Site icon Vistara News

Yoga Day 2022 | ಗೋಲ್‌ ಗುಂಬಜ್ ಅಂಗಳದಲ್ಲಿ ನಡೆದ ಯೋಗಾ ಡೇ ರಿಹರ್ಸಲ್‌

Yoga Day 2022

ವಿಜಯಪುರ: ಮಂಗಳವಾರ (ಜೂನ್‌ 21) ರಂದು ನಡೆಯಲಿರುವ ಯೋಗ ದಿನಾಚರಣೆಗೆ (Yoga Day 2022) ಸಾಕ್ಷಿಯಾಗಲಿರುವ ವಿಶ್ವಪ್ರಸಿದ್ಧ ವಿಜಯಪುರದ ಗೋಲ್‌ಗುಂಬಜ್ ಆವರಣದಲ್ಲಿ ಸೋಮವಾರ (ಜೂನ್ 20) ರಿಹರ್ಸಲ್ ನಡೆಯಿತು.

ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹೆಚ್.ಡಿ. ಆನಂದಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂಧೆ ಮತ್ತು ಜಿಲ್ಲಾಧಿಕಾರಿಗಳಾದ ರಮೇಶ ಕಳಸದ ಅವರು ರಿಹರ್ಸಲ್‌ನಲ್ಲಿ ಭಾಗಿಯಾದರು.

ಇದನ್ನೂ ಓದಿ |Yoga Day 2022 | ಯೋಗ ದಿನಾಚರಣೆಯ ಯೋಗಾಭ್ಯಾಸಕ್ಕೆ ಸಾಮಾನ್ಯ ನಿಯಮಗಳು ಇಲ್ಲಿವೆ

ಜೂನ್ 21ರ ಕಾರ್ಯಕ್ರಮಕ್ಕೆ ಸಿದ್ಧಗೊಂಡ ಗೋಲ್‌ಗುಂಬಜ್ ಆವರಣದ ವಿಶಾಲ ವೇದಿಕೆಯ ವೀಕ್ಷಣೆ ನಡೆಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನವು ವಿಜಯಪುರದ ಇತಿಹಾಸದ ಪುಟಗಳಲ್ಲಿ ದಾಖಲಾಗುವ ಹಾಗೆ ಶಿಸ್ತುಬದ್ಧ ರೀತಿಯಲ್ಲಿ ನಡೆಯಬೇಕಿದೆ.

Yoga Day 2022

ರಿಹರ್ಸ್‌ಲ್‌ನಲ್ಲಿ ನಿಗದಿತ ಸಮಯಕ್ಕೆ ಹಾಜರಾದಂತೆ, ಜೂನ್ 21ರಂದು ಕೂಡ ಸಮಯಪಾಲನೆ ಮತ್ತು ಶಿಸ್ತಿಗೆ ಮೊದಲಾದ್ಯತೆ ಕೊಡಬೇಕು ಎಂದು ಆವರಣದಲ್ಲಿದ್ದ ಆಯುರ್ವೇದ, ವೈದ್ಯಕೀಯ ಕಾಲೇಜು ಮತ್ತು ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಮತ್ತು ಇನ್ನಿತರರಿಗೆ ಸಲಹೆ ನೀಡಿದರು. ಯೋಗಪಟುಗಳು ಸಮವಸ್ತ್ರದೊಂದಿಗೆ ಹಾಜರಾಗಬೇಕು. ಯೋಗಾಸನದಲ್ಲಿ ಭಾಗಿಯಾಗುವವರಿಗೆ ಕುಡಿಯುವ ನೀರು, ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯ ಮೆಕ್ಕಳಕೆ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಎ.ಎಸ್.ಚಂಚಲಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | ಯೋಗ ದಿನ ಪ್ರಯುಕ್ತ ಮಲ್ಲೇಶ್ವರದಲ್ಲಿ ತಾಲೀಮು ಆರಂಭ

Exit mobile version