಬೇಕು ಎಂದರು.

ಇದನ್ನೂ ಓದಿ | ಯತ್ನಾಳ್ ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲಲಿ: ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಪಂಥಾಹ್ವಾನ

Exit mobile version