ಬೆಂಗಳೂರು: ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಅಲೆಗಳನ್ನು ಸೃಷ್ಟಿಸುತ್ತಿರುವ ʻವಿಸ್ತಾರ ನ್ಯೂಸ್ʼ ಯುಗಾದಿ- ೨೦೨೩ ಕಥಾ ಸ್ಪರ್ಧೆಯನ್ನು (Vistara Kathaspardhe) ಆಯೋಜನೆ ಮಾಡಿದ್ದು, ಕನ್ನಡ ಕಥಾ ಸ್ಪರ್ಧೆಯಲ್ಲೇ ದಾಖಲೆ ಮೊತ್ತದ ಬಹುಮಾನವನ್ನು ಘೋಷಿಸಿದೆ. ಕಥಾ ಸ್ಪರ್ಧೆಯ ವಿಜೇತರಿಗೆ ಸಿಗಲಿದೆ, ೧ ಲಕ್ಷ ರೂಪಾಯಿ!
ವಿಸ್ತಾರ ನ್ಯೂಸ್ ಈಗಾಗಲೇ ಕನ್ನಡ ಟಿವಿ ಮಾಧ್ಯಮ ಲೋಕದಲ್ಲಿ ಇದೇ ಮೊದಲ ಬಾರಿಗೆ ʻಬುಕ್ ಟಾಕ್ʼ ಎಂಬ ಸಾಹಿತ್ಯ ಪ್ರೀತಿಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಗಮನ ಸೆಳೆದಿದೆ. ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸುವ ನಡೆಯನ್ನು ವಿಸ್ತರಿಸುವ ಮತ್ತೊಂದು ಹೆಜ್ಜೆಯಾಗಿ ಈಗ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕನ್ನಡ ಕಥಾ ಲೋಕದಲ್ಲಿ ಹೊಸ ಹೊಸ ಯೋಚನಾ ಲಹರಿಗಳನ್ನು ಹುಟ್ಟುಹಾಕುವುದು, ಸಣ್ಣ ಕಥೆಗಳನ್ನು ಜನಪ್ರಿಯಗೊಳಿಸುವುದು ಮತ್ತು ಹೊಸ ಹೊಸ ಕಥಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಈ ಸ್ಪರ್ಧೆ ಹೊಂದಿದೆ.
ಒಟ್ಟು ಬಹುಮಾನ ಮೊತ್ತ 1 ಲಕ್ಷ ರೂ.!
ವಿಸ್ತಾರ ನ್ಯೂಸ್ ಮೊದಲ ಬಾರಿ ಆಯೋಜಿಸುತ್ತಿರುವ ಸ್ಪರ್ಧೆ ಇದಾದರೂ ದಾಖಲೆ ಮೊತ್ತದ ಬಹುಮಾನವನ್ನು ನೀಡಲಾಗುತ್ತಿದೆ. ಪ್ರಥಮ, ದ್ವಿತೀಯ, ತೃತೀಯ ಮತ್ತು ಮೆಚ್ಚುಗೆ ಪಡೆದ ಕಥೆಗಳಿಗೆ ಒಟ್ಟು ಒಂದು ಲಕ್ಷ ರೂ. ಬಹುಮಾನವಿರುತ್ತದೆ. ಇದು ಕನ್ನಡ ಕಥಾ ಸ್ಪರ್ಧೆಗಳಲ್ಲೇ ದಾಖಲೆ ಮೊತ್ತದ ಬಹುಮಾನವಾಗಿದೆ.
ಮೊದಲ ಬಹುಮಾನ: 55,000 ರೂ.
ಎರಡನೇ ಬಹುಮಾನ: 25,000 ರೂ.
ಮೂರನೇ ಬಹುಮಾನ: 10,000 ರೂ.
ಮೆಚ್ಚುಗೆ ಬಹುಮಾನ: ತಲಾ 2,000 ರೂ. (5 ಬಹುಮಾನ)
ಕಥೆ ಕಳುಹಿಸುವವರು ಈ ಸೂಚನೆಗಳನ್ನು ಗಮನಿಸಿ
-ಸಣ್ಣಕಥೆ ನಿಮ್ಮ ಸ್ವತಂತ್ರ ರಚನೆ ಆಗಿರಬೇಕು. ಈ ಮೊದಲು ಯಾವುದೇ ಪತ್ರಿಕೆ, ಬ್ಲಾಗ್, ಫೇಸ್‌ಬುಕ್ ಸೇರಿದಂತೆ ಯಾವುದೇ ಜಾಲತಾಣದಲ್ಲಿ ಪ್ರಕಟ ಅಥವಾ ಪ್ರಸಾರವಾಗಿರಬಾರದು. ದೃಶ್ಯರೂಪದಲ್ಲೂ ಬಂದಿರುವಂತಿಲ್ಲ. ಅನುವಾದ ಅಥವಾ ಪ್ರೇರಣೆಗಳಿಗೆ ಅವಕಾಶವಿಲ್ಲ.
