ಕಾರವಾರ: ಹಿರಿಯ ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಅವರ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿರುವ (Vistara News Launch) ವಿಸ್ತಾರ ನ್ಯೂಸ್ ಚಾನೆಲ್‌ನ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮವು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಅದ್ಧೂರಿಯಾಗಿ ನಡೆದಿದ್ದು, ಶಾಸಕ ದಿನಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ವಿಸ್ತಾರ ನ್ಯೂಸ್ ತಂಡಕ್ಕೆ ಶುಭ ಕೋರಿದರು.
ಕುಮಟಾ ಪಟ್ಟಣದ ರೋಟರಿ ಕ್ಲಬ್‌ನ ನಾದಶ್ರೀ ಕಲಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ದಿನಕರ ಶೆಟ್ಟಿ, “ಮಾಧ್ಯಮ ಕ್ಷೇತ್ರದಲ್ಲಿ ವಸ್ತುನಿಷ್ಠ ವರದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸುದ್ದಿಯ ಜತೆಗೆ ಜನರ ಗಮನ ಸೆಳೆಯುವ ಹೊಸ ವಿಷಯಗಳ ಬಗ್ಗೆಯೂ ಮಾಹಿತಿ ನೀಡುವ ಕಾರ್ಯವಾಗಬೇಕು. ವಿಸ್ತಾರ ಚಾನೆಲ್ ಇನ್ನೂ ವಿಸ್ತಾರವಾಗಿ ಬೆಳೆಯಲಿ” ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ, ಕೆನರಾ ಎಕ್ಸ್ಲೆನ್ಸ್ ಪಿಯು ಕಾಲೇಜ್ ಸಂಸ್ಥಾಪಕರಾದ ಡಾ. ಜಿ.ಜಿ. ಹೆಗಡೆ ಮತ್ತು ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಹಾಗೂ ಅತಿಥಿಗಳಾದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಭಾರಿ ಪ್ರೊ. ಎಂ.ಜಿ. ಭಟ್, ಕುಮಟಾ ರೋಟರಿ ಕ್ಲಬ್ ಅಧ್ಯಕ್ಷ ಚೇತನ ಶೇಟ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಕುಮಟಾ ಅಧ್ಯಕ್ಷ ಅನ್ಸಾರ್ ಶೇಖ್ ಮತ್ತು ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ಸಹಾಯಕ ಆಯುಕ್ತ ಬಾಬು ನಾಯ್ಕ ಅವರು ಈ ವೇಳೆ ವಿಸ್ತಾರ ನ್ಯೂಸ್ ಬಳಗಕ್ಕೆ ಶುಭ ಹಾರೈಸಿದರು.
ಇದನ್ನೂ ಓದಿ | Vistara News Launch | ಕೆ.ಆರ್. ನಗರದಲ್ಲಿ ವಿಸ್ತಾರ ಕನ್ನಡ ಸಂಭ್ರಮ; ಗಣ್ಯರಿಂದ ವಿಸ್ತಾರ ಚಾನೆಲ್‌ಗೆ ಶುಭ ಹಾರೈಕೆ
ಮಾಧ್ಯಮ ಕ್ಷೇತ್ರ ಇಂದು ವಾಣಿಜ್ಯಾತ್ಮಕವಾಗಿ ಬೆಳೆಯುತ್ತಿದೆ. ಈ ನಡುವೆ ಸಾಮಾಜಿಕ ಕಳಕಳಿ, ವಸ್ತುನಿಷ್ಠ ವರದಿಗಳ ಬಗ್ಗೆಯೂ ಹೆಚ್ಚಿನ ಗಮನ ಹರಿಸುವ ಕಾರ್ಯವಾಗಬೇಕು. ಜನರಿಗೆ ಹೊಸ ಕಲ್ಪನೆ ಮೂಡಿಸುವ ಸುದ್ದಿ ವಾಹಿನಿಯಾಗಿ ವಿಸ್ತಾರ ನ್ಯೂಸ್ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗಲಿ. ವಿಸ್ತಾರ ನ್ಯೂಸ್ ಚಾನೆಲ್ ಸ್ಥಾಪಕರು ನಮ್ಮ ಉತ್ತರ ಕನ್ನಡ ಜಿಲ್ಲೆಯವರೆಂಬ ಹೆಮ್ಮೆ ನಮಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ಹರಿಪ್ರಕಾಶ ಕೋಣೆಮನೆ ನೇತೃತ್ವದಲ್ಲಿ ಈ ವಾಹಿನಿ ಅಭಿವೃದ್ಧಿ ಹೊಂದಲಿ ಎಂದು ಅತಿಥಿಗಳು ಶುಭ ಹಾರೈಸಿದರು.
ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಸ್ತಾರ ಚಾನೆಲ್ ರಾಜ್ಯದಲ್ಲಿ ಹೆಸರು ಮಾಡಲಿ. ಈ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ವಾಹಿನಿ ಧ್ವನಿಯಾಗಲಿ. ನಮ್ಮ ಜಿಲ್ಲೆಯ ಕಲೆ, ಸಂಸ್ಕೃತಿಯ ಜತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ವಾಹಿನಿಯಿಂದಾಗುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡ ವಿನೋದ ಪ್ರಭು, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ತಾಲೂಕು ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್, ಪತ್ರಕರ್ತರಾದ ಎಂ.ಜಿ. ನಾಯ್ಕ, ಪ್ರವೀಣ ಹೆಗಡೆ, ಮಂಜುನಾಥ ಈರಗೊಪ್ಪ, ಯೋಗೇಶ ಮಡಿವಾಳ, ಅಮರನಾಥ ಭಟ್, ಕನ್ನಡ ಸಾಹಿತ್ಯ ಪರಿಷತ್ ಕುಮಟಾ ತಾಲೂಕು ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಮಹಾಸತಿ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ನವೀನ ನಾಯ್ಕ, ಕಮಲಾ ಬಾಳಿಗಾ ಬಿಇಡಿ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ವಿಸ್ತಾರ ನ್ಯೂಸ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಗಾಯಕ ಪ್ರಶಾಂತ ಶಾನಭಾಗ ಪ್ರಾರ್ಥಿಸಿದರು. ವಿಸ್ತಾರ ನ್ಯೂಸ್ ಚಾನೆಲ್ ಕುಮಟಾ ವರದಿಗಾರ ಚರಣ ನಾಯ್ಕ ಸ್ವಾಗತಿಸಿ, ವಂದಿಸಿದರು. ಜಿಲ್ಲಾ ವರದಿಗಾರ ಸಂದೀಪ, ಯೋಗೇಶ ಕೋಡ್ಕಣಿ ಇದ್ದರು.
ಇದನ್ನೂ ಓದಿ | Vistara News Launch | ಚಿಕ್ಕಬಳ್ಳಾಪುರದಲ್ಲಿ ವಿಸ್ತಾರ ಕನ್ನಡ ಸಂಭ್ರಮ