ಶಶಿಧರ ಮೇಟಿ, ಬಳ್ಳಾರಿ
ಆರೋಗ್ಯ ವ್ಯವಸ್ಥೆ ಗುಣಮಟ್ಟದಿಂದ ಕೂಡಿದ್ದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಆದರೆ, ಈ ವ್ಯವಸ್ಥೆಯೇ ಬುಡಮೇಲಾದರೆ? ಜನರ ಆರೋಗ್ಯ ವಿಚಾರವನ್ನೇ ದೌರ್ಬಲ್ಯವನ್ನಾಗಿ ಮಾಡಿಕೊಂಡು ರಾಜ್ಯದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಸ್ಯ್ಕಾನಿಂಗ್ ಸೆಂಟರ್ ಗುಣಾತ್ಮಕತೆ ಕಾಯ್ದುಕೊಳ್ಳುವಲ್ಲಿ ರಚಿತವಾಗಿರುವ ರಾಜ್ಯ ಕ್ಷ ಕಿರಣ ವಿಕಿರಣಾ ಸುರಕ್ಷತಾ ನಿರ್ದೇಶನಾಲಯದ ನಿರ್ದೇಶಕ ಹುದ್ದೆ ನೇಮಕದಲ್ಲಿ ರಾಜ್ಯ ಸರ್ಕಾರ ನಿಯಮ ಪಾಲನೆ ಮಾಡದೆ (Violation of rules) ನಿರ್ಲಕ್ಷ್ಯವಹಿಸಿ, ಪ್ರಭಾವಕ್ಕೆ ಒಳಗಾಗಿದೆ!
ದೇಶದಲ್ಲಿನ ಸ್ಕ್ಯಾನಿಂಗ್ ಸೆಂಟರ್ ಗುಣಾತ್ಮಕತೆ ಕಾಯ್ದುಕೊಳ್ಳಲು ಮತ್ತು ನಿಗಾವಹಿಸಲು ಕೇಂದ್ರ ಮಟ್ಟದಲ್ಲಿ ದಿ ಆಟೋಮಿಕ್ ಎನರ್ಜಿ ರೆಗುಲೇಟರಿ ಬೋರ್ಡ್ (ಎಇಆರ್‌ಬಿ) ಇದೆ. ಇದಕ್ಕೆ ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಇರುವ ಸ್ಕ್ಯಾನಿಂಗ್ ಸೆಂಟರ್ ಮೇಲೆ ನಿಗಾವಹಿಸಲು ಕಷ್ಟ ಸಾಧ್ಯವೆಂದು ರಾಜ್ಯ ಮಟ್ಟದಲ್ಲಿಯೇ ಕ್ಷ ಕಿರಣ ವಿಕಿರಣಾ ಸುರಕ್ಷತಾ ನಿರ್ದೇಶನಾಲಯವನ್ನು ಆರಂಭಿಸಲಾಗಿದ್ದು, ಇದು ಸ್ಕ್ಯಾನಿಂಗ್ ಸೆಂಟರ್‌ಗಳ ಗುಣಾತ್ಮಕತೆ ಕಾಯ್ದುಕೊಳ್ಳುವ ಕೆಲಸ ಮಾಡುತ್ತಿದೆ.
ರಾಜ್ಯ ಸರ್ಕಾರದೊಂದಿಗೆ ಎಇಆರ್‌ಬಿಯಿಂದ ಎಂಓಯು:
ಎಇಆರ್‌ಬಿಯು ರಾಜ್ಯದಲ್ಲಿಯು ನಿರ್ದೇಶನಾಲಯ ಆರಂಭಿಸಲು ೨೦೧೮ರಲ್ಲಿ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಎಂಓಯು ಮಾಡಿಕೊಂಡು ನಿರ್ದೇಶನಾಲಯಕ್ಕೆ ನೇಮಕ ಆಗುವ ನಿರ್ದೇಶಕರು ಸೇರಿದಂತೆ ತಂಡಕ್ಕೆ ಇರುವ ವಿದ್ಯಾರ್ಹತೆ ಏನು? ಯಾವ ರೀತಿಯ ಅನುಭವ ಹೊಂದಿರಬೇಕು ಎಂಬ ಅಂಶಗಳು, ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಯಾವ ಸೌಲಭ್ಯ ಇದ್ದರೆ ಗುಣಾತ್ಮಕತೆ ಸಾಧ್ಯ ಎಂಬ ನಿಟ್ಟಿನಲ್ಲಿ ಎಇಆರ್‌ಬಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಒಡಂಬಡಿಕೆ ಮಾಡಿಕೊಂಡಿದೆ.
ಇದನ್ನೂ ಓದಿ | Nirmala Sitharaman | ಏಮ್ಸ್ ಆಸ್ಪತ್ರೆಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ
ನಿರ್ದೇಶಕರಿಗೆ ವಿದ್ಯಾರ್ಹತೆ ಏನು?
