Site icon Vistara News

VISTARA TOP 10 NEWS: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ, ಕಿಚ್ಚ-ದರ್ಶನ್‌ ಒಂದಾಗೋದು ಸತ್ಯ? ಹೀಗೆ ಪ್ರಮುಖ ಸುದ್ದಿ

vistara top ten news

1.ಇಸ್ರೋ ಸೂರ್ಯ ಶಿಕಾರಿಯ ಮೊದಲ ಹೆಜ್ಜೆ ಸಕ್ಸಸ್‌- ಯಶಸ್ವಿಯಾಗಿ ಕಕ್ಷೆ ಸೇರಿದ ಆದಿತ್ಯ ಎಲ್‌-1
ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಮಿಷನ್‌ (Chandrayaan 3) ನೌಕೆಯನ್ನು ಸಾಫ್ಟ್‌ ಲ್ಯಾಂಡ್‌ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಇಸ್ರೋ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನಕ್ಕಾಗಿ ಕೈಗೊಂಡ ಆದಿತ್ಯ ಎಲ್‌ 1 ಮಿಷನ್‌ (Aditya L1 Launch) ಉಡಾವಣೆ ಯಶಸ್ವಿಯಾಗಿದೆ. ಭಾರತದ ಮೊದಲ ಸೂರ್ಯಯಾನ ಇದಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : ವಿಸ್ತಾರ Explainer: ಆದಿತ್ಯ L1 ಅಲ್ಲಿಗೆ ತಲುಪೋದು ಯಾವಾಗ? ಮಿಷನ್ ಬಗ್ಗೆ ನಿಮಗೀ 12 ಸಂಗತಿಗಳು ತಿಳಿದಿರಲಿ!
ಪೂರಕ ವರದಿ : : ಇಸ್ರೊ ಅಧ್ಯಕ್ಷ ಎಸ್​. ಸೋಮನಾಥ್​ಗೆ ಮುದ್ದಾದ ಗಿಫ್ಟ್​ ಕೊಟ್ಟ ಪಕ್ಕದ ಮನೆಯ ಮಗು!

2. ಸೆಪ್ಟೆಂಬರ್‌ 4ರಂದು ಬರಪೀಡಿತ ತಾಲೂಕುಗಳ ಪಟ್ಟಿ ಘೋಷಣೆ ಎಂದ ಸಿದ್ದರಾಮಯ್ಯ
ಈ ವರ್ಷ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಮಳೆ ಕಡಿಮೆಯಾಗಿದೆ. ಶೇ. 56 ಕೊರತೆಯಾಗಿದೆ. ಆಗಸ್ಟ್‌ನಲ್ಲಿಯೂ ಕೊರತೆ ಕಂಡು ಬಂದಿದೆ. 113 ತಾಲೂಕುಗಳಲ್ಲಿ ಬರಗಾಲ ಇದೆ ಎಂದು ಜಂಟಿ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇದಲ್ಲದೆ 73 ತಾಲೂಕುಗಳಲ್ಲಿ ಬರಗಾಲ ಉಂಟಾಗಿದೆ ಎಂದು ಮಾಹಿತಿ ಇದೆ. ಹೀಗಾಗಿ ಬರಗಾಲ ಘೋಷಣೆ ಬಗ್ಗೆ ಸೆ.4 ರಂದು ಸಭೆ ನಡೆಸಿ ತೀರ್ಮಾನ ಮಾಡ್ತೇವೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಕಾಂಗ್ರೆಸ್‌‌‌ನಲ್ಲಿ ಮತ್ತೆ ಪ್ರತಿಧ್ವನಿಸಿದ ನಾಯಕತ್ವ ಬದಲಾವಣೆ ಕೂಗು
ಕಾಂಗ್ರೆಸ್‌ನಲ್ಲಿ ಮತ್ತೆ ಬಂಡಾಯದ ಕೂಗು ಎದ್ದಿದೆ. ಒಂದು ಕಡೆ ಬಿ.ಕೆ. ಹರಿಪ್ರಸಾದ್‌ ಅವರು ಸಿದ್ದರಾಮಯ್ಯ ಅವರಿಗೆ ನೇರ ಸವಾಲು ಹಾಕುವಂತೆ ಮಾತನಾಡಿದರೆ, ಇನ್ನೊಂದು ಕಡೆ ಬಸವರಾಜ ರಾಯರೆಡ್ಡಿ ಮತ್ತೆ ಧ್ವನಿ ಎತ್ತಿದ್ದಾರೆ.
ವರದಿ 1: ಸಣ್ಣ ಸಮುದಾಯದವರ ಅವಕಾಶಕ್ಕಾಗಿ ಬೀದಿಗಿಳಿಯುವೆ: ಸಿಎಂ ವಿರುದ್ಧ ಹರಿಪ್ರಸಾದ್‌ ಮತ್ತೆ ಗುಡುಗು
ವರದಿ 2: ಮತ್ತೆ ಸಿಡಿದೆದ್ದ ರಾಯರೆಡ್ಡಿ; ಸಚಿವರು ಮಾತ್ರವಲ್ಲ ಈಗ ಅಧಿಕಾರಿಗಳೂ ಮಾತು ಕೇಳ್ತಿಲ್ಲ!

