ವಿಜಯಪುರ : ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ವಾರದ ಹಿಂದೆ (ಸೆ.11) ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿ ಹೋಗಿದ್ದರು. ತಮ್ಮ ತಂದೆ-ತಾಯಿ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಅಜ್ಞಾತ ಸ್ಥಳದಿಂದ ಪ್ರೇಮಿಗಳು ವಿಡಿಯೊ ಮಾಡಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೊ ವೈರಲ್ (Viral Video) ಆಗಿದೆ.
ಜಾಲಗೇರಿ ಗ್ರಾಮದ ಅಮರ್ (22) ಅರ್ಚನಾ (24) ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕುಟುಂಬದವರು ಅರೇಂಜ್ಡ್ ಮ್ಯಾರೇಜ್ ಮಾಡಲು ಮುಂದಾಗಿರುವ ಕಾರಣ ಇಬ್ಬರು ಓಡಿ ಹೋಗಿದ್ದರು. ನಂತರ ಅರ್ಚನಾಳ ತಂದೆ, ಸಹೋದರರರು ಹಾಗೂ ಸಂಬಂಧಿಕರು ಅಮರ್ ತಂದೆ ಗೋರಖನಾಥ್ ಚೌಹಾಣ್, ತಾಯಿ ಕವಿತಾ ಮೇಲೆ ಈ ವಿಚಾರವಾಗಿ ಹಲ್ಲೆ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ಅಜ್ಞಾತ ಸ್ಥಳದಿಂದ ಪ್ರೇಮಿಗಳು ವಿಡಿಯೊ ಮೂಲಕ ಕುಟುಂಬದವರನ್ನು ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | Viral Video | ಹುಸಿಕೋಪಗೊಂಡ ಟೀಚರ್ಗೆ ಮುತ್ತಿಕ್ಕಿ, ಮುದ್ದು ಮಾಡಿ ಕ್ಷಮೆ ಕೇಳಿದ ಪುಟಾಣಿ ಬಾಲಕ
ಅರ್ಚನಾ ಮಾತನಾಡಿ ʻʻನಾನು ಪ್ರೀತಿಸಿದ ಹುಡಗನ ಜತೆ ಬಂದು ಗುಡಿಯಲ್ಲಿ ಮದುವೆಯಾಗಿದ್ದೇನೆ. ನನ್ನ ಕುಟುಂಬದವರು ಅಮರ್ ತಂದೆ ತಾಯಿಗೆ ಹಲ್ಲೆ ನಡೆಸುತ್ತಿದ್ದಾರೆ. ಅವರಿಗೆ ಹೆಚ್ಚು ಕಮ್ಮಿ ಆದರೆ ಅದಕ್ಕೆ ನಮ್ಮ ತಂದೆ ತಾಯಿ ಹಾಗೂ ಕುಟುಂಬಸ್ಥರು ಕಾರಣ. ನಮ್ಮ ಕುಟುಂಬದವರನ್ನು ಕಾಪಾಡಿʼʼ ಎಂದು ಮೂಲಕ ಮನವಿ ಮಾಡಿದ್ದಾರೆ.