ಬೆಂಗಳೂರು: ಶನಿವಾರ ಇಡೀ ದೇಶದಲ್ಲಿ ಹಬ್ಬದ ವಾತಾವರಣವಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ೭೨ನೇ ಜನುಮ ದಿನವನ್ನು ದೇಶಾದ್ಯಂತ ಹಲವು ಜನಹಿತ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಮೋದಿ ಅವರ ಜನುಮದಿನದಂದೇ ನಬೀಬಿಯಾದಿಂದ ಎಂಟು ಚೀತಾಗಳು ಬಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನವನ್ನು ಸೇರಿಕೊಂಡವು. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವುಗಳು ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದರೆ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಸ್ವಾತಂತ್ರ್ಯೋತ್ಸವ ಆಚರಿಸಿಕೊಂಡವು. ಇದರ ನಡುವೆ ಭಾರತ್ ಜೋಡೋ ಕಾರ್ಯಕ್ರಮದ ನಡುವೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಜಟಾಪಟಿ… ಹೀಗೆ, ರಾಜಕೀಯ, ನ್ಯಾಯಾಲಯ, ಕ್ರಿಕೆಟ್ ಸೇರಿದಂತೆ ನಾನಾ ವಲಯಗಳಲ್ಲಿ ಘಟಿಸಿದ ದಿನದ ಪ್ರಮುಖ ಗುಚ್ಛ ವಿಸ್ತಾರ TOP 10 NEWS.
೧. ದೇಶಾದ್ಯಂತ ಮೋದಿ ಜನುಮ ದಿನ ಸಂಭ್ರಮ: ನೆಚ್ಚಿನ ನಾಯಕನಿಗೆ ಅಭಿಮಾನದ ಹೊಳೆ
ಪ್ರಧಾನಿ ನರೇಂದ್ರ ಮೋದಿ ಅವರ ೭೨ನೇ ಜನುಮ ದಿನವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದಂದು ಜನಹಿತ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದರು. ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಶುಭಾಶಯ ಸಲ್ಲಿಸಿದರು. ಮೋದಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ vistaranews.com ಮೋದಿ ಅವರ ಜೀವನ, ಸಾಧನೆಗೆ ಸಂಬಂಧಿಸಿ ಹಲವು ಲೇಖನಗಳನ್ನು ಪ್ರಕಟಿಸಿದೆ. ಮೋದಿ ಜನುಮದಿನದ ವಿಶೇಷ ಲೇಖನ ಮತ್ತು ವರದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://vistaranews.com/attribute-category/modi-birthday/
೨. ನಮೀಬಿಯಾದಿಂದ ಬಂದ ೮ ಚಿರತೆಗಳು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟ್ರಿ
ನಮೀಬಿಯಾದಿಂದ ಭಾರತಕ್ಕೆ ಕರೆತರಲಾದ ಮೂರು ಗಂಡು, ಐದು ಹೆಣ್ಣು ಚೀತಾಗಳನ್ನು ಶನಿವಾರ ಮಧ್ಯಪ್ರವೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಚಿರತೆಗಳು ಒಂದೊಂದಾಗಿ ಪಂಜರದಿಂದ ಹೊರಬಿದ್ದು ರಾಷ್ಟ್ರೀಯ ಉದ್ಯಾನವನದಲ್ಲಿ ಹೆಜ್ಜೆಯಿಡುತ್ತ ಹೋಗುವುದನ್ನು ನರೇಂದ್ರ ಮೋದಿ ವೀಕ್ಷಿಸಿದ್ದಷ್ಟೇ ಅಲ್ಲ. ಫೋಟೋ ಕ್ಲಿಕ್ಕಿಸಿ ಖುಷಿಪಟ್ಟರು. ಚೀತಾಗಳ ಪ್ರವೇಶ ಸಂಭ್ರಮ, ಚೀತಾ ಮತ್ತು ಚಿರತೆಗಳ ನಡುವಿನ ವ್ಯತ್ಯಾಸ ಸೇರಿದಂತೆ ಕುತೂಹಲಕಾರಿ ಮಾಹಿತಿಗಳಿಗಾಗಿ ಈ ಲಿಂಕ್‌ಗಳನ್ನು ಕ್ಲಿಕ್ ಮಾಡಿ:
೩. ಭಾರತ್ ಜೋಡೊ ಯಾತ್ರೆ ಮಧ್ಯೆಯೇ ಸಿದ್ದು- ಡಿಕೆಶಿ ಸಂಘರ್ಷ ಉಲ್ಬಣ
ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡರಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಶೀತಲ ಸಮರ ಸ್ಫೋಟಕ ಹಂತಕ್ಕೆ ತಲುಪುವ ಸಾಧ್ಯತೆ ಕಾಣಿಸುತ್ತಿದೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಶ್ರೇಯಸ್ಸು ಪಡೆಯುವ ವಿಚಾರದಲ್ಲಿ ಸಿದ್ದು-ಡಿಕೆಶಿ ಬಣಗಳ ನಡುವೆ ಸಂಘರ್ಷ ಉದ್ಧವಿಸಿರುವುದು ಸ್ಪಷ್ಟವಾಗಿಯೇ ಗೋಚರಿಸುತ್ತಿದೆ. ವಿವರ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೪. ಬಳ್ಳಾರಿ ವಿಮ್ಸ್ ಪ್ರಕರಣ: ಸುಧಾಕರ್-ಸಿದ್ದರಾಮಯ್ಯ ಜಟಾಪಟಿ
