ಬೆಂಗಳೂರು: ಹತ್ತು ಅಡಿ ಆಳದ ಗುಂಡಿಗೆ ಬಿದ್ದು ನರಳಾಡುತ್ತಿದ್ದ ಶ್ವಾನವನ್ನು ಸ್ಥಳೀಯರು (Dog Rescue) ರಕ್ಷಿಸಿದ್ದಾರೆ. ಇಲ್ಲಿನ ಬೃಂದವನ ನಗರ ಸಮೀಪ ಬಸ್ ನಿಲ್ದಾಣದ ಕಾಮಗಾರಿಗಾಗಿ ಬೃಹತ್ ಗುಂಡಿಯನ್ನು (Viral News) ತೋಡಲಾಗಿತ್ತು. ಮಂಗಳವಾರ ಸುರಿದ ಭಾರಿ ಮಳೆಗೆ (Bangalore Rain) ಗುಂಡಿಯಲ್ಲಿ ಅರ್ಧ ಭಾಗದಷ್ಟು ನೀರು ತುಂಬಿಕೊಂಡಿತ್ತು.10 ಅಡಿ ಆಳದ ಗುಂಡಿ ಇರುವುದನ್ನು ಕಾಣದ ಶ್ವಾನವು ಆಯತಪ್ಪಿ ಬಿದ್ದಿತ್ತು.
ಶ್ವಾನವು ಮೇಲಕ್ಕೆ ಬರಲು ಆಗದೆ ನರಳಾಡುತ್ತಾ, ಕಿರುಚಾಡುತ್ತಿತ್ತು. ಮೇಲಕ್ಕೆ ಎಗರಿ ಬರಲು ಎಷ್ಟೇ ಯತ್ನಿಸಿದರೂ, ಭಾರಿ ಮಳೆಗೆ ಮತ್ತೆ ಜಾರಿ ಕೆಳಕ್ಕೆ ಬೀಳುತ್ತಿತ್ತು. ಸುರಿಯುತ್ತಿರುವ ಭಾರಿ ಮಳೆಗೆ ನೀರೆಲ್ಲವೂ ಗುಂಡಿಗೆ ಹರಿದು ಬರುತ್ತಿತ್ತು. ಇದು ಶ್ವಾನದ ಪ್ರಾಣಕ್ಕೂ ಕಂಟಕವಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಮಹಿಳೆಯರು ಏಣಿ ಹಾಕಿದರು. ಆದರೂ ಮಳೆಯಿಂದಾಗಿ ಪೂರ್ತಿ ಒದ್ದಾಯಾಗಿದ್ದ ಶ್ವಾನವು ಮೂಲೆ ಸೇರಿಕೊಂಡು ಭಯದಿಂದ ನಡುಗಲು ಆರಂಭಿಸಿತ್ತು.
ಇದನ್ನೂ ಓದಿ: Viral News : ಬಿಟ್ಟಿ ಊಟ ಮಾಡಲು ಹೋಗಿ ಸ್ಕೂಟರನ್ನೇ ಕಳೆದುಕೊಂಡ! ಮದುವೆ ಊಟಕ್ಕೆ ನುಗ್ಗುವ ಮುನ್ನ ಈ ಸುದ್ದಿ ಓದಿ
ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರೂ, ಇದರ ನಡುವೆಯು ಮಹಿಳೆಯೊಬ್ಬರು ಏಣಿ ಸಹಾಯದಿಂದ 10 ಆಳದ ಗುಂಡಿಗೆ ಇಳಿದಿದ್ದರು. ಶ್ವಾನವನ್ನು ಮೇಲಕ್ಕೆ ಎತ್ತಲು ಯತ್ನಿಸಿ ವಿಫಲರಾದರು. ಬಳಿಕ ಮತ್ತೊಬ್ಬ ಯುವಕ ಶ್ವಾನಕ್ಕೆ ಹಗ್ಗವನ್ನು ಕಟ್ಟಿ ಅದರ ಸಹಾಯದಿಂದ ಮೇಲೆತ್ತಲಾಯಿತು. ಸ್ಥಳೀಯರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