Site icon Vistara News

Religious conversion | ಹಿಂದು ಧರ್ಮದಲ್ಲಿ ಮತಾಂತರ ಹೆಚ್ಚಾಗಲು ನಾವೇ ಕಾರಣ ಎಂದ ವಿನಯ ಗುರೂಜಿ

Vinay guruji

ಉಡುಪಿ: ದೇಶದಲ್ಲಿ ಹಿಂದುಗಳ ಮತಾಂತರ (Religious conversion) ಹೆಚ್ಚಾಗಲು ನಾವೇ ಕಾರಣ ಎಂದು ಕೊಪ್ಪದ ಗೌರಿ ಗದ್ದೆ ಆಶ್ರಮದ ಅವಧೂತ ವಿನಯ್‌ ಗುರೂಜಿ ಹೇಳಿದ್ದಾರೆ.

ಉಡುಪಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಶೀರ್ವಚನ ನೀಡಿದ ಅವರು, ಮತಾಂತರಗಳ ಹಿಂದಿನ ಕಾರಣಗಳನ್ನು ವಿಶ್ಲೇಷಿಸಿದರು.

ಮತಾಂತರ ಆಗಲು ನಾವೇ ಕಾರಣ ಎಂತ ಬೇಸರ ವ್ಯಕ್ತಪಡಿಸಿದ ಅವಧೂತ ವಿನಯ್ ಗುರೂಜಿ ಅವರು, ಹಿಂದು ಧರ್ಮ ಶಾಸ್ತ್ರಗಳು ಕಳೆದು ಹೋಗಲು ನಮ್ಮೊಳಗಿನ ಮೇಲು ಕೀಳು ಎಂಬ ಭಾವನೆ ಕಾರಣ. ಎರಡು ಕಾರಣದಿಂದ ಮತಾಂತರ ಆಗುತ್ತಿದೆ. ಒಂದು ನಮ್ಮೊಳಗಿನ ಮೇಲು ಕೀಳು, ಮತ್ತೊಂದು ಬಡತನ ಎಂದರು.

ನಾವು ಯಾರೋ ಒಬ್ಬರನ್ನು ದೇವಸ್ಥಾನದಿಂದ ಹೊರ ತಳ್ಳಿದಾಗ ಇನ್ನೊಂದು ಧರ್ಮದಲ್ಲಿ ಸ್ವಾಗತ ಮಾಡುತ್ತಾರೆ. ಇನ್ನೊಂದು ಧರ್ಮದಲ್ಲಿ ಸಮಾನತೆ ಇದೆ ಎಂದಾಗ ಸಹಜವಾಗಿ ಅ ಧರ್ಮಕ್ಕೆ ಹೋಗುತ್ತಾರೆ. ಮೊದಲು ನಮ್ಮ ತೊಡಕನ್ನು ನಾವು ಸರಿ ಮಾಡಬೇಕು ಎಂದು ಅವರು ಹೇಳಿದರು.

ಈಗ ಕಾಲ ಬದಲಾಗಿದೆ
ಹಾಗಂತ ಹಿಂದು ಧರ್ಮದಲ್ಲಿ ಈಗಲೂ ಪರಿಸ್ಥಿತಿ ಹೀಗೇ ಇದೆ ಅಂತ ಅಲ್ಲ, ಸಾಕಷ್ಟು ಬದಲಾಗಿದೆ ಎಂದ ಅವರು, ಒಂದು ಕಾಲದಲ್ಲಿ ಹೆಣ್ಣು ಮಕ್ಕಳು ದೇವಸ್ಥಾನಕ್ಕೆ ಹೋಗಬಾರದು, ಜಪತಪ ಮಾಡಬಾರದು ಎಂದಿತ್ತು. ಈಗೇನಾದೂ ನೇಮ ನಿಷ್ಠೆಗಳು ಉಳಿದಿದ್ದರೆ ಅದಕ್ಕೆ ಕಾರಣ ಹೆಣ್ಮಕ್ಕಳು. ರಂಗೋಲಿ, ಸಂಸ್ಕೃತಿ ಉಳಿದಿದ್ದರೆ ಅದಕ್ಕೆ ಕಾರಣ ಹೆಣ್ಮಕ್ಕಳು ಎಂದರು.

ಇದನ್ನೂ ಓದಿ | Motivational story | ಸ್ಪೆಷಲ್‌ ಸ್ಪೆಷಲ್‌ ಅಂತ ಒಳಗೇ ಮುಚ್ಚಿಟ್ಟಿದ್ದ ಬೆಳ್ಳಿ ತಟ್ಟೆ ಕೊನೆಗೆ ನಾಯಿಯ ಬಟ್ಟಲಾಯಿತು!

Exit mobile version