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಸಾವಿನ ಪ್ರಕರಣಗಳು ರಾಜಕೀಯ ಸ್ವರೂಪ ಪಡೆದಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಪರಸ್ಪರ ವಾಗ್ಯುದ್ಧ ನಡೆಸಿಕೊಂಡಿದ್ದಾರೆ. ಡಾ. ಸುಧಾಕರ್ ಅವರು ಭಾನುವಾರ ವಿಮ್ಸ್‌ಗೆ ಹೋಗುವುದಾಗಿ ಹೇಳಿದ್ದಾರೆ. ಈ ನಡುವೆ, ಬಳ್ಳಾರಿಯ ಇಬ್ಬರು ಶಾಸಕರಾದ ಸೋಮಶೇಖರ ರೆಡ್ಡಿ ಮತ್ತು ಬಿ. ನಾಗೇಂದ್ರ ಅವರು ಕೂಡಾ ಸುಧಾಕರ್ ಮೇಲೆ ಮುಗಿಬಿದ್ದಿದ್ದಾರೆ.
ನಿರ್ದೇಶಕರ ನೇಮಕಾತಿ ವಿಚಾರದಲ್ಲಿ ಸೋಮಶೇಖರ ರೆಡ್ಡಿ ಹೇಳಿದ್ದೇನು? ಮತ್ತು ಸುಧಾಕರ್- ಸಿದ್ಧರಾಮಯ್ಯ ಜಟಾಪಟಿಯ ವರದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
೫. ನೂತನ ಲಾಜಿಸ್ಟಿಕ್ಸ್ ನೀತಿಗೆ ಮೋದಿ ಚಾಲನೆ, ಏನಿದು ನೀತಿ? ಏನಿದೆ ಉಪಯೋಗ?
ಜನ್ಮದಿನದಂದೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸರಕು ಸಾಗಣೆ ವ್ಯವಸ್ಥೆ(ಲಾಜಿಸ್ಟಿಕ್ಸ್)ಯಲ್ಲಿ ಮಹತ್ವದ ಬದಲಾವಣೆ ತರುವ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ (Logistics Policy)ಗೆ ಚಾಲನೆ ನೀಡಿದ್ದಾರೆ. ಇದರಿಂದ ದೇಶದಲ್ಲಿ ಸುಲಭವಾಗಿ ಸರಕು ಸಾಗಣೆ ಮಾಡಲು ಸಾಧ್ಯವಾಗಲಿದೆ. ಸುಲಭವಾಗಿ ರಫ್ತು ಮಾಡಲೂ ಸಾಧ್ಯವಾಗಲಿದೆ. ವಿವರ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೬. ಬೆಂಗಳೂರಿನಲ್ಲಿ ಟೋಯಿಂಗ್ ಪದ್ಧತಿ ಮರು ಜಾರಿ ಇಲ್ಲ ಎಂದ ಸರಕಾರ
ಬೆಂಗಳೂರು ನಗರದಲ್ಲಿ ಸ್ಥಗಿತಗೊಳಿಸಲಾಗಿರುವ ಟೋಯಿಂಗ್ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸುವ ಯಾವುದೇ ಪ್ರಸ್ತಾವನೆ, ಸದ್ಯಕ್ಕೆ, ಸರಕಾರದ ಮುಂದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸಾರ್ವಜನಿಕ ಸ್ನೇಹಿ ಮತ್ತು ಸುಗಮ ವಾಹನ ಪಾರ್ಕಿಂಗ್ ವ್ಯವಸ್ಥೆ, ಜಾರಿಗೊಳಿಸುವ ಬಗ್ಗೆ, ವಿಸ್ತೃತವಾದ ಚರ್ಚೆ ಹಾಗೂ ತಜ್ಞರ ಸಲಹೆ ಪಡೆದು, ತೀರ್ಮಾನ ಕೈಗೊಳ್ಳಲಾಗುವುದು ಎಂದರು ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
೭. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ಸಂಭ್ರಮ
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ 1948ರ ಸೆಪ್ಟೆಂಬರ್ 17ರಂದು ಹೈದರಾಬಾದ್ ಸಂಸ್ಥಾನದಿಂದ ಸ್ವಾತಂತ್ರ್ಯ ಸಿಕ್ಕ ಹಿನ್ನೆಲೆಯಲ್ಲಿ ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಅದ್ಧೂರಿಯಾಗಿ ಕಲ್ಯಾಣ ಕರ್ನಾಟಕ ಉತ್ಸವ ನಡೆಯಿತು. ಈ ಭಾಗದ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಂದಿನ ವರ್ಷದಿಂದ 5000 ಕೋಟಿ ರೂ. ಒದಗಿಸಲಾಗುವುದು ಎಂದರು. ಫೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
೮. ಒಂದೇ ʻಸತ್ಯʼದೆಡೆಗೆ ಚಲಿಸಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಭಿನ್ನ ಎಣಿಸುವುದು ಅಪರಾಧವಲ್ಲವೇ?