4. ಒಂದು ದೇಶ, ಒಂದು ಚುನಾವಣೆ; ಅಮಿತ್ ಶಾ ಇರುವ ಸಮಿತಿಯಲ್ಲಿ ಇನ್ಯಾರ್ಯಾರು ಇದ್ದಾರೆ?
ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ (One Nation One Election) ಪ್ರಸ್ತಾಪವನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಕಾನೂನು ಸಚಿವಾಲಯ ಶನಿವಾರ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Sha) ಅವರಿರುವ ಈ ಸಮಿತಿಯಲ್ಲಿ ಯಾರಿದ್ದಾರೆ ಎಂಬ ಪಟ್ಟಿ ಇಲ್ಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. Teachers Day 2023: 31 ಮಂದಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾರಿಗೆಲ್ಲಾ ಗೌರವ?
2023-24ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದ್ದು, ವಿವಿಧ ಜಿಲ್ಲೆಗಳ ಒಟ್ಟು 31 ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು (ಒಬ್ಬರು ವಿಶೇಷ ಶಿಕ್ಷಕರೂ ಒಳಗೊಂಡಂತೆ) ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರಿಗೆ ಸೆ.5 ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವರ್ಗಾವಣೆ ದಂಧೆಗೆ ಕೊನೆಗೂ ಬ್ರೇಕ್‌?: ಇನ್ಮುಂದೆ ಎಲ್ಲ ಟ್ರಾನ್ಸ್‌ಫರ್‌ಗೂ ಸಿಎಂ ಅನುಮತಿ ಕಡ್ಡಾಯ
ರಾಜ್ಯ ರಾಜಕೀಯದಲ್ಲಿ ವರ್ಗಾವಣೆ ವಿಚಾರವು ಸಾಕಷ್ಟು ಗದ್ದಲ, ಬಿರುಗಾಳಿ ಎಬ್ಬಿಸಿತ್ತು. ಈ ಸಂಬಂಧ ಎಚ್ಚೆತ್ತಿರುವ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. “ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆಗೆ ಆಗಬೇಕು ಎಂದಾದರೆ ಅದಕ್ಕೆ ಸಿಎಂ ಅನುಮತಿ ಕಡ್ಡಾಯʼ ಎಂದು ಉಲ್ಲೇಖಿಸಲಾಗಿದೆ. ಪೂರ್ಣ ವರದಿಗೆ ಈ ಕ್ಲಿಕ್‌ ಮಾಡಿ

