ಬೆಳಗಾವಿ: ದೇಶ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಒಂದು ಪಕ್ಷಕ್ಕಾಗಿ ಅಲ್ಲ, ರಾಮ ಮಂದಿರ, ಶ್ರೀಕೃಷ್ಣ ಮಂದಿರ ಪೂರ್ಣವಾಗಲು ಹಾಗೂ ಹಿಂದು ಧರ್ಮಕ್ಕೋಸ್ಕರ ಬಿಜೆಪಿ ಬೇಕು ಎಂದು (Virat Hindu Samavesha) ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಧರ್ಮವೀರ ಸಂಭಾಜಿ ಮೈದಾನದಲ್ಲಿ ಶ್ರೀರಾಮ ಸೇನೆ ಮತ್ತು ಹಿಂದು ರಾಷ್ಟ್ರ ಸೇನಾ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿರಾಟ್ ಹಿಂದು ಸಮಾವೇಶದಲ್ಲಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದು ಹೆಣ್ಣುಮಕ್ಕಳನ್ನು ಹರಾಜು ಹಾಕುತ್ತಾರೆ. ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತಾರೆ. ಹಿಂದು ವಿರೋಧಿ ವಿಚಾರಧಾರೆ ನೆಹರು ಅವರಿಂದ ಪ್ರಾರಂಭವಾಗಿ, ರಾಹುಲ್ ಗಾಂಧಿವರೆಗೆ ಬಂದಿದೆ. ಹೀಗಾಗಿ ನರೇಂದ್ರ ಮೋದಿಯನ್ನು ನಾವು ಬೆಂಬಲಿಸಬೇಕಾಗಿದೆ. ಕರ್ನಾಟಕದಲ್ಲಿ ಬೇರೆ ಬೇರೆ ಗೊಂದಲಗಳು ಇವೆ. ಆದರೆ, ಗೋಹತ್ಯೆ ಸಂಪೂರ್ಣ ನಿಷೇಧವಾಗಲು, ರಾಮ, ಕೃಷ್ಣ ಮಂದಿರ ನಿರ್ಮಾಣವಾಗಲು ಮೋದಿ ಬೇಕು, ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಈ ದೇಶ ಹಾಳು ಮಾಡಿ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಸಹಕರಿಸಿದ್ದು ಕಾಂಗ್ರೆಸ್. ಮುಸ್ಲಿಮರಿಗೋಸ್ಕರ ಜೊಲ್ಲು ಸುರಿಸುವವರು ಕಾಂಗ್ರೆಸ್‌ನಲ್ಲಿದ್ದಾರೆ. ಬಾಬ್ರಿ ಮಸೀದಿ ಮಾದರಿಯಲ್ಲಿ ಕಾಂಗ್ರೆಸ್ ಅನ್ನು ಸಮಾಧಿ ಮಾಡಬೇಕಿದೆ. ಅದಕ್ಕೆ ಹಿಂದು ಸಮಾಜ ಒಗ್ಗಟ್ಟಾಗಬೇಕಿದೆ. ಗೋಹತ್ಯೆ ನಿಷೇಧ ಮಾಡಿದ್ದು ರಾಜ್ಯ ಬಿಜೆಪಿ. ಮತಾಂತರ ನಿಷೇಧ ಕಾಯ್ದೆ ತಂದಿದ್ದು ಬಿಜೆಪಿ ಎಂದ ಅವರು, ಕರ್ನಾಟಕ ಬಿಜೆಪಿಯವರು ಸ್ವಲ್ಪ ಗೊಂದಲ ಮಾಡುತ್ತಿದ್ದಾರೆ. ಎಲ್ಲೋ ದಾರಿ ತಪ್ಪಿದವರನ್ನು ನಾವು ಸರಿ ಮಾಡೋಣ ಎಂದರು.