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರದ್ದೂ ಒಂದೇ ಧ್ಯೇಯವಾಗಿತ್ತು. ಹೀಗಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ತಮ್ಮ ಸಿದ್ಧಾಂತಕ್ಕೆ ಸೀಮಿತವಾಗಿ ಸ್ವೀಕರಿಸುವುದು, ತಿರಸ್ಕರಿಸುವುದು ಸಲ್ಲ. ಸ್ವತಃ ಅವರಲ್ಲೇ ಇಲ್ಲದ ಭಿನ್ನಾಭಿಪ್ರಾಯಗಳನ್ನು ನಾವು ಕೃತಕವಾಗಿ ಸೃಷ್ಟಿಸಿ ಅವಮಾನಿಸುತ್ತ ತಿರುಗುವುದು ಸರಿಯಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರು ಮತ್ತು ಸಿಇಒ ಹರಿಪ್ರಕಾಶ್ ಕೋಣೆಮನೆ ತಮ್ಮ ಸವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
೯. ಸ್ಥಳೀಯ ಭಾಷೆ ಮಾತನಾಡುವವರನ್ನೇ ನೇಮಕ ಮಾಡಿಕೊಳ್ಳಿ, ಬ್ಯಾಂಕ್‌ಗಳಿಗೆ ನಿರ್ಮಲಾ ಸೂಚನೆ
ನವದೆಹಲಿ: ದೇಶದ ಕರ್ನಾಟಕ ಸೇರಿ ಹಲವು ರಾಜ್ಯಗಳ ಬ್ಯಾಂಕ್‌ಗಳಲ್ಲಿ ಹಿಂದಿ ಭಾಷಿಕರ ಹಾವಳಿ ಜಾಸ್ತಿಯಾಗಿದೆ, ಇದರಿಂದ ಸ್ಥಳೀಯರು ಬ್ಯಾಂಕ್‌ಗಳಲ್ಲಿ ವ್ಯವಹರಿಸುವುದು ಕಷ್ಟವಾಗಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ “ಬ್ಯಾಂಕುಗಳು ಸ್ಥಳೀಯ ಭಾಷೆ ಮಾತನಾಡುವವರನ್ನೇ ಸಿಬ್ಬಂದಿಯಾಗಿ ನೇಮಿಸಿಕೊಳ್ಳಬೇಕು” ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್‌ಗಳಿಗೆ ಸೂಚಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೧೦. ಕ್ರಿಕೆಟ್‌ನಲ್ಲೂ ಬರಲಿದೆ ಬದಲಿ ಆಟಗಾರರ ಅವಕಾಶ: ಏನಿದು ಇಂಪ್ಯಾಕ್ಟ್ ಪ್ಲೇಯರ್?
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ಇನ್ನಿತರ ದೇಶಿ ಕ್ರಿಕೆಟ್‌ನಲ್ಲಿ ಹೊಸ ನಿಯಮವೊಂದನ್ನು ಬಿಸಿಸಿಐ ಜಾರಿ ಮಾಡಿದೆ. ಅದಕ್ಕೆ ಇಂಪ್ಯಾಕ್ಟ್ ಪ್ಲೇಯರ್ (Impact Player) ಎಂದು ಹೆಸರಿಡಲಾಗಿದೆ. ಫುಟ್ಬಾಲ್, ರಗ್ಬಿ ಮತ್ತಿತರ ಕ್ರೀಡೆಗಳಲ್ಲಿರುವ ಆಟದ ಮಧ್ಯೆ ಆಟಗಾರರನ್ನು ಬದಲಿಸುವ ಅವಕಾಶ ಇನ್ನು ಮುಂದೆ ದೇಸಿ ಕ್ರಿಕೆಟ್‌ನಲ್ಲಿ ಸಿಗಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