ಅವೇಜ್ ಅಹಮದ್ ಅವರ ಕಿರು ಪರಿಚಯ ಇಲ್ಲಿದೆ;
ಕೃಷಿಕರಿಗೆ ಹಲವು ರೀತಿಯಲ್ಲಿ ಉಪಯೋಗವಾಗುವ ನಿಟ್ಟಿನಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ನೀಡುವ ಉಪಗ್ರಹ ʻಶಕುಂತಲಾʼವನ್ನು ಅಭಿವೃದ್ಧಿಪಡಿಸಿ ಅಮೆರಿಕದ ʻಕೆನಡಿ ಸ್ಪೇಸ್ ಎಕ್ಸ್ʼ ಮೂಲಕ ಉಡಾವಣೆ ಮಾಡಿ, ಜಗತ್ತಿನ ಗಮನ ಸೆಳೆದವರು ಅವೇಜ್ ಅಹಮದ್.
ಹೆಸರಾಂತ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದಿರುವ ಅವೇಜ್ ಅಹಮದ್ ಮೊದಲಿಗೆ ಇಸ್ರೋದಲ್ಲಿ ಕೆಲಕಾಲ ಕೆಲಸ ಮಾಡಿದರು. ನಂತರ ಭಾರತದಲ್ಲಿಯೂ ಸ್ಪೇಸ್ ಎಕ್ಸ್‌ನಂತಹ ಸಂಸ್ಥೆ ಕಟ್ಟಬೇಕೆಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ತಮ್ಮದೇ ಆದ ಸ್ವಂತ ಪಿಕ್ಸೆಲ್ ಸಂಸ್ಥೆಯನ್ನು ಸ್ಥಾಪಿಸಿ ಉಪಗ್ರಹ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದಾರೆ.
ಚಿಕ್ಕಮಗಳೂರು ಮೂಲದ ಅವೇಜ್ ಅಹಮದ್, ಪ್ರಧಾನಿ ಮೋದಿಯವರ ಸಲಹೆ ಮೇರೆಗೆ ತಮ್ಮದೊಂದು ಉಪಗ್ರಹವನ್ನು ಭಾರತದಿಂದಲೇ ಉಡಾವಣೆ ಮಾಡಬೇಕೆಂಬ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ. ಉಪಗ್ರಹದಿಂದ ಕೃಷಿ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ಎಲ್ಲರಿಗೂ ಲಭ್ಯವಾಗುವಂತೆ ಮಾಡಬೇಕೆಂಬುದು ಅವೇಜ್ ಅಹಮದ್ ಕನಸು. ಕನಸುಗಾರ ಈ ಯುವ ವಿಜ್ಞಾನಿಗೆ ʻಕಾಯಕ ಯೋಗಿʼ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | Vistara news launch | ಗಿರೀಶ್ ಕಾಸರವಳ್ಳಿಗೆ ಕಾಯಕಯೋಗಿ ಪುರಸ್ಕಾರದ ಗೌರವ