ಬೆಂಗಳೂರು: ರಾಜ್ಯ ಮತ್ತು ದೇಶದಲ್ಲಿ ಮಂಗಳವಾರ ನಡೆದ ಪ್ರಮುಖ 10 ಘಟನಾವಳಿಗಳ ಪಟ್ಟಿ ಇಲ್ಲಿದೆ.
1. Agnipath: ಸೇನೆ ಸೇರಲು ಯುವಕರಿಗೆ ಸುವರ್ಣ ಅವಕಾಶ; ಅಗ್ನಿಪಥ್ ಯೋಜನೆಗೆ ಕೇಂದ್ರದ ಅನುಮೋದನೆ
ಕೇಂದ್ರ ಸರ್ಕಾರ ಇಂದಿನಿಂದ (ಜೂ.15) ಸಶಸ್ತ್ರ ಪಡೆಗಳಿಗಾಗಿ ಟೂರ್ ಆಫ್ ಡ್ಯೂಟಿ ಅಥವಾ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ಪ್ರಾರಂಭಿಸಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಮತ್ತು ಕೇಂದ್ರ ಸಚಿವ ಸಂಪುಟ ಜಂಟಿಯಾಗಿ ಈ ಯೋಜನೆಗೆ ಅನುಮೋದನೆ ನೀಡಿದೆ. ಸೇನೆ ಸೇರಬೇಕೆಂಬ ಮಹದಾಸೆ ಇಟ್ಟುಕೊಂಡ ಯುವಜನರಿಗೆ ಇದೊಂದು ಸುವರ್ಣಾವಕಾಶ. ಅಗ್ನಿಪಥ್ ನೇಮಕಾತಿ ಯೋಜನೆಯಡಿ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ನೇಮಕ ಮಾಡಿಕೊಳ್ಳಲಾಗುವುದು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
2. 18 ತಿಂಗಳಲ್ಲಿ 10 ಲಕ್ಷ ಜಾಬ್: ಸರಕಾರಿ ಖಾಲಿ ಹುದ್ದೆ ಭರ್ತಿಗೆ ಮೋದಿ ಆರ್ಡರ್
ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು: ಇದು ಪ್ರಧಾನಿ ನರೇಂದ್ರ ಮೋದಿ ಆರ್ಡರ್. ಈ ರೀತಿ ಮಿಷನ್ ಮೋಡ್‌ನಲ್ಲಿ ನೇಮಕಾತಿ ನಡೆಯಬೇಕು ಎಂದು ಅವರು ಆದೇಶ ಕೊಟ್ಟಿದ್ದು ಕೇಂದ್ರ ಸರಕಾರದ ನಾನಾ ಇಲಾಖೆಗಳು ಮತ್ತು ಸಚಿವಾಲಯಗಳಿಗೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
3. ಎರಡನೇ ದಿನವೂ ಮುಂದುವರಿದ ರಾಹುಲ್ ಇಡಿ ವಿಚಾರಣೆ; ಧರಣಿ ಕುಳಿತ ಕಾಂಗ್ರೆಸಿಗರು
ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಅನುಷ್ಠಾನ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಎರಡನೇ ದಿನವೂ ಇ.ಡಿ ಅಧಿಕಾರಿಗಳ ಮುಂದೆ ಹಾಜರಾದರು. ಸೋಮವಾರ ಕಾಂಗ್ರೆಸ್ ನಾಯಕರ ಭಾರಿ ಹೈಡ್ರಾಮಾದ ಬಳಿಕ ಒಂಬತ್ತು ಗಂಟೆ ಕಾಲ ವಿಚಾರಣೆ ಎದುರಿಸಿದ್ದ ಕಾಂಗ್ರೆಸ್ ನಾಯಕ ಮಂಗಳವಾರವೂ ಅದೇ ಮಾದರಿಯಲ್ಲಿ ಗ್ರಿಲ್‌ಗೆ ಒಳಗಾದರು. ಈ ನಡುವೆ ರಾಹುಲ್ ಅವರು ಇ.ಡಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತಿಲ್ಲ ಎನ್ನಲಾಗುತ್ತಿದೆ. ರಾಹುಲ್ ಹೀಗೆ ಮಾಡಿದರೆ ಅಧಿಕಾರಿಗಳು ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳೂ ಇವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
4. Mekedatu Row | ಮತ್ತೆ ತಮಿಳುನಾಡಿನ ತಗಾದೆ, ವ್ಯಾಪಕ ವಿರೋಧ
ರಾಜ್ಯದ ಮೇಕೆದಾಟು ಯೋಜನೆಗೆ ತಮಿಳುನಾಡು ಮತ್ತೆ ತಗಾದೆ ತೆಗೆದಿರುವುದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ತಮಿಳುನಾಡಿನ ವಿರೋಧ ಪರಿಗಣಿಸದೇ ಈ ಯೋಜನೆಗೆ ಇರುವ ಅಡ್ಡಿಗಳನ್ನು ದೂರ ಮಾಡಬೇಕೆಂದು ಕನ್ನಡ ಪರ ಹೋರಾಟಗಾರರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಒತ್ತಾಯಿಸುತ್ತಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
5. ರಾಷ್ಟ್ರಪತಿ ಚುನಾವಣೆ; ಮಮತಾ ಬ್ಯಾನರ್ಜಿ ಕರೆದ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಒಪ್ಪಿಗೆ
ರಾಷ್ಟ್ರಪತಿ ಚುನಾವಣೆಯನ್ನು ಈ ಸಲ ಪ್ರತಿಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಎನ್‌ಡಿಒ ಒಕ್ಕೂಟದಿಂದ ನಿಲ್ಲುವ ಅಭ್ಯರ್ಥಿಯೇ ಗೆಲ್ಲುವುದು ನಿಶ್ಚಿತ ಎಂಬ ಸನ್ನಿವೇಶ ಈಗಾಗಲೇ ಸೃಷ್ಟಿಯಾಗಿದ್ದರೂ ಪ್ರತಿಪಕ್ಷಗಳು ಒಮ್ಮತದಿಂದ ಒಬ್ಬ ಅಭ್ಯರ್ಥಿಯನ್ನು ರಾಷ್ಟ್ರಪತಿ ಚುನಾವಣೆಗೆ ಕಣಕ್ಕಿಳಿಸಲು ಮುಂದಾಗಿವೆ. ಈ ಬಗ್ಗೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಮಮತಾ ಬ್ಯಾನರ್ಜಿ (Mamata Banerjee) ದೆಹಲಿಯ ಕಾನ್‌ಸ್ಟಿಟ್ಯೂಶನ್ ಕ್ಲಬ್‌ನಲ್ಲಿ ಬುಧವಾರ (ಜೂ.15)ರಂದು ಮಧ್ಯಾಹ್ನ 3 ಗಂಟೆಗೆ ಪ್ರತಿಪಕ್ಷಗಳ ಸಭೆ ಕರೆದಿದ್ದಾರೆ. ಹಾಗೇ, ಈ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಕೂಡ ಒಪ್ಪಿಕೊಂಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
6. ಗೋವಿಂದ ದೇವಾಲಯ ಲೋಕಾರ್ಪಣೆ ಮಾಡಿದ ರಾಷ್ಟ್ರಪತಿ ಕೋವಿಂದ
ಬೆಂಗಳೂರಿನ ಕನಕಪುರ ರಸ್ತೆ ವಸಂತಪುರದಲ್ಲಿ ಇಸ್ಕಾನ್ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾಗಿರುವ ತಿರುಮಲ ಮಾದರಿಯ ಶ್ರೀ ರಾಜಾಧಿರಾಜ ಗೋವಿಂದ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲಾಯಿತು. ಆಗಸ್ಟ್ 1ರಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಭಾಗವಾಗಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಲೋಕಾರ್ಪಣೆ ಮಾಡಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
7. ಶಕ್ತಿಕಪೂರ್ ಪುತ್ರ ಸಿದ್ಧಾಂತ್ ಕೊಕೇನ್ ಸೇವಿಸಿದ್ದು ದೃಢ
ಹಲಸೂರಿನ ದಿ ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್ ಪಾರ್ಟಿ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ಪೊಲೀಸ್ ವಶದಲ್ಲಿದ್ದ ಬಾಲಿವುಡ್ ನಟ ಸಿದ್ಧಾಂತ್ ಕಪೂರ್‌ಗೆ ಜಾಮೀನು ಲಭಿಸಿದ್ದು, ಜೈಲಿನಿಂದ ಬಿಡುಗಡೆಯಾಗಿದ್ದಾನೆ. ನಿಷೇಧಿತ ಮಾದಕ ದ್ರವ್ಯ ಕೊಕೇನ್ ಅನ್ನು ಸಿದ್ಧಾಂತ್ ಕಪೂರ್ ಸೇವಿಸಿರುವುದು ದೃಢಪಟ್ಟಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
8. Assembly 2023 | ಬಾದಾಮಿಯಿಂದ ಕೋಲಾರಕ್ಕೆ ಸಿದ್ದರಾಮಯ್ಯ ಶಿಫ್ಟ್?
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಾದಾಮಿ ವಿಧಾನಸಭಾ ಕ್ಷೇತ್ರವನ್ನೂ ತೊರೆಯುವ ನಿರ್ಧಾರ ಮಾಡಿದ್ದಾರೆ. 2023ರ ವಿಧಾನಸಭೆ ಚುನಾವಣೆಗೆ ಇನ್ನು ಒಂದು ವರ್ಷಕ್ಕೂ ಕಡಿಮೆ ಸಮಯ ಉಳಿದಿರುವಂತೆ ಸಿದ್ದರಾಮಯ್ಯ ಈ ನಿರ್ಧಾರ ಕೈಗೊಳ್ಳಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
9. ಮಧುಮೇಹಿಗಳಿಗೆ IIScಯಿಂದ ಸ್ಪೆಷಲ್ ಪಾದರಕ್ಷೆ, ನೋವಾಗಲ್ಲ, ಕೀವಾಗಲ್ಲ!
ಮಧುಮೇಹ ಸಮಸ್ಯೆ ತೀವ್ರವಾಗಿರುವವರಿಗೆ ಪಾದರಕ್ಷೆ ಧರಿಸುವುದು ಕೂಡ ದೊಡ್ಡ ಸಮಸ್ಯೆಯೇ. ಕಾಲು ಸ್ಪರ್ಶ ಜ್ಞಾನವನ್ನು ಕಳೆದುಕೊಳ್ಳುವುದರಿಂದ ಕೆಲವೊಂದು ಭಾಗದಲ್ಲಿ ಗಾಯವಾಗಿ ಕೀವಾದರೂ ಗೊತ್ತಾಗುವುದಿಲ್ಲ. ಇದೀಗ ಕಾಲುಗಳಿಗೆ ಯಾವುದೇ ಗಾಯವಾಗದಂತೆ, ಯಾವುದೇ ನೋವಾಗದಂಥ ಹೊಸ ಮಾದರಿಯ ಪಾದರಕ್ಷೆಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಿದ್ಧಪಡಿಸಿದೆ. ಇದಕ್ಕೆ ಸ್ನಾಪಿಂಗ್ ಫುಟ್‌ವೇರ್ ಎಂದು ಹೆಸರಿಡಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)
10. ತುಕಡೆ ತುಕಡೆ ಗ್ಯಾಂಗ್ ರೀತಿಯಲ್ಲೆ ಬರಗೂರು ಕೆಲಸ: ಸಚಿವ ನಾಗೇಶ್
ದೇಶವನ್ನು ತುಂಡರಿಸುವ ಘೋಷಣೆ ಹಾಗೂ ಕೃತ್ಯ ಎಸಗುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ರೀತಿಯಲ್ಲೆ ಪ್ರೊ. ಬರಗೂರು ರಾಮಚಂದ್ರಪ್ಪ ಕೆಲಸ ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಆರೋಪಿಸಿದ್ದಾರೆ. ರಾಜ್ಯಾದ್ಯಂತ ಪಠ್ಯಪುಸ್ತಕ ವಿವಾದ ಮುಕ್ತಾಯ ಕಾಣುತ್ತಿರುವಂತೆಯೇ ಜವಾಹರಲಾಲ್ ನೆಹರೂ ವಿವಿಯ ರೊಮಿಲಾ ಥಾಪರ್ ಸೇರಿ ಅನೇಕರು ಬಹಿರಂಗ ಪತ್ರವೊಂದನ್ನು ಸೋಮವಾರ ಬರೆದಿದ್ದರು. ತಿರುಚಿದ ಇತಿಹಾಸ ಮಕ್ಕಳಿಗೆ ಕಲಿಸಿಕೊಡಬೇಡಿ ಎಂದಿದ್ದರು. ಈ ಕುರಿತು ನಾಗೇಶ್ ಪ್ರತಿಕ್ರಿಯಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ)