1. ರಾಜ್ಯದಲ್ಲಿ ಮತ್ತೆ ಶುರುವಾಯ್ತಾ ಆಪರೇಷನ್ ಆಟ?: ಜೂನ್‌ನಲ್ಲಿ ಉರುಳುತ್ತಾ ಕಾಂಗ್ರೆಸ್ ಸರ್ಕಾರ
ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ (Operation Kamala) ಸದ್ದು ಜೋರಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರ ಗ್ಯಾರಂಟಿಗಳ ಹಿಂದೆ ಬಿದ್ದು ಶಾಸಕರ ಅನುದಾನ ಮತ್ತು ಅಭಿವೃದ್ಧಿಯನ್ನು ಮರೆತಿರುವುದನ್ನು ಮುಂದಿಟ್ಟುಕೊಂಡು ಶಾಸಕರನ್ನು ಸೆಳೆಯುವ ದೊಡ್ಡ ಪ್ಲ್ಯಾನ್ ಒಂದು ನಡೆಯುತ್ತಿದೆ ಎನ್ನಲಾಗಿದೆ. ಈ ರೀತಿಯ ಆಟದ ಬಗ್ಗೆ ತಮಗೂ ಅರಿವಿದೆ ಎಂದು ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಕೂಡಾ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ- ಸಿಲಿಂಡರ್ ಸ್ಫೋಟಿಸಿ ಹೊತ್ತಿ ಉರಿದ ರೆಸ್ಟೋರೆಂಟ್ ಕಟ್ಟಡ
ಕೋರಮಂಗಲದ ನೆಕ್ಸಾ ಶೋ ರೂಂ ಕಟ್ಟಡದ ಮೇಲಿರುವ ಮಡ್ ಪೈಪ್ ಕೆಫೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸಿಬ್ಬಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಷೆಪ್ ಒಬ್ಬ ಕಟ್ಟಡದಿಂದ ಜಿಗಿದಿದ್ದು, ಅವನ ಸ್ಥಿತಿ ಗಂಭೀರವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ ನೀಡಿದ ಮೋದಿ ಸರ್ಕಾರ: ಶೇ.4ರಷ್ಟು ಡಿಎ ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರವು ದಸರಾ ಹಬ್ಬದ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರರಿಗೆ ಸರ್ಕಾರವು ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಿದ್ದು (DA Hike), ಇದರಿಂದಾಗಿ ಲಕ್ಷಾಂತರ ನೌಕರರಿಗೆ ಭಾರಿ ಅನುಕೂಲವಾಗಲಿದೆ. ತುಟ್ಟಿಭತ್ಯೆ ಹೆಚ್ಚಿಸಲು ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದು, ಕೆಲವೇ ಗಂಟೆಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. Israel Palestine War: ಗಾಜಾ ಆಸ್ಪತ್ರೆ ಮೇಲೆ ರಾಕೆಟ್ ದಾಳಿಗೆ 500 ಜನ ಬಲಿ; ಉಗ್ರರೇ ಕೊಂದರೇ?
ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಸಮರವು (Israel Palestine War) ತಾರಕಕ್ಕೇರಿದೆ. ಗಾಜಾದಲ್ಲಿರುವ ಆಸ್ಪತ್ರೆ (Gaza Hospital) ಮೇಲೆ ರಾಕೆಟ್ ದಾಳಿ ಮಾಡಲಾಗಿದ್ದು, ಸುಮಾರು 500 ಜನ ಮೃತಪಟ್ಟಿದ್ದಾರೆ. ಇದು ಇಸ್ರೇಲ್ ಮಾಡಿದ ದಾಳಿ ಎಂದು ಪ್ಯಾಲೆಸ್ತೀನ್ ಹೇಳಿದರೆ, ಇದು ಉಗ್ರರೇ ಮಾಡಿದ ದಾಳಿ ಮಿಸ್ ಫೈರ್ ಆಗಿದೆ ಎಂದು ಇಸ್ರೇಲ್ ಹೇಳಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಅಮೆರಿಕ ಮಾಡಿದ ತಪ್ಪನ್ನೇ ನೀವೂ ಮಾಡಬೇಡಿ, ಸಿಟ್ಟಿನ ಕೈಗೆ ಬುದ್ಧಿ ಕೊಡ್ಬೇಡಿ! ಇಸ್ರೇಲ್‌ಗೆ ಬೈಡೆನ್ ಕಿವಿಮಾತು
5. Ayudha Puja: ವಿಧಾನಸೌಧದಲ್ಲಿ ಅರಿಶಿನ-ಕುಂಕುಮ ಬಳಸಬೇಡಿ; ಸರ್ಕಾರದಿಂದ ವಿವಾದಾತ್ಮಕ ಸುತ್ತೋಲೆ! ಆಯುಧ ಪೂಜೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ವಿವಾದಾತ್ಮಕ ಸುತ್ತೋಲೆ ಹೊರಡಿಸಿರುವುದು ಕಂಡುಬಂದಿದೆ. ವಿಧಾನಸೌಧ, ವಿಕಾಸಸೌಧ ಹಾಗೂ ಎಂಎಸ್ ಬಿಲ್ಡಿಂಗ್‌ನಲ್ಲಿ ಆಯುಧ ಪೂಜೆ (Ayudha Puja) ವೇಳೆ ಕೆಲ ಪೂಜಾ ಸಾಮಗ್ರಿಗೆ ನಿರ್ಬಂಧ ವಿಧಿಸಲಾಗಿದ್ದು, ಅರಿಶಿನ-ಕುಂಕುಮ, ಬೂದು ಕುಂಬಳಕಾಯಿ ಹಾಗೂ ದೀಪಗಳನ್ನು ಹೇಗೆ ಬಳಸಬೇಕೆಂದು ಸೂಚಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. Shivamogga Terror : ಉಡುಪಿ ಮಠ, ಚಿಕ್ಕಮಗಳೂರು ಬಿಜೆಪಿ ಕಚೇರಿ ಸ್ಫೋಟಕ್ಕೆ ಸಂಚು?
