Site icon Vistara News

Viral News: ಅಯ್ಯೋ ನನ್ಮಗನೇ ಓದೋರಿಗೆ ಕೊಡಲೇ; ಪಿಡಿಒಗಳ ಮುಂದೆ ದುರಹಂಕಾರ ತೋರಿದ ಶಾಸಕ ಗುಬ್ಬಿ ಶ್ರೀನಿವಾಸ್‌

SR Srinivas

#image_title

ತುಮಕೂರು: ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡಿ ನಂತರ ಅದು ನಮ್ಮ ಗ್ರಾಮ್ಯ ಭಾಷೆ, ನಾವು ಮಾತನಾಡೋದೇ ಹಿಂಗೆ, ಅವನು ನನ್ನ ಖಾಸಾ ಗೆಳೆಯ ಹಾಗಾಗಿ ಆ ತರ ಮಾತನಾಡಿದೆ ಎಂದು ಸಬೂಬು ಹೇಳುವುದನ್ನು ಕೇಳಿದ್ದೀರಿ. ಕೆಲವು ರಾಜಕಾರಣಿಗಳಂತೂ ಅಧಿಕಾರಿಗಳ ಜತೆ ಏಕವಚನದಲ್ಲಿ ಮಾತನಾಡುತ್ತಾ ಅವರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಯತ್ನಿಸುವುದು ಜೋರಾಗಿದೆ. ಇಂಥವರ ಸಾಲಿನಲ್ಲಿ ಈಗ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ (SR Srinivas) ಕೂಡಾ ಸೇರಿದ್ದಾರೆ (Viral News).

ಅವರು ಪಿಡಿಒಗಳ (Panchayat development officer) ಸಭೆಯಲ್ಲಿ ಆಡಿದ ಮಾತು, ಬಳಸಿದ ಪದಗಳು ಭಾರಿ ಸದ್ದು ಮಾಡಿದ್ದು, ಅವರ ವರ್ತನೆಗೆ ಆಕ್ರೋಶವೂ ಕೇಳಿಬಂದಿದೆ. ಪಿಡಿಒಗಳ ಸಭೆಯಲ್ಲಿ ಅವರು ಏಕವಚನದಲ್ಲೇ ಸಂಬೋಧನೆ ಮಾಡಿದ್ದು, ʻಅಯ್ಯೋ ನನ್ಮಗನೇʼ ಎಂದು ಹೇಳಿದ್ದು ವೈರಲ್‌ ಆಗಿದೆ.

ಗುಬ್ಬಿಯ ತಾಲೂಕು ಪಂಚಾಯಿತಿ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಭೆಯನ್ನು ಆಯೋಜಿಸಲಾಗಿತ್ತು. ಅದರಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈ ವೇಳೆ ಸಭೆಯುದ್ದಕ್ಕೂ ಶ್ರೀನಿವಾಸ್‌ ಅವರು ಪಿಡಿಒಗಳನ್ನು ಏಕವಚನದಲ್ಲೇ ಸಂಬೋಧಿಸಿದರು.

ಅನುದಾನ ಬಳಕೆ ಕುರಿತಂತೆ ಪಿಡಿಓಗಳಿಗೆ ತಾಕೀತು ಮಾಡುವ ವೇಳೆ ʻʻಅಯ್ಯೋ ನನ್ಮಗನೆʼʼ ಎಂದು ಶಾಸಕರು ಹೇಳಿದರು. ಶಾಸಕ ಶ್ರೀನಿವಾಸ್‌ರ ಅಸಂವಿಧಾನಿಕ ಪದ ಬಳಕೆ ವಿಡಿಯೊ ವೈರಲ್‌ ಆಗಿದೆ.

ಸಭೆಯಲ್ಲಿ ಮಹಿಳಾ ಪಿಡಿಒಗಳು ಕೂಡಾ ಭಾಗವಹಿಸಿದ್ದರು.

ಶ್ರೀನಿವಾಸ್‌ ಹೇಳಿದ್ದೇನು?

ʻಅಯ್ಯೋ ನನ್ಮಗನೇ ಓದೋರಿಗೆ ಕೊಡಲೇ.. ಆಮೇಲೆ ಎಸ್‌ಇಪಿ ಟಿಎಸ್‌ಪಿದೆಲ್ಲ ಖರ್ಚು ಮಾಡಿದ್ದೀಯಾ? ಯಾಕ್‌ ಖರ್ಚು ಮಾಡಿಲ್ಲ? ಕೊಡಿ.. ವಿದ್ಯಾರ್ಥಿಗಳಿಗೆ, ಓದೋ ಹುಡುಗರಿಗೆ ಮ್ಯಾಕ್ಸಿಮಮ್‌ ಕೊಡಿ. ಬಡವರ ಮಕ್ಕಳು ಓದ್ತಾವಲ್ಲ. ಅವಕ್ಕೆ ಕೊಡಿ. ಟೆಕ್ನಿಕಲ್‌ ಎಜುಕೇಷನ್‌ ಕಲೀತಾರಲ್ಲಾ ಅವರಿಗೆ ಜಾಸ್ತಿ ಕೊಟ್ಟು ಕ್ಲಿಯರ್‌ ಮಾಡಿ. ಅಯ್ಯೋ ಓದೋವಕೆ ಕೊಡಲೇ.. ಡ್ರೈವಿಂಗ್‌ ಲೈಸೆನ್ಸ್‌ಗೆ ಕೋಡಬೇಡಿ, ಹಾಳು ಬಿದ್ದು ಹೋಗ್ಲಿ.. ಫಸ್ಟ್‌ ಪ್ರಿಯಾರಿಟಿ ಓದೋ ಮಕ್ಕಳಿಗೆ ಇರಬೇಕು, ಆಮೇಲೆ ಅಂಗವಿಕಲರು, ಆಮೇಲೆ ವಿಧವೆಯರಿಗೆ.ʼʼ ಎಂದು ವಿಡಿಯೋದಲ್ಲಿ ಅವರು ಹೇಳಿದ್ದಾರೆ.

ಗುಬ್ಬಿ ಶ್ರೀನಿವಾಸ್‌ ಅವರ ನಿಲುವುಗಳು, ಬಡವರ ಮಕ್ಕಳಿಗೆ ಒಳಿತಾಗಬೇಕು ಎನ್ನುವ ಚಿಂತನೆಗಳೇನೋ ಚೆನ್ನಾಗಿವೆ. ಆದರೆ, ಪಿಡಿಒ ಮೊದಲಾದ ಅಧಿಕಾರಿಗಳನ್ನು ನಡೆಸಿಕೊಂಡ ರೀತಿ ಮತ್ತು ಆಡಿದ ಮಾತಿನಲ್ಲಿ ದುರಹಂಕಾರ ಎದ್ದು ಕಾಣುತ್ತಿತ್ತು.

ಇದನ್ನೂ ಓದಿ: Video viral: ನಡುರಸ್ತೆಯಲ್ಲೇ ಮೈಮರೆತ ಹಾವುಗಳು; ಜನ ಕಂಡು ದಿಕ್ಕಾಪಾಲಾಯ್ತು; ವೈರಲ್ ಆಯ್ತು ಮಿಲನದ ವಿಡಿಯೊ!

Exit mobile version