Site icon Vistara News

VISTARA TOP 10 NEWS : ಕಾಂಗ್ರೆಸ್‌ ಮೇಲೆ ಬಿಜೆಪಿ ಪೋಸ್ಟರ್‌ ದಾಳಿ, ಗಾಜಾ ಮೇಲೆ ಅಂತಿಮ ದಾಳಿಗೆ ಇಸ್ರೇಲ್‌ ರೆಡಿ

Vistara Top 10 News 16 10

1. ಐಟಿ ದಾಳಿ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ದಳ, ಕಮಲ ಕಹಳೆ; ಪೋಸ್ಟರ್‌ ವಾರ್‌
ಐಟಿ ದಾಳಿಯಲ್ಲಿ ಸಿಕ್ಕಿದ ಹಣ ಯಾರದು, ಎಲ್ಲಿಗೆ ಹೋಗಬೇಕಿತ್ತು ಎಂಬುದನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಕಾಂಗ್ರೆಸ್‌ ಮೇಲೆ ಮುಗಿಬಿದ್ದಿವೆ. ಇದು ಪಂಚರಾಜ್ಯ ಚುನಾವಣೆಗೆ ಸಂಗ್ರಹಿಸಿದ ಹಣ ಎಂದು ಹೇಳಿರುವ ಬಿಜೆಪಿ ಬಗೆಬಗೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಮೇಲೆ ದಾಳಿ ಮಾಡಿದೆ. ಎಚ್‌ ಡಿ ಕುಮಾರಸ್ವಾಮಿ ಅವರು YST, SST ಹೆಸರಿನಲ್ಲಿ ಸಿಎಂ ಪಟಾಲಂ ಲೂಟಿ ಮಾಡುತ್ತಿದೆ ಎಂದಿದ್ದಾರೆ.

ವರದಿ 1.: ಕಾಂಗ್ರೆಸ್‌ ವಿರುದ್ಧ ಮುಗಿಬಿದ್ದ ಬಿಜೆಪಿ; ರಾಹುಲ್‌, ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಪೋಸ್ಟರ್‌ ಸಮರ
ವರದಿ 2: ಐಟಿ ದಾಳಿಯಲ್ಲಿ ಸಿಕ್ಕಿದ್ದು SST, YST TAX ಹಣ ಎಂದ HDK, ಅವರು ಹೇಳಿದ ವಾಸ್ತುಶಿಲ್ಪಿ ಯಾರು?
ವರದಿ 3: BY Vijayendra : ರಾಜ್ಯದಲ್ಲಿ SBI ಸ್ಥಾಪಿಸಿದ ಕಾಂಗ್ರೆಸ್‌; ಶಿವಕುಮಾರ್‌ ಬ್ಯಾಂಕ್‌ ಆಫ್‌ ಇಂಡಿಯಾ!

2. ಕಮಿಷನ್‌ ಅಸ್ತ್ರಕ್ಕೆ ಡಿ.ಕೆ.ಶಿ ಪ್ರತಿದಾಳಿ: ನಕಲಿ ಸ್ವಾಮಿ, ಲೂಟಿ ರವಿಗೆ ಉತ್ತರ ಕೊಡ್ತೀನಿ ಎಂದ ಡಿಸಿಎಂ
ʻʻನಾನು ಹೇಡಿ ಅಲ್ಲ, ಹೆದರಿ ಎಲ್ಲಿಯೂ ಓಡಿ ಹೋಗಲ್ಲ. ಮಾಜಿ ಸಿಎಂ, ನಕಲಿ ಸ್ವಾಮಿ ಬ್ಲಾಕ್ ಮೇಲ್, ಲೂಟಿ ರವಿ ಎಲ್ಲರಿಗೂ ತಕ್ಕ ಉತ್ತರ ಕೊಡುತ್ತೇನೆ. ಅವರದೆಲ್ಲ ಬಿಚ್ಚಿಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅಬ್ಬರಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ: ಸತೀಶ್‌ ಜಾರಕಿಹೊಳಿ ಟೀಮ್‌ನ ಮೈಸೂರು ಟ್ರಿಪ್‌ ಕ್ಯಾನ್ಸಲ್ ಮಾಡಿಸಿದ ಹೈಕಮಾಂಡ್

3. ವರಿಷ್ಠರ ವಿರುದ್ಧವೇ ತೊಡೆತಟ್ಟಿದ ಇಬ್ರಾಹಿಂ: ನಮ್ಮದೇ ಒರಿಜಿನಲ್‌ ಜೆಡಿಎಸ್ ಎಂದ ದಳಾಧ್ಯಕ್ಷ
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ (BJP-JDS Alliance) ಮಾಡಿಕೊಂಡ ಸ್ವಲ್ಪ ಸಮಯದ ನಂತರ ಸಿ.ಎಂ. ಇಬ್ರಾಹಿಂ (CM Ibrahim) ಸಿಡಿದು ನಿಂತಿದ್ದಾರೆ. ಮೈತ್ರಿಯನ್ನು ಒಪ್ಪುವುದಿಲ್ಲ ಎಂದಿರುವ ಅವರು ನಮ್ಮದೇ ಒರಿಜಿನಲ್‌ ಜೆಡಿಎಸ್‌ ಎಂದು ಘೋಷಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4.ಬೆಂಗಳೂರಿನ ಜನತೆಗೆ ಮತ್ತೆ ಜೋಡಿ ಆಘಾತ: ನೀರಿನ ದರದ ಜತೆಗೆ ವಿದ್ಯುತ್‌ ದರ ಏರಿಕೆ ಶಾಕ್‌
ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದು 4 ತಿಂಗಳು ಕಳೆಯುತ್ತಿರುವ ಬೆನ್ನಲ್ಲೇ ಬೆಲೆ ಏರಿಕೆಯ (Price Rise) ಭೂತ ಶುರುವಾಗಿದೆ. ಈಗ ಕುಡಿಯುವ ನೀರೂ ಸಹ ತುಟ್ಟಿ (Water will be Costly) ಆಗುವ ಸಾಧ್ಯತೆ ದಟ್ಟವಾಗಿದೆ. ಇದಲ್ಲದೆ ವಿದ್ಯುತ್ ದರ ಏರಿಕೆಯು (Electricity Tariff) ಸದ್ದಿಲ್ಲದೆ ಆಗುತ್ತಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. Israel Palestine War: ನಮ್ಮ ಕೈ ಟ್ರಿಗರ್ ಮೇಲಿದೆ! ಇಸ್ರೇಲ್‌ಗೆ ನೇರ ಎಚ್ಚರಿಕೆ ನೀಡಿದ ಇರಾನ್
ಇಸ್ರೇಲಿಗಳ ಆಕ್ರಮಣಗಳು ನಿಲ್ಲದಿದ್ದರೆ, ಈ ಪ್ರದೇಶದ ಎಲ್ಲಾ ರಾಷ್ಟ್ರಗಳ ಕೈ ಯುದ್ಧದ ಬಟನ್ ಒತ್ತಲು ರೆಡಿಯಾಗಿವೆ ಎಂದು ವಿದೇಶಾಂಗ ಸಚಿವ ಹೊಸೈನ್ ಹೇಳಿದ್ದಾರೆ. ಇತ್ತ ಇಸ್ರೇಲ್‌ ಗಾಜಾ ಪಟ್ಟಿ ಮೇಲೆ ಅಂತಿಮ ದಾಳಿಗೆ ಸಿದ್ಧತವಾಗಿದೆ. ಹೀಗಾಗಿ ಭೀಕರ ಕಾಳಗ ನಿರೀಕ್ಷಿತ, ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. Supreme Court: 26 ವಾರಗಳ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ನಕಾರ; ಮಗುವಿನ ಹೊಣೆ ಯಾರದ್ದು?
26 ವಾರ ತುಂಬಿದ ಗರ್ಭಿಣಿಗೆ ಗರ್ಭಪಾತಕ್ಕೆ ಅನುಮತಿ ನೀಡಲು ಸುಪ್ರೀಂ ಕೋರ್ಟ್‌ (Supreme Court) ನಿರಾಕರಿಸಿದೆ. ಮಹಿಳೆ ಗರ್ಭ ಧರಿಸಿ 24 ವಾರ ದಾಟಿರುವುದರಿಂದಾಗಿ ಗರ್ಭಪಾತಕ್ಕೆ ಅನುಮತಿಸಲು ಆಗುವುದಿಲ್ಲ ಎಂದಿದೆ. ಜತೆಗೆ ಮಗುವಿನ ಹೊಣೆ ಯಾರದು ಎಂದು ಕೇಳಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 11 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ 8ರಿಂದ 11ಗಂಟೆವರೆಗೂ ಪಟಾಕಿ ಸ್ಫೋಟಿಸಲು ಅವಕಾಶ ನೀಡಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಹಸಿರು ಪಟಾಕಿ ಹೊರತುಪಡಿಸಿ ಉಳಿದ ಯಾವುದೇ ರೀತಿಯ ಪಟಾಕಿ ಮಾರಾಟ ಹಾಗೂ ಬಳಕೆ ನಿಷೇಧ ವಿಧಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ತೆಲಂಗಾಣದಲ್ಲಿ ಮತ್ತೆರೆಡು ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್‌- ವಧುವಿಗೆ 1 ಲಕ್ಷ ನಗದು, 10 ಗ್ರಾಂ ಚಿನ್ನದ ಭಾಗ್ಯ
ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ಮಹಾಲಕ್ಷ್ಮೀ ಗ್ಯಾರಂಟಿ ಅಡಿಯಲ್ಲಿ ವಧುವಿಗೆ 10 ಗ್ರಾಂ ಚಿನ್ನ, 1 ಲಕ್ಷ ರೂ. ನಗದು ಸಿಗಲಿದೆ. ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಟರ್‌ನೆಟ್‌ ಸೇವೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ICC World Cup 2023 : ಹಮಾಸ್ ಉಗ್ರರಿಗೆ ಬೆಂಬಲ ನೀಡಿದ ರಿಜ್ವಾನ್​ ಬೆಂಡೆತ್ತಿದ ಪಾಕ್​ ಕ್ರಿಕೆಟಿಗ!
ಶ್ರೀಲಂಕಾ ವಿರುದ್ಧದ ಪಾಕಿಸ್ತಾನದ ಗೆಲುವನ್ನು ಗಾಜಾ ಪಟ್ಟಿಯ ಯುದ್ಧದಲ್ಲಿ ಪ್ರಾಣ ಕಳೆದುಕೊಂಡವರಿಗೆ ಅರ್ಪಿಸಿದ ಪಾಕಿಸ್ತಾನದ ಸ್ಟಾರ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಹೇಳಿಕೆಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಖಂಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ: Pakistan Cricket Team : ಮೈದಾನದಲ್ಲೇ ನಮಾಜ್ ಮಾಡಿದ ರಿಜ್ವಾನ್ ಮೇಲೆ ಬಿತ್ತು ಕೇಸು

10.BBK 10: ಈ ಸಲ ಕಪ್‌ ʻಡ್ರೋನ್‌ʼದೆ; ಪ್ರತಾಪ್‌ಗೆ ಕರುನಾಡು ಸಾಥ್‌; ಗೌರೀಶ್‌ ಅಕ್ಕಿ ಊಸರವಳ್ಳಿ ಅಂತೆ!
ಈಗಾಗಲೇ ಪ್ರೇಕ್ಷಕರು ʻʻಬಿಗ್‌ ಬಾಸ್‌ ಸೀಸನ್‌ 10ರ ವಿಜೇತ ಡ್ರೋನ್‌ ಎಂದು ಘೋಷಿಸಿದ್ದಾರೆ! ಹಲವು ಟ್ರೋಲ್‌ ಪೇಜ್‌ಗಳು, ಮೀಮ್ಸ್‌ಗಳು ಡ್ರೋನ್‌ ಪರ ನಿಂತಿವೆ. ಅದೇ ವೇಳೆ ಗೌರೀಶ್‌ ಅಕ್ಕಿಗೆ ಊಸರವಳ್ಳಿ ಪಟ್ಟ ಸಿಕ್ಕಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version