Site icon Vistara News

Vistara News Launch | ಖ್ಯಾತ ವರ್ಣಚಿತ್ರ ಕಲಾವಿದ ಡಾ.ಬಿ.ಕೆ.ಎಸ್. ವರ್ಮರಿಗೆ ಕಾಯಕ ಯೋಗಿ ಪುರಸ್ಕಾರ

ಡಾ.ಬಿ.ಕೆ.ಎಸ್. ವರ್ಮಗೆ

ಜನಮಾನಸದಲ್ಲಿ ʻಅಭಿನವ ರವಿವರ್ಮʼ ಎಂದೇ ಖ್ಯಾತರಾದ ಬಿ.ಕೆ.ಎಸ್. ವರ್ಮ ಈ ನಾಡು ಕಂಡ ಅಪ್ಪಟ ಅಭಿಜಾತ ಕಲಾವಿದರು. ಇವರ ಮೂಲ ಹೆಸರು ಶ್ರೀನಿವಾಸ ಆಚಾರ್ಯ. ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಕಂಡ ರವಿಮರ್ವನ ಚಿತ್ರಕಲೆಯೇ ಸ್ಫೂರ್ತಿಯಾಗಿ, ತಾವೂ ರವಿವರ್ಮನಂತೆಯೇ ಪರಿಪೂರ್ಣ ಕಲಾವಿದರಾಗಬೇಕೆಂಬ ಆಸೆಯಿಂದ ತಮ್ಮ ಹೆಸರನ್ನು ಬಿ.ಕೆ. ಶ್ರೀನಿವಾಸ ವರ್ಮ ಎಂದು ಬದಲಿಸಿಕೊಂಡು ಮುಂದೆ ʻಬಿ.ಕೆ.ಎಸ್. ವರ್ಮʼ ಎಂದೇ ಪ್ರಸಿದ್ಧರಾದರು.

ಆರನೇ ವಯಸ್ಸಿನಿಂದ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರ ಚಿತ್ರಕಲೆಯು ಇಂದು ದೇಶ-ವಿದೇಶಗಳಲ್ಲಿ ಪ್ರದರ್ಶನಗೊಂಡಿದೆ. ಚಿತ್ರಕಲಾ ರಸಿಕರ ಮನ ತಣಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಇಂದು ಎಲ್ಲೆಡೆ ಬಳಸುವ ಭುವನೇಶ್ವರಿ ತಾಯಿಯ ಚಿತ್ರವನ್ನು ರಚಿಸಿ ಕನ್ನಡಿಗರಿಗೆ ತಾಯಿ ಭುವನೇಶ್ವರಿಯ ವ್ಯಕ್ತ ರೂಪವನ್ನು ತೋರಿದ್ದಾರೆ. ಹಲವಾರು ಚಲನಚಿತ್ರಗಳಿಗೆ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಇವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಇವರಿಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ನಮ್ಮ ನಡುವಿನ ಹೆಮ್ಮೆಯ ಕಲಾವಿದರಾದ ಡಾ. ಬಿ.ಕೆ.ಎಸ್. ವರ್ಮ ಅವರಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್‌ ಹೆಮ್ಮೆಪಡುತ್ತಿದೆ.

ಇದನ್ನೂ ಓದಿ | Vistara News Launch | ಶಿಕ್ಷಣ ಪ್ರೇಮಿ ಮಹಾತಾಯಿ ಹುಚ್ಚಮ್ಮ ಚೌದ್ರಿ ಮಡಿಲಿಗೆ ಕಾಯಕ ಯೋಗಿ ಪ್ರಶಸ್ತಿ

Exit mobile version