-ಕಥೆಗೆ ಗರಿಷ್ಠ ಮಿತಿ 2500 ಪದಗಳು.
-ಕಥೆಯನ್ನು ನುಡಿ ಅಥವಾ ಯುನಿಕೋಡ್‌ನಲ್ಲಿ ಟೈಪಿಸಿ ಕಳಿಸಬೇಕು. ಸ್ವಪರಿಚಯವನ್ನು ಕತೆಗಿಂತ ಪ್ರತ್ಯೇಕವಾದ ಪುಟದಲ್ಲಿ ಲಗತ್ತಿಸಿ ಕಳಿಸಬೇಕು. ಸಂಪರ್ಕ ಸಂಖ್ಯೆ, ಇಮೇಲ್ ನಮೂದಿಸಿ. ಇತ್ತೀಚಿನ ವರ್ಣ ಭಾವಚಿತ್ರ, ಕಿರುಪರಿಚಯ ಕಳುಹಿಸಿ.
-ಅಂಚೆ ಮೂಲಕ ಕಳಿಸುವವರಿಗೂ ಮೇಲಿನ ನಿಯಮಗಳು ಅನ್ವಯವಾಗುತ್ತವೆ. ʼವಿಸ್ತಾರ ಯುಗಾದಿ ಕಥಾಸ್ಪರ್ಧೆʼ ಎಂದು ಮೇಲೆ ನಮೂದಿಸಬೇಕು.
-ಸ್ಪರ್ಧೆಗೆ ಕಳಿಸಿದ ಕಥೆಗಳನ್ನು ಹಿಂದಿರುಗಿಸುವುದಿಲ್ಲ. ಈ ಬಗ್ಗೆ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ. ಸಂಪಾದಕರ ತೀರ್ಮಾನವೇ ಅಂತಿಮ.
-ಸಣ್ಣಕಥೆಗಳನ್ನು ಕಳುಹಿಸಲು ಅಂತಿಮ ದಿನ:
ಮಾರ್ಚ್ 5, 2023
ಕಳುಹಿಸಬೇಕಾದ ಮಿಂಚಂಚೆ ವಿಳಾಸ: vistarakathaspardhe@gmail.com
ಅಂಚೆ ವಿಳಾಸ:
ಸಂಪಾದಕರು, ವಿಸ್ತಾರ ನ್ಯೂಸ್- ಯುಗಾದಿ ಕಥಾಸ್ಪರ್ಧೆ
ವಿಸ್ತಾರ ಮೀಡಿಯಾ ಪ್ರೈ.ಲಿ.
4ನೇ ಮಹಡಿ, ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡ
ಕ್ವೀನ್ಸ್ ರಸ್ತೆ, ಬೆಂಗಳೂರು- 560001
ಪ್ರಾಯೋಜಕರು ಇವರು
ವಿಸ್ತಾರ ನ್ಯೂಸ್ -ಯುಗಾದಿ ಕಥಾಸ್ಪರ್ಧೆಯನ್ನು ಕನ್ನಡದ ಬಗ್ಗೆ ಕಾಳಜಿಯನ್ನು ಹೊಂದಿರುವ, ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಕಳಕಳಿ ಹೊಂದಿರುವ ಮೂರು ಸಂಸ್ಥೆಗಳು ಪ್ರಾಯೋಜಿಸಲು ಮುಂದೆ ಬಂದಿವೆ.
ಪ್ರಧಾನ ಪ್ರಾಯೋಜಕರು: ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನ
ಸಹ ಪ್ರಾಯೋಜಕರು: ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್
ಬೆಂಗಳೂರು
ಮತ್ತು
ವಿ2 ಹೋಲ್ಡಿಂಗ್ ಹೌಸಿಂಗ್ ಡೆವಲಪ್ ಮೆಂಟ್ ಪ್ರೈ. ಲಿ
ಬೆಂಗಳೂರು
ಇದನ್ನೂ ಓದಿ : ವಿಸ್ತಾರ ಅಂಕಣ: ಭಾರತದಲ್ಲೇಕೆ ಮಿಲಿಟರಿ ಆಡಳಿತ ಸಾಧ್ಯವಿಲ್ಲ ಎಂದರೆ