ಎಂಓಯುನಂತೆ ರಾಜ್ಯ ಸರ್ಕಾರವು ರಾಜ್ಯ ಕ್ಷ-ಕಿರಣ ವಿಕಿರಣಾ ಸುರಕ್ಷತಾ ನಿರ್ದೇಶನಾಲಯದ ನಿರ್ದೇಶಕರ ಅಧಿಸೂಚನೆ ಹೊರಡಿಸಿದೆ. ಸ್ಥಾನಕ್ಕೆ ಪಿಜಿಕ್ಸ್‌ನಲಿ ಡಿಗ್ರಿ, ಎಂಎಸ್ಸಿ ಡಿಪ್ಲೋಮಾ ಇನ್ ರೆಡಿಯಾಲಜಿಕಲ್ ಪಿಜಿಕ್ಸ್ ಅಥವಾ ಇಕ್ವಾಲೆನೆಂಟ್ ಅಥವಾ ಬೇಸಿಕ್ ಡಿಗ್ರಿ ಇನ್ ಸೈನ್ಸ್, ಪೋಸ್ಟ್ ಗ್ರ್ಯಾಜುವೇಟ್ ಡಿಗ್ರಿ ಇನ್ ರೇಡಿಯಾಲಜಿಕಲ್ ಪಿಜಿಕ್ಸ್ ಮಾಡಿರಬೇಕೆಂಬ ವಿದ್ಯಾರ್ಹತೆಯನ್ನು ರಾಜ್ಯ ಸರ್ಕಾರ ಎಇಆರ್‌ಬಿಯೊಂದಿಗೆ ಮಾಡಿಕೊಂಡು ಎಂಓಯುನಲ್ಲಿ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
ನಿರ್ದೇಶಕರ ನೇಮಕದಲ್ಲಿ ನಿಯಮ ಪಾಲಿಸಿಲ್ಲ
ನಿರ್ದೇಶಕ ಸ್ಥಾನಕ್ಕೆ ಡಾ. ಸಂತೋಷ್ ಶಿವರಾಜ್ ಬಿರಾದಾರ್, ಎ.ಎಲ್.ರಾಮಾನಂದ್, ಮಹಿತ ಕೆ.ಸಿ, ಡಾ.ರವಿ ಎನ್. ಡಾ. ಪೃಥ್ವಿ, ಡಾ. ಷಣ್ಮುಖಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಆದರೆ, ರಾಜ್ಯ ಸರ್ಕಾರವು ಎಂಬಿಬಿಎಸ್ ಎಂಡಿ ಇನ್ ರೇಡಿಯೊ ಡಯಾಗ್ನೊಸ್ ಮಾಡಿರುವ ಡಾ.ರವಿ ಎನ್. ಅವರನ್ನು ನೇಮಕ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಎಇಆರ್‌ಬಿ ವಿದ್ಯಾರ್ಹತೆ ನಿಯಮವನ್ನು ನೇಮಕದಲ್ಲಿ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಇದೀಗ ಇತರ ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಕದ ತಟ್ಟಿದ್ದಾರೆ.
ಇಂತಹ ಆಯ್ಕೆಯಲ್ಲಿ ರಾಜ್ಯ ಸರ್ಕಾರ ವಿದ್ಯಾರ್ಹತೆ ಪಾಲನೆ ಮಾಡದೆ, ಕೇವಲ ಪ್ರಬಲ ಪ್ರಭಾವಕ್ಕೆ ಒಳಗಾಗಿ ನೇಮಕಾತಿ ನಿಯಮ, ವಿದ್ಯಾರ್ಹತೆ ಪಾಲನೆ ಮಾಡದಿದ್ದರೆ ರಾಜ್ಯದ ಆರೋಗ್ಯದ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟ, ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.
ರಾಜ್ಯ ಕ್ಷ-ಕಿರಣ ವಿಕಿರಣಾ ಸುರಕ್ಷತಾ ನಿರ್ದೇಶನಾಲಯದ ನಿರ್ದೇಶಕರ ನೇಮಕದಲ್ಲಿ ವಿದ್ಯಾರ್ಹತೆ ನಿಯಮ ಪಾಲನೆ ಮಾಡಬೇಕು, ಈ ವಿಚಾರ ಅತ್ಯಂತ ಸೂಕ್ಷ್ಮ, ಅರ್ಹ ವ್ಯಕ್ತಿಗಳನ್ನು ನಿರ್ದೇಶಕರನ್ನು ನೇಮಕ ಮಾಡಿದರೆ, ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಹುದು. ಕ್ಷ-ಕಿರಣ ವಿಕಿರಣಾ ಕೇಂದ್ರಗಳಲ್ಲಿ ಗುಣಾತ್ಮಕತೆ ಕಾಯ್ದುಕೊಳ್ಳಬಹುದು.
| ಕಿಶೋರ್ ಕೊಟ್ಟೂರು, ನಿವೃತ್ತ ಕ್ಷ-ಕಿರಣ ವಿಭಾಗ ಸಿಬ್ಬಂದಿ, ನ್ಯಾಯವಾದಿ
ಇದನ್ನೂ ಓದಿ | ಭದ್ರತಾ ವೈಫಲ್ಯ ಆಗಿದ್ದಲ್ಲ, ರಾಹುಲ್ ಗಾಂಧಿಯೇ ನಿಯಮ ಉಲ್ಲಂಘಿಸಿದ್ದಾರೆ; ಪ್ರತಿಕ್ರಿಯಾ ಪತ್ರ ಬರೆದ ಸಿಆರ್ಪಿಎಫ್