ಹಾವೇರಿ: ಮಂಗನಾಟಕ್ಕೆ ಮನಸೋಲದವರು ಯಾರಿದ್ದಾರೆ? ಅದೆಷ್ಟೇ ಕಿಟಲೆ ಮಾಡಲಿ, ಮಂಗಗಳ ಬುದ್ಧಿಗೆ ಎಲ್ಲರೂ ತಲೆಬಾಗಲೇಬೇಕು. ಅವುಗಳ ಆಟ-ತುಂಟಾಟವು ನಮ್ಮಲ್ಲಿ ಸಿಟ್ಟು ತರಿಸುವುದಕ್ಕಿಂತ ನಗು ತರಿಸುವುದೇ ಹೆಚ್ಚು. ಸದ್ಯ ಹಾವೇರಿಯಲ್ಲಿ ಫ್ರೀ ಬಸ್ (Free Bus) ಹತ್ತಿದ ಕೋತಿಯೊಂದು ಯಾರ ಭಯವಿಲ್ಲದೇ ಬಸ್‌ನಲ್ಲಿ ಪ್ರಯಾಣಿಕರೊಂದಿಗೆ ಜಾಲಿ ರೈಡಿಂಗ್ (Viral Video) ಮಾಡಿದೆ.
ಹಾವೇರಿಯಿಂದ ಹಿರೇಕೆರೂರಿಗೆ ಹೊರಟಿದ್ದ ಸಾರಿಗೆ ಬಸ್ ಹತ್ತಿದ ಕೋತಿಯು ಬಸ್ ಕೊನೆಯ ಸೀಟ್‌ಗೆ ಹೋಗಿ ವಿಂಡೋ ಸೀಟ್‌ನಲ್ಲಿ ಕುಳಿತು ಪ್ರಯಾಣಿಸಿದೆ. ಡ್ರೈವರ್ ಏನಾದರೂ ಬ್ರೇಕ್ ಹಾಕಿದಾಗ ಬಿದ್ದು ಬಿಟ್ಟರೆ ಎಂದು ಬಲಗೈಯಲ್ಲಿ ಕಂಬಿಯನ್ನು ಗಟ್ಟಿ ಹಿಡಿದು ಕೊಂಡಿತ್ತು.
ಶಾಲಾ ಮಕ್ಕಳು ಬಿಟ್ಟುಕೊಟ್ಟ ವಿಂಡೋ ಸೀಟ್‌ನಲ್ಲೇ ಭದ್ರವಾಗಿ ಕುಳಿತ ಕೋತಿ ಸುಮಾರು 30 ಕಿ.ಮೀ ದೂರದವರೆಗೆ ಬಸ್‌ನಲ್ಲಿ ಪ್ರಯಾಣ ಮಾಡಿದೆ. ಜನರಿಂದ ತುಂಬಿ ತುಳುಕುತ್ತಿದ್ದ ಬಸ್‌ನಲ್ಲಿ ಭಯವಿಲ್ಲದೆ ಪ್ರಯಾಣಿಸಿದೆ. ಬಸ್‌ನಲ್ಲಿ ಮಂಗನ ಜಾಲಿ ರೈಡ್ ಕಂಡು ಜನರು ಖುಷಿಯಾದರು. ಪಕ್ಕದಲ್ಲಿದ್ದ ಪ್ರಯಾಣಿಕರು ಮಂಗನ ರೈಡಿಂಗ್‌ನನ್ನು ಸೆರೆಯಿಡಿದರು.
ಕೋತಿ ಪ್ರಯಾಣದಲ್ಲಿ ಜನರು ಬಾಳೆ ಹಣ್ಣು, ಬಿಸ್ಕೇಟ್ ನೀಡಿದ್ದಾರೆ. ಆದರೆ ಅದ್ಯಾವುದನ್ನು ಸ್ವೀಕರಿಸಿದ ಕೋತಿ, ತನ್ನ ಪ್ರಯಾಣವನ್ನು ಆನಂದಿಸಿದೆ. ರಸ್ತೆಯಲ್ಲಿ ಹೋಗುವವರನ್ನು ನೋಡುತ್ತಾ, ತಣ್ಣಗೆ ಬೀಸುತ್ತಿದ್ದ ಗಾಳಿಯನ್ನು ಸವಿಯುತ್ತಾ ಎಂಜಾಯ್ ಮಾಡಿದೆ. ಮರದಿಂದ ಮರಕ್ಕೆ ಜಿಗಿಯುತ್ತಿದ್ದ ಮಂಗನ, ಬಸ್ ಪ್ರಯಾಣಕ್ಕೆ ಜನರು ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