ಆರ್‌ಎಸ್ಎಸ್ ವಿಚಾರಧಾರೆ ಇವತ್ತು ನಮ್ಮನ್ನು ಇಲ್ಲಿವರೆಗೆ ತಂದಿದೆ. ಆದರೆ, ನಮ್ಮ ಶ್ರೇಷ್ಠ ಸಂಸ್ಕೃತಿ, ಧರ್ಮ, ಸಂಪ್ರದಾಯ ನಷ್ಟ ಮಾಡಲು ಮೂರು ದುಷ್ಟಶಕ್ತಿಗಳು ಯತ್ನಿಸುತ್ತಿವೆ. ಒಂದು ಇಸ್ಲಾಂ, ಎರಡನೇಯದು ಕ್ರಿಶ್ಚಿಯನ್ನರು, ಮೂರನೇಯದು ಕಮ್ಯುನಿಸ್ಟರು. ಹಿಂದುಗಳನ್ನು ವಿರೋಧ ಮಾಡುವ ನಾಸ್ತಿಕರು, ಬುದ್ಧಿಜೀವಿಗಳು ದೇಶದ ಸಾಕಷ್ಟು ಭೂಭಾಗ ನುಂಗಿ ನೀರು ಕುಡಿದಿದ್ದಾರೆ. ಇವರಿಂದ ದೇಶ ಉಳಿಸಬೇಕಾಗಿದೆ. ಇಲ್ಲಿ ಯಾವುದೇ ಜಾತಿ, ಮತ, ಪಕ್ಷ ಇಲ್ಲ. ನಾವೆಲ್ಲ ಒಂದಾಗಿ ಹಿಂದು ರಾಷ್ಟ್ರ ನಿರ್ಮಾಣ ಮಾಡಬೇಕಿದೆ, ಅದಕ್ಕಾಗಿಯೇ ಈ ವಿರಾಟ್ ಹಿಂದು ಸಮಾವೇಶ ಎಂದು ಹೇಳಿದರು.
ನಾ ಖಾವೂಂಗಾ ನಾ ಖಾನೇ ದೂಂಗಾ ಎನ್ನುವಂತೆ 9 ವರ್ಷದಲ್ಲಿ ಪ್ರಧಾನಿ ಮೇಲೆ ಒಂದೇ ಒಂದು ಅಪವಾದ ಇಲ್ಲ. 2014ರ ಕಾಂಗ್ರೆಸ್ ಆಡಳಿತದ ನಂತರ ದೇಶದಲ್ಲಿ ವಿಚಾರಧಾರೆ ಬದಲಾವಣೆ ಆಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಮ್ಮ ಸೈನಿಕರ ಮೇಲೆ ಕಲ್ಲು ಎಸೆಯುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಏನೂ ಮಾಡಿರಲಿಲ್ಲ. ಆದರೆ ಮೋದಿ ಸರ್ಕಾರ, ಭಯೋತ್ಪಾದನೆ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ ಎಂದು ಹಾಡಿ ಹೊಗಳಿದರು.
ಕ್ರಿಶ್ಚಿಯನ್ನರಿಂದ ಹಿಂದುಗಳ ಮತಾಂತರ
ಕ್ರಿಶ್ಚಿಯನ್ನರು ಹಿಂದುಗಳನ್ನು ಮತಾಂತರ ಮಾಡುತ್ತಿದ್ದಾರೆ. ದಲಿತ, ಬ್ರಾಹ್ಮಣ, ಲಿಂಗಾಯತ, ಕುರುಬರನ್ನು ಮತಾಂತರ ಮಾಡುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಜನ ಕುರುಬ ಜನಾಂಗ ಮತಾಂತರ ಆಗಿದ್ದಾರೆ. ಸಿದ್ದರಾಮಯ್ಯನವರೇ, ನೀವು ಕುರುಬ ಜನಾಂಗದಿಂದಲೇ ಆಶ್ರಯ ಪಡೆದು ಓಡಾಡುತ್ತಿದ್ದೀರಿ, ನಾಳೆ ಕುರುಬ ಜನಾಂಗವೇ ಇರಲ್ಲ. ಈ ಬಗ್ಗೆ ವಿಚಾರ ಮಾಡಬೇಕು ಎಂದು ಹೇಳಿದ ಅವರು, ದಾವಣಗೆರೆ ಜಿಲ್ಲೆಯಲ್ಲಿ ಒಂದು ಲಕ್ಷ ಲಿಂಗಾಯತರು ಮತಾಂತರವಾಗಿದ್ದಾರೆ. ಬೈಲಹೊಂಗಲದಲ್ಲಿ ವೀರಶೈವ ಲಿಂಗಾಯತ ಚರ್ಚ್ ಇದೆ, ಬೋರ್ಡ್ ಇದೆ ಎಂದು ಹೇಳಿದರು.
