Site icon Vistara News

Vistara Best teacher Award 2023: ಶಿಕ್ಷಕ ವರ್ಗಕ್ಕೆ ಬೆಂಗಾವಲಾಗಿ ನಿಂತ ಮಾದರಿ ಸುದ್ದಿ ಸಂಸ್ಥೆ ವಿಸ್ತಾರ; ಹೊರಟ್ಟಿ ಪ್ರಶಂಸೆ

Vistara News Best Teachers Award presentation Inauguration

ಬೆಂಗಳೂರು: ವಿಸ್ತಾರ ನ್ಯೂಸ್‌ (Vistara News) ಶಿಕ್ಷಕರ ಬೆನ್ನು ತಟ್ಟುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಒಂದು ಪ್ರಚಂಡ ಶಕ್ತಿಗೆ ಬೆಂಗಾವಲಾಗಿ ನಿಂತಿರುವುದನ್ನು ಜಗತ್ತಿಗೆ ಸಾರಿದೆ. ಈ ಮೂಲಕ ಇದೊಂದು ರಾಜ್ಯದ ಮಾದರಿ ಸುದ್ದಿ ಸಂಸ್ಥೆ (States Model Media house) ಎಂದು ಋಜುವಾತಾಗಿವೆ ಎಂದು ವಿಧಾನ ಪರಿಷತ್‌ನ ಸಭಾಪತಿಗಳಾದ ಶಿಕ್ಷಣ ತಜ್ಞ ಬಸವರಾಜ ಹೊರಟ್ಟಿ (Basavaraja Horatti) ಹೇಳಿದರು.

ಅಲ್ಪಾವಧಿಯಲ್ಲೇ ರಾಜ್ಯಾದ್ಯಂತ ಮನೆ ಮಾತಾಗಿ, ರಾಜ್ಯದ ಪ್ರಭಾವಶಾಲಿ ಸುದ್ದಿ ಮಾಧ್ಯಮ ಎನಿಸಿಕೊಂಡಿರುವ ವಿಸ್ತಾರ ನ್ಯೂಸ್‌ (Vistara News private Ltd) ನಾಡಿನ ಬೆಳಕಾಗಿರುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಗೌರವಿಸುವ (Vistara News Awards) ಉದ್ದೇಶದಿಂದ ರೂಪಿಸಿದ ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್ಸ್‌ -2023 (Vistara News Best teacher award-2023) ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶುಕ್ರವಾರ (ಡಿಸೆಂಬರ್‌ 22) ಸಂಜೆ ಬೆಂಗಳೂರಿನ ಕೆ.ಜಿ. ರೋಡ್‌ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲೆಯ 35 ಶಿಕ್ಷಕ/ಶಿಕ್ಷಕಿಯರು ಮತ್ತು ಮೂವರು ಪ್ರಯೋಗಶೀಲ ಸಾಧಕರನ್ನು ವಿಸ್ತಾರ ನ್ಯೂಸ್‌ ಬೆಸ್ಟ್‌ ಟೀಚರ್‌ ಅವಾರ್ಡ್‌ ನೀಡಿ ಗೌರವಿಸಲಾಯಿತು. ರಾಜ್ಯ ಮಟ್ಟದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಈಗಾಗಲೇ ಕೆಲವು ಜಿಲ್ಲೆಗಳ ಕಾರ್ಯಕ್ರಮ ಮುಕ್ತಾಯಗೊಂಡಿದ್ದು, ಉಳಿದ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿದೆ.

