Site icon Vistara News

Viral Video | ಹಲ್ಲಿಯೊಂದು ಹಳ್ಳಿಯೊಂದರಲ್ಲಿ ಚಹ ಕುಡಿಯಿತಂತೆ!

Viral Video

ಕೊಪ್ಪಳ: ಇದೊಂದು ತಾಜಾ ಚಹಾದ ಸುದ್ದಿ. ಆಹ್ಲಾದಕರ ವಾತಾವರಣದಲ್ಲಿ ಬಿಸಿ ಬಿಸಿ ಟೀಯನ್ನು ಸವಿಯುವುದು ಚಹಾಪ್ರಿಯರಿಗೆ ಅಚ್ಚುಮೆಚ್ಚು. ಆದರೆ, ಇಲ್ಲೊಂದು ವಿಚಿತ್ರ ಸನ್ನಿವೇಶವಿದ್ದು, ಎಲ್ಲರನ್ನೂ ವಿಸ್ಮಯಗೊಳಿಸಿದೆ. ಲೊಚಗುಟ್ಟುವ ಹಲ್ಲಿಯೊಂದು ಲೊಚ ಲೊಚನೆ ಚಹಾ ಸೇವಿಸಿದೆ! ಇದೀಗ ಆ ವಿಡಿಯೋ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಅಂದಹಾಗೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೊಮ್ಮಿನಾಳ ಗ್ರಾಮದಲ್ಲಿ ಹಲ್ಲಿಯೊಂದು ಹಳ್ಳಿಯೊಂದರಲ್ಲಿ ಚಹಾ ಕುಡಿದ ಪ್ರಸಂಗ ನಡೆದಿದೆ. ಇಲ್ಲಿನ ಹೋಟೆಲ್ ಒಂದರಲ್ಲಿ ಗ್ರಾಹಕರೊಬ್ಬರು ತಮ್ಮ ಟೀ ಲೋಟವನ್ನು ಟೇಬಲ್‌ ಮೇಲೆ ಇಟ್ಟಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಹಲ್ಲಿಯು ಚಹಾ ಲೋಟವನ್ನೇರಿದೆ. ಹಾಗೇ ತನ್ನ ತಲೆ ಬಗ್ಗಿಸಿ ಬಾಯಿ ಚಪ್ಪರಿಸಿದೆ.

ಈ ದೃಶ್ಯವನ್ನು ಹೊಮ್ಮಿನಾಳದ ಹನುಮಂತಪ್ಪ ಎಂಬುವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸೋಷಿಯಲ್‌ ಮೀಡಿಯಾ ಮೂಲಕ ಹರಿಬಿಟ್ಟಿದ್ದಾರೆ. ಇದೀಗ ಎಲ್ಲೆಡೆ ಬಾಯಲ್ಲೂ ಹಲ್ಲಿ ಚಹಾ ಕುಡಿದಿದ್ದೇ ಸುದ್ದಿಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: Viral Video| ಮರಿ ಆನೆಗೆ Z Plus Security ನೀಡಿದ ಪೋಷಕ ಆನೆಗಳು!

Exit mobile version