ಮಸೀದಿ ನಿರ್ಮಾಣಕ್ಕೆ ವಿರೋಧ
ಬೆಳಗಾವಿಯ ಸಾರಥಿ ನಗರದಲ್ಲಿ ಮಸೀದಿ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿ, ಸಾರಥಿ ನಗರದಲ್ಲಿ ಮನೆಯಲ್ಲಿ ಅನಧಿಕೃತವಾಗಿ ಮಸೀದಿ ಮಾಡಿದ್ದಾರೆ. ಆದರೆ, ಪಾಲಿಕೆ ಕಮಿಷನರ್ ಕಾಂಗ್ರೆಸ್ ಬಾಲ ಬಡಿಯುತ್ತಿದ್ದಾರೆ. ಒಂದು ವಾರದಲ್ಲಿ ಮಸೀದಿ ನೆಲಸಮ ಮಾಡದಿದ್ದರೆ ನಾವೇ ಕೆಡವುತ್ತೇವೆ. ಕೆಡವುದಿದ್ದರೆ ಕೆಡವು, ಇಲ್ಲವಾದರೆ ದೀರ್ಘ ರಜೆ ತೆಗೆದುಕೊಂಡು ಹೋಗು ಎಂದ ಅವರು, ಎಂಎಲ್‌ಎಗಳೇ ನಿಮಗೆ ಸಾಧ್ಯವಿಲ್ಲವೆಂದರೆ ಹೇಳಿ ನಾನು ಬರುತ್ತೇನೆ ಎಂದು ಹೇಳಿದರು.
ಮುಸ್ಲಿಮರಿಗೆ ಸಂವಿಧಾನ ಇಲ್ಲ
ದೆಹಲಿಯಲ್ಲಿ ಶ್ರದ್ಧಾ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಪ್ರೀತಿ ಮಾಡಿದ ಹುಡುಗಿಯನ್ನು ಕತ್ತರಿಸಿದ ಪಾಪಿಯನ್ನು ಅಲ್ಲಾಹು ಕೂಡ ಕ್ಷಮಿಸಲ್ಲ. ಆ ಪಾಪಿಗೆ ಜಾಮೀನು ಕೊಟ್ಟರೆ ನಾಳೆ ಜಡ್ಜ್ ಮಗಳನ್ನೂ ಕತ್ತರಿಸುತ್ತಾರೆ. ನಿಮಗೆ ಹಿಜಾಬ್ ಮುಖ್ಯವೋ ಶಿಕ್ಷಣ ಮುಖ್ಯವೋ ಎಂದರೆ ಹಿಜಾಬ್ ಎನ್ನುತ್ತಾರೆ. ಇವತ್ತು ಹಿಜಾಬ್ ಅಂತಾರೆ, ನಾಳೆ ಬುರ್ಖಾ ಅಂತಾರೆ, ನಾಡಿದ್ದು ಮಸೀದಿ ಬೇಕು ಅಂತಾರೆ. ಮುಸ್ಲಿಮರಿಗೆ ಸಂವಿಧಾನ ಇಲ್ಲ, ಇಸ್ಲಾಂ ಒಂದೇ ಇರುವುದು ಎಂದು ಕಿಡಿ ಕಾರಿದರು.
ಹಿಂದು ಸಂಘಟನೆಗಳನ್ನು ಬಲಗೊಳಿಸಿ
ಇಂದು ನಾವು ಜಾಗೃತರಾಗಬೇಕಿದೆ. ಅದು ಆರ್‌ಎಸ್ಎಸ್, ಬಜರಂಗದಳ, ಶ್ರೀರಾಮಸೇನೆ ಇರಬಹುದು. ಯಾವುದೇ ಹಿಂದು ಸಂಘಟನೆ ಇದ್ದರೂ ತನು ಮನ ಧನದಿಂದ ಬಲಗೊಳಿಸಬೇಕು. ದೇವಸ್ಥಾನ, ಮಠಾಧಿಪತಿಗಳಿಗೆ ದುಡ್ಡು ಹಾಕೋದು ನಿಲ್ಲಿಸಿ ಹಿಂದುಪರ ಕಾರ್ಯಕರ್ತರಿಗೆ ಸಹಾಯ ಮಾಡಬೇಕು. ದೇಶಿ ವಸ್ತು ಬಹಿಷ್ಕರಿಸಿ ಸ್ವದೇಶಿ ವಸ್ತು ಖರೀದಿಸಿ ಎಂದು ಕರೆ ನೀಡಿದರು.
ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಸಂಗೊಳ್ಳಿ ರಾಯಣ್ಣ ಕೀ ಜೈ ಎನ್ನಬೇಕು, ಶಸ್ತ್ರಪೂಜೆ ಆಗಬೇಕು ಮನೆಯಲ್ಲಿ ಶಸ್ತ್ರ ಇಡಬೇಕು. ದೇಶದ ಉಳಿವಿಗಾಗಿ, ನಮ್ಮ ಹೆಣ್ಣು ಮಕ್ಕಳು, ತಂದೆ-ತಾಯಿ ಉಳಿಯಲು ಶಸ್ತ್ರ ಪೂಜೆ ಆಗಬೇಕು. ಆಯುಧ ಪೂಜೆ ಎಂದರೆ ವಾಹನಗಳ ಪೂಜೆ ಅಲ್ಲ. ತಲವಾರು, ಮಚ್ಚು, ಚಾಕು, ಕುಡಗೋಲನ್ನು ಇಟ್ಟು ಪೂಜೆ ಮಾಡಿ ಎಂದರು.
ಮುಸ್ಲಿಮರ ಜತೆ ವ್ಯಾಪಾರ ಬೇಡ
ಮುಸ್ಲಿಮರ ಜತೆ ವ್ಯಾಪಾರ ಮಾಡಿದರೆ ಗೋಹತ್ಯೆ, ಲವ್ ಜಿಹಾದ್‌ಗೆ ಸಪೋರ್ಟ್ ಮಾಡಿದ ಹಾಗೆ ಎಂದ ಅವರು, ಲವ್ ಜಿಹಾದ್, ಹಲಾಲ್, ಹಿಜಾಬ್ ಮೂಲಕ ಸಂವಿಧಾನ ಧಿಕ್ಕರಿಸುವರ ಜತೆ ವ್ಯಾಪಾರ ಬೇಡ. ಪೊಲೀಸ್ ಠಾಣೆ ಸುಟ್ಟು ಹಾಕಿದವರು, ಸೈನಿಕರ ಮೇಲೆ ಕಲ್ಲೆಸೆದವರ ಜತೆ ವ್ಯಾಪಾರ ನಿಲ್ಲಿಸಬೇಕು ಎಂದು ಹೇಳಿದರು.
ಹಿಂದು ರಾಷ್ಟ್ರಸೇನಾ ಸಂಸ್ಥಾಪಕ ಧನಂಜಭಾಯ್ ದೇಸಾಯಿ, ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸೇರಿ ನೂರಾರು ಹಿಂದು ಕಾರ್ಯಕರ್ತರು ಭಾಗಿಯಾಗಿದ್ದರು.
ಇದನ್ನೂ ಓದಿ | Basavaraj Bommai | ಇನ್ನು ಮುಂದೆ ವೋಟ್ ಬ್ಯಾಂಕ್ ರಾಜಕಾರಣ ನಡೆಯೋದಿಲ್ಲ: ಸಿಎಂ ಬೊಮ್ಮಾಯಿ