Site icon Vistara News

Vistara News Launch | ವಿಸ್ತಾರ ರಾಜ್ಯಾದ್ಯಂತ ವಿಸ್ತರಿಸಲಿ: ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ

Vistara News Launch ವಿಸ್ತಾರ ಕನ್ನಡ ಸಂಭ್ರಮ ತಿ.ನರಸೀಪುರ

ಮೈಸೂರು: ರಾಜ್ಯಾದ್ಯಂತ ವಿಸ್ತಾರ ಕನ್ನಡ ಸಂಭ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ವಿಸ್ತಾರ ನ್ಯೂಸ್ ಚಾನೆಲ್ (Vistara News Launch) ವತಿಯಿಂದ ತಿ.ನರಸೀಪುರ ಪಟ್ಟಣದಲ್ಲಿ ವಿಸ್ತಾರ ಕನ್ನಡ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಾಟಾಳು ಶ್ರೀ ಸೂರ್ಯಸಿಂಹಾಸನ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಸ್ತಾರ ನ್ಯೂಸ್ ರಾಜ್ಯಾದ್ಯಂತ ವಿಸ್ತರಿಸಲಿ, ಶೀಘ್ರ ಅವಧಿಯಲ್ಲೇ ಯಶಸ್ವಿ ಸುದ್ದಿ ವಾಹಿನಿಯಾಗಿ ರೂಪುಗೊಳ್ಳಲಿ ಎಂದು ಆಶಿಸಿದರು.

ಶಾಸಕ ಎಂ.ಅಶ್ವಿನ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರೆ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು. ಪುರಸಭೆ ಅಧ್ಯಕ್ಷ ಮದನ್ ರಾಜ್, ಜಿಲ್ಲಾ ವಾಲ್ಮೀಕಿ ಒಕ್ಕೂಟದ ಅಧ್ಯಕ್ಷ ತಾಯೂರು ಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ | Vistara News Launch | ಮೊಳಕಾಲ್ಮೂರಿನಲ್ಲಿ ಸಡಗರದ ವಿಸ್ತಾರ ಕನ್ನಡ ಸಂಭ್ರಮ

Exit mobile version