ಎಷ್ಟು ಹಣ ಕೊಟ್ಟರೂ ಸಿಗದ ನೆಮ್ಮದಿ ಇಲ್ಲಿ ಸಿಕ್ಕಿದೆ

ವಿಸ್ತಾರ ನ್ಯೂಸ್‌ ನೀಡಿರುವ ಈ ಪ್ರಶಸ್ತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತೊಡಗಿಕೊಂಡಿರುವ ಇಂಥ ಸಾವಿರಾರು ಶಿಕ್ಷಕರಿಗೆ ಪ್ರೇರಣೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ನನ್ನಂಥವರಿಗೇ ಎಷ್ಟು ಹಣ ಕೊಟ್ಟರೂ ಸಿಗದಷ್ಟು ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರೆ ಶಿಕ್ಷಕರು ಎಂಥ ಸಾರ್ಥಕ ಭಾವವನ್ನು ಅನುಭವಿಸಿರಬಹುದು ಎಂದು ನೀವೇ ಯೋಚಿಸಿ ಎಂದು ಬಸವರಾಜ ಹೊರಟ್ಟಿ ಹೇಳಿದರು. ನಾನು ಶಿಕ್ಷಕನಾಗಿ ಸೇವೆಯನ್ನು ಸಲ್ಲಿಸಿ ನಂತರದ ಹೋರಾಟದ ಪ್ರತಿಫಲವಾರಿ ಇಲ್ಲಿದ್ದೇನೆ ಎಂದು ನೆನಪಿಸಿಕೊಂಡರು.

ಶಿಕ್ಷಕರು ಮಕ್ಕಳ ಬಗ್ಗೆ ತಂದೆ-ತಾಯಿಯಷ್ಟೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಪೋಷಕರು ಕೂಡಾ ಅಷ್ಟೇ ಹೊಣೆಗಾರಿಕೆಯನ್ನು ಹೊಂದಬೇಕು ಎಂದು ಅವರು ಕಿವಿಮಾತು ಹೇಳಿದರು.

ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಮಾನಸಿಕ ನೆಮ್ಮದಿಯಿಂದ ಇದ್ದರೆ ಮಾತ್ರ ಉತ್ತಮ ಪಾಠ ಮಾಡಬಲ್ಲರು. ಸಮಾಜ ಮತ್ತು ಸರ್ಕಾರ ಅವರಿಗೆ ಅಂಥ ನೆಮ್ಮದಿಯನ್ನು ಒದಗಿಸಬೇಕು ಎಂದರು ಹೇಳಿದರು ಬಸವರಾಜ ಹೊರಟ್ಟಿ.

ಒಂದು ಪ್ರಶಸ್ತಿಯನ್ನು ಪಡೆಯುವುದು ಎಷ್ಟು ಕಷ್ಟ.‌ ಅದಕ್ಕೆ ಎಷ್ಟು ವಶೀಲಿ ಮಾಡಬೇಕು ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ವಿಸ್ತಾರ ನ್ಯೂಸ್ ಯಾವುದೇ ಮುಲಾಜೇ ಇಲ್ಲದೆ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಆಯ್ಕೆ ಪ್ರಕ್ರಿಯೆಯನ್ನು, ಸಾಧಕರನ್ನು ಗುರುತಿಸಿದ್ದನ್ನು ಹೊರಟ್ಟಿ ಕೊಂಡಾಡಿದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ : ‘ನಮ್ಮೂರ ಶಾಲೆ-ನಮ್ಮೆಲ್ಲರ ಶಾಲೆ’ ಅಭಿಯಾನಕ್ಕೆ ಜನ ಬೆಂಬಲ ಆಶಾದಾಯಕ

ಮಾಧ್ಯಮ ಸರಿಯಾಗಿ ಶ್ರಮಿಸಿದರೆ ದೇಶವನ್ನು ಬಹು ಎತ್ತರಕ್ಕೆ ಕೊಂಡೊಯ್ಯಬಹುದು. ವಿಸ್ತಾರ ನ್ಯೂಸ್‌ ಈ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದೆ. ಸಾಮಾಜಿಕ ಕಳಕಳಿಯನ್ನು ನಿಜಾರ್ಥದಲ್ಲಿ ಹೊಂದಿರುವ ವಿಸ್ತಾರ ನ್ಯೂಸ್‌ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು ಬಸವರಾಜ ಹೊರಟ್ಟಿ.

Vistara awards

ಬೆಂಗಳೂರು ಜಿಲ್ಲಾ ಮಟ್ಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಖ್ಯಾತ ಚಿತ್ರ ನಟಿ ತಾರಾ ಅನುರಾಧಾ, ಮೇಲ್ಮನೆ ಸದಸ್ಯ ನಾಗರಾಜ್‌ ಯಾದವ್‌ ಸೇರಿದಂತೆ ಹಲವು ಗಣ್ಯರು ಶಿಕ್ಷಣ ತಜ್ಞರು ಉಪಸ್ಥಿತರಿದ್ದರು. ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು.

Exit mobile version