7. ಮಣಿಪುರ ಬಳಿಕ ರಾಜಸ್ಥಾನದಲ್ಲೂ ಮಹಿಳೆ ಬೆತ್ತಲೆ ಮೆರವಣಿಗೆ- ಆರೋಪಿ ಪತಿ ಸೇರಿ 8 ಆರೋಪಿಗಳ ಬಂಧನ
ಮಣಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಆದಿವಾಸಿ ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ ಅಮಾನವೀಯ ಘಟನೆಯ ಬೆನ್ನಲ್ಲೇ ರಾಜಸ್ಥಾನದಲ್ಲೂ ಆದಿವಾಸಿ ಮಹಿಳೆಯೊಬ್ಬರನ್ನು (Rajasthan Woman) ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿದ ಪ್ರಕರಣ ಸದ್ದು ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8 ವಿಸ್ತಾರ ಅಂಕಣ: ನೈತಿಕ ಪೊಲೀಸ್‌ಗಿರಿಯ ಕುರಿತು ಅನೈತಿಕ ದೃಷ್ಟಿಕೋನ ಯಾಕಪ್ಪ??!!ನೈತಿಕ ಪೊಲೀಸ್‌ಗಿರಿಯ (moral policing) ಹೆಸರಿನಲ್ಲಿ ಅನೈತಿಕತೆಯನ್ನು ತೋರುವುದನ್ನು ನಾವು ಖಂಡಿಸಲೇಬೇಕಿದೆ. ಆದರೆ ಇದುವರೆಗೆ ಆ ಬಗ್ಗೆ ನಡೆದಿರುವ ಚರ್ಚೆಗಳು ಏಕಪಕ್ಷೀಯವಾಗಿವೆ ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

9. Kichcha Sudeep birthday: ಪ್ರಶ್ನೆಗಳಿಗೆ ಉತ್ತರ ಸಿಕ್ಕರೆ ಒಂದಾಗ್ತೀವಿ! ದರ್ಶನ್‌ ಬಗ್ಗೆ ಮನಬಿಚ್ಚಿದ ಕಿಚ್ಚ!
ಅಭಿಮಾನಿಗಳ ನಡುವೆ ಅದ್ಧೂರಿಯ ಜನ್ಮದಿನ (Kichcha Sudeep birthday) ಆಚರಿಸಿಕೊಂಡ ಕಿಚ್ಚ ಸುದೀಪ್‌ ತಮ್ಮ ಸಹನಟ ದರ್ಶನ್‌ (Darshan) ಜತೆಗೆ ಮನಬಿಚ್ಚಿ ಮಾತನಾಡಿದ್ದಾರೆ. ದರ್ಶನ್ ಒಬ್ಬ ದೊಡ್ಡ ಕಲಾವಿದ. ದರ್ಶನ್ ಹಾಗೂ ಮಾಧ್ಯಮಗಳು ಒಂದಾಗಿದ್ದು ಒಳ್ಳೆಯ ವಿಷಯ. ನಂಗೆ ಅವರ ಮೇಲೆ ಕೋಪ ಇಲ್ಲ. ನಾವಿಬ್ಬರೂ ಒಂದಾಗುವುದಕ್ಕೆ ಸ್ವಲ್ಪ ಸಮಯ ಬೇಕು. ನಾವಿಬ್ಬರೂ ಪರಸ್ಪರ ಗೌರವ ಕೊಡ್ತೀವಿ ಎಂದು ಹೇಳಿದ್ದಾರೆ ಸುದೀಪ್.‌
ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : Kichcha Sudeep : ಡೈರೆಕ್ಟರ್​ ಹ್ಯಾಟ್​ ಧರಿಸಿದ ಕಿಚ್ಚ ಸುದೀಪ್​, ಯಾವುದಿದು ಸಿನಿಮಾ?

10. Jailer OTT Release: ಒಟಿಟಿಗೆ ಲಗ್ಗೆ ಇಡಲಿದೆ ತಲೈವಾ ಅಭಿನಯದ ಜೈಲರ್;‌ ಈ ದಿನಾಂಕ ಮರೆಯದಿರಿ
ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾವು ಭಾರತ ಸೇರಿ ಜಗತ್ತಿನಾದ್ಯಂತ ಹಿಟ್‌ ಆಗಿದೆ. ಗಳಿಕೆಯಲ್ಲೂ ಜೈಲರ್‌ ಸಿನಿಮಾ ಹಲವು ದಾಖಲೆ ಮಾಡಿದೆ. ಇದರ ಬೆನ್ನಲ್ಲೇ, ಜೈಲರ್‌ ಸಿನಿಮಾ ಸೆಪ್ಟೆಂಬರ್‌ 7ರಂದು ಒಟಿಟಿಯಲ್ಲಿ (Jailer OTT Release) ರಿಲೀಸ್‌ ಆಗುವುದು ಪಕ್ಕಾ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version