ಒಂದು ವೇಳೆ ಆವತ್ತು ಮಹಮ್ಮದ್ ಶಾರಿಕ್ ರಿಕ್ಷಾದಲ್ಲಿ ತೆಗೆದುಕೊಂಡು ಹೊರಟಿದ್ದ ಕುಕ್ಕರ್ ಬಾಂಬ್ (Cooker Bomb) ನಿಗದಿಯಂತೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ (Kadri Manjunatheshwara temple) ಬಳಿ ಸ್ಫೋಟವಾಗುತ್ತಿದ್ದರೆ, ಇಷ್ಟು ಹೊತ್ತಿಗೆ ಉಡುಪಿ ಶ್ರೀ ಕೃಷ್ಣ ಮಠ ಮತ್ತು ಚಿಕ್ಕಮಗಳೂರಿನ ಬಿಜೆಪಿ ಕಚೇರಿಯೂ ಸ್ಫೋಟವಾಗುತ್ತಿತ್ತು ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7.Actor Prabhas: ಹಸೆಮಣೆ ಏರಲಿದ್ದಾರೆ ನಟ ಪ್ರಭಾಸ್; ನಟನ ದೊಡ್ಡಮ್ಮನಿಂದ ಗುಡ್‌ನ್ಯೂಸ್!
ಟಾಲಿವುಡ್ ನಟ ಪ್ರಭಾಸ್ ತಮ್ಮ ಆದಿಪುರುಷ್ ಸಹನಟಿ ಕೃತಿ ಸನೂನ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದೀಗ ಪ್ರಭಾಸ್, ದೊಡ್ಡಮ್ಮ ಶ್ಯಾಮಲಾ ಅವರು ನವರಾತ್ರಿ ಉತ್ಸವದ ಸಂದರ್ಭದ ಪೂಜೆಯಲ್ಲಿ ಭಾಗಿಯಾಗಿದ್ದ ವೇಳೆ ಪ್ರಭಾಸ್ ಮದುವೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ನಂ.1 ಸ್ಥಾನಕ್ಕೆ ಗಿಲ್-ಬಾಬರ್ ಪೈಪೋಟಿ; ಭಾರಿ ಜಿಗಿತ ಕಂಡ ರೋಹಿತ್ ಶ್ರೇಯಾಂಕ
ಐಸಿಸಿ ನೂತನ ಏಕದಿನ(ICC Odi Ranking) ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಆಟಗಾರರು ಉತ್ತಮ ಪ್ರಗತಿ ಸಾಧಿಸಿದ್ದಾರೆ. ನಾಯಕ ರೋಹಿತ್ ಶರ್ಮ(719 ರೇಟಿಂಗ್ ಅಂಕ) ಅವರು 5 ಸ್ಥಾನಗಳ ಏರಿಕೆ ಕಂಡು 6ನೇ ಸ್ಥಾನಕ್ಕೇರಿದ್ದಾರೆ. ನಂ.1 ಸ್ಥಾನಕ್ಕಾಗಿ ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭಮನ್ ಗಿಲ್ ಮತ್ತು ಪಾಕ್ ನಾಯಕ ಬಾಬರ್ ಅಜಂ ಮಧ್ಯೆ ಪೈಪೋಟಿ ಏರ್ಪಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9.Raja Marga: ನಾವು ಬೆಳೆಯುತ್ತ ಹೋಗಬೇಕು–ಒಳಗಿಂದ ಹೊರಗೆ! Self Empowermentಗೆ 12 ಸೂತ್ರ!
ನಮ್ಮೊಳಗಿನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಂಡು ಮುಂದಡಿ ಇಡಬೇಕಾಗುತ್ತದೆ. ನಮ್ಮ ಶಕ್ತಿಯನ್ನು ನಾವೇ ಅರಿತು ಬೆಳೆಸುವುದೇ Self Empowerment. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ\
10.ತೂಕ ಮಿತಿ ಮೀರಿತು! ಲಗೇಜಿನಿಂದ 100 ಗ್ರಾಂ ಕಡಿಮೆ ಮಾಡಿ ಅಂದ್ರು ವಿಮಾನಯಾನ ಸಂಸ್ಥೆ ಸಿಬ್ಬಂದಿ!
ಬೆಂಗಳೂರಿಂದ (Bengaluru) ದಿಲ್ಲಿಗೆ (Delhi) ಹೊರಟಿದ್ದ ಮಹಿಳೆಯೊಬ್ಬಳ ಲಗೇಜ್, ಅನುಮತಿಸಲಾದ ತೂಕಕ್ಕಿಂತ ಕೇವಲ 100 ಗ್ರಾಮ್‌ವಷ್ಟೇ ಹೆಚ್ಚಿತ್ತು. ಆದರೆ, ವಿಮಾನ ನಿಲ್ದಾಣದಲ್ಲಿನ ಆಟೋಮೆಟೇಟ್ ಬ್ಯಾಗೇಜ್, ಆಕೆಯ ಲಗೇಜ್ ಅನ್ನು ಸ್ವೀಕರಿಸಲಿಲ್ಲ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