Site icon Vistara News

Vistara Impact | ನಾಲಾ ಜಾಗದಲ್ಲೇ ಸ್ಲಂ ನಿವಾಸಿಗಳಿಗೆ ಆಶ್ರಯ ಮನೆ; ಕಾಮಗಾರಿಗೆ ತಡೆ ನೀಡಿದ ಜಿಲ್ಲಾಧಿಕಾರಿ

gadag news

ಗದಗ: ರಾಜ ಕಾಲುವೆ, ಕೆರೆ ಹಾಗೂ ನಾಲಾ ಅಕ್ಕ-ಪಕ್ಕ ನಿವೇಶನ ನಿರ್ಮಿಸಬಾರದು ಎಂಬ ನಿಯಮವಿದ್ದರೂ ನಗರಸಭೆ ಅಧಿಕಾರಿಗಳು ನಾಲಾ ಜಾಗದಲ್ಲೇ ಸ್ಲಂ ನಿವಾಸಿಗಳಿಗೆ ಮನೆ ಕಟ್ಟಲು ಮುಂದಾಗಿದ್ದ ಬಗ್ಗೆ ವಿಸ್ತಾರ ನ್ಯೂಸ್‌ ವರದಿ (Vistara Impact) ಮಾಡಿದ್ದು, ಈಗ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಕಾಮಗಾರಿಗೆ ತಾತ್ಕಾಲಿಕ ತಡೆ ನೀಡಿದ್ದಾರೆ.

ಸ್ಲಂ ನಿವಾಸಿಗಳಿಗೆ ಆಶ್ರಯ ನೆಪದಲ್ಲಿ ನಾಲೆ ಜಾಗದಲ್ಲಿ ಮನೆ ಕಟ್ಟಿಕೊಡಲು ನಗರಸಭೆ ಮುಂದಾಗಿತ್ತು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ, ಪ್ರತಿಭಟನೆ ವ್ಯಕ್ತವಾಗಿತ್ತು. ಈ ಬಗ್ಗೆ ವಿಸ್ತಾರ ನ್ಯೂಸ್ ವಿಸ್ತೃತ ವರದಿಯನ್ನು ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಈಗ ಕಾಮಗಾರಿಗೆ ತಡೆಯೊಡ್ಡಲಾಗಿದೆ.

ಏನಿದು ವಿವಾದ?
ನಾಲಾದಲ್ಲಿ ಸುಮಾರು ೪೫ ಸ್ಲಂ ಕುಟುಂಬಕ್ಕೆ ಆಶ್ರಯ ಮನೆಯನ್ನು ಕಟ್ಟಿಕೊಡಲು ನಗರಸಭೆ ಮುಂದಾಗಿತ್ತು. ಈ ಸಂಬಂಧ ಕಾಮಗಾರಿಯನ್ನೂ ನಡೆಸಲಾಗಿತ್ತು. ಆದರೆ, ಇದಕ್ಕೆ ಜಿಲ್ಲಾಧಿಕಾರಿ ತಡೆ ನೀಡಿದ್ದಾರೆ.

ಇದನ್ನೂ ಓದಿ | New Year 2023 | ಹೊಸ ವರ್ಷಕ್ಕೆ ರಾಜಧಾನಿಯಲ್ಲಿ ಖಾಕಿ ಹೈ ಅಲರ್ಟ್‌; ಏನೆಲ್ಲ ಇದೆ ರೂಲ್ಸ್‌?

ಕಾಮಗಾರಿಗೆ ಬ್ರೇಕ್ ಹಾಕಿದ ಜಿಲ್ಲಾಧಿಕಾರಿ
ಗದಗಿನ 29ನೇ ವಾರ್ಡ್‌ನ ರಾಜೀವ್ ಗಾಂಧಿ ನಗರದಲ್ಲಿ ಸರ್ವೇ ನಂಬರ್ 405, 411 ಹಾಗೂ 412ರಲ್ಲಿ ದೊಡ್ಡ ನಾಲಾವಿದೆ. ಸುಮಾರು ೩೦ ಅಡಿಗಿಂತಲೂ ಅಗಲವಿದ್ದ ನಾಲಾ ಇದೀಗ ೫ ಅಡಿಗೆ ಬಂದು ನಿಂತಿದೆ. ಈ ಜಾಗ ಕಬಳಿಕೆಯಾಗಿದೆ ಎಂಬ ಆರೋಪವಿದ್ದರೂ ನಗರಸಭೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪ ಕೇಳಿಬಂದಿದೆ. ಇಷ್ಟಿದ್ದರೂ ಇದೇ ನಾಲೆ ಜಾಗದಲ್ಲಿ ಸ್ಲಂ ನಿವಾಸಿಗಳಿಗೆ ಸರ್ಕಾರದ ಆಶ್ರಯ ಯೋಜನೆಯಡಿ ೪೫ ಮನೆಗಳು ನಿರ್ಮಾಣವಾಗುತ್ತಿವೆ.

ವಸತಿ ಯೋಜನೆಯಡಿ, ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಆರೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರತಿ ಫಲಾನುಭವಿಗಳಿಗೆ ನಿವೇಶನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಜನವಿರೋಧ ವ್ಯಕ್ತವಾಗಿತ್ತು. ಇದನ್ನು ವಿಸ್ತಾರ ನ್ಯೂಸ್ ವರದಿ‌ ಮಾಡಿದೆ. ಈಗ ಜಿಲ್ಲಾಧಿಕಾರಿಗಳು ನಾಲೆ ಮೇಲಿನ ಮನೆಗಳ ನಿರ್ಮಾಣಕ್ಕೆ ತಡೆ ನೀಡಿದ್ದಾರೆ.

ನಿಯಮದ ಪ್ರಕಾರ ನಾಲಾ ಅಕ್ಕಪಕ್ಕ ೩೦ ಮೀಟರ್ ಬಫರ್‌ ಝೋನ್ ಇರಬೇಕು. ಹೊಸದಾಗಿ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಪ್ರಕಾರ ೭೦ ಮೀಟರ್ ಜಾಗ ಇರಬೇಕೆಂಬ ನಿಯಮವಿದೆ. ಈ ನಿಯಮ ಪಾಲಿಸಬೇಕಾದ ನಗರಸಭೆ ಇಲ್ಲಿ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ.

ಇದನ್ನೂ ಓದಿ | Election Reform | ಕ್ಷೇತ್ರದಿಂದ ದೂರ ಇರುವವರಿಗೂ ಮತದಾನದ ಅವಕಾಶ: RVM ಮೂಲಕ ಐತಿಹಾಸಿಕ ಪ್ರಯೋಗಕ್ಕೆ ಮುಂದಾದ ಚುನಾವಣಾ ಆಯೋಗ

Exit